Advertisements

ಗೆದ್ದು ಸೋತ ನವೀನ್ ಸಜ್ಜುಗೆ ಕಿಚ್ಚು ಸುದೀಪ್ ಕೊಟ್ಟರು ಮಹಾ ಗಿಫ್ಟ್

ಬಿಗ್ ಬಾಸ್ ಸೀಸನ್ ನಲ್ಲಿ ನವೀನ್ ಸಜ್ಜು ಗೆಲ್ಲುತ್ತಾರೆ ಅನ್ನುವ ನಿರೀಕ್ಷೆ ಇತ್ತು. ಆದರೆ ಶಶಿಕುಮಾರ್ ಗೆಳೆಯರ ಬಳಗ ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಕೆಲಸ ಸಿಕ್ಕಾಪಟ್ಟೆ ಕೆಲಸ ಮಾಡಿದೆ.

ಶಶಿಕುಮಾರ್ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಚಾರ ಕೈಗೊಂಡ ಕಾರಣ 50 ಲಕ್ಷ ರೂಪಾಯಿ ನಿಧಿಯನ್ನು ಅವರು ತನ್ನದಾಗಿಸಿಕೊಂಡಿದ್ದಾರೆ.

ಹಾಗಂತ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟ ನವೀನ್ ಸಜ್ಜು ಅವರನ್ನು ಕನ್ನಡಿಗರು ಕೈ ಬಿಟ್ಟಿರಬಹುದು. ಕಿಚ್ಚ ಸುದೀಪ್ ಕೈ ಬಿಟ್ಟಿಲ್ಲ. ಅಭಿನಯ ಚಕ್ರವರ್ತಿ ನವೀನ್ ಅವರ ಕೈ ಮೇಲೆ ಎತ್ತಿಲ್ಲ. ಹಾಗಂತ ಕೈ ಬಿಟ್ಟಿಲ್ಲ.

ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟ ನವೀನ್ ಅವರಿಗೆ ಸುದೀಪ್ ತಮ್ಮ ಖಾತೆಯಿಂದ ದೊಡ್ಡ ಮೊತ್ತದ ಬಹುಮಾನವೊಂದನ್ನು ನೀಡಲಿದ್ದಾರೆ.

ಜೊತೆಗೆ ನವೀನ್ ಕನಸಿನ ಸ್ಟುಡಿಯೋ ನಿರ್ಮಾಣಕ್ಕೂ ಸುದೀಪ್ ಸಹಾಯ ಮಾಡಲಿದ್ದಾರೆ. ಇದನ್ನು ಸುದೀಪ್ ಅವರೇ ಘೋಷಿಸಿದ್ದು, ಜಗತ್ತು ತಿರುಗಿ ನೋಡುವಂತ ಸ್ಟುಡಿಯೋ ನಿರ್ಮಾಣಕ್ಕೆ ಸುದೀಪ್ ನವೀನ್ ಅವರಿಗೆ ಸಹಾಯ ಮಾಡಲಿದ್ದಾರೆ.

ನವೀನ್ ಸ್ಟುಡಿಯೋ ಕಟ್ಟುವ ಸಮಯದಲ್ಲಿ ಪ್ರಿಯಾ ಸುದೀಪ್ ಅವರೇ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.

ಹಿಂದಿನ ಸೀಸನ್ ನಲ್ಲಿ ಕೀರ್ತಿ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟ ವೇಳೆ, ಕನ್ನಡ ಶಾಲೆಗಳ ಉಳಿವಿನ ಹೋರಾಟಕ್ಕೆ ಕಿರಿಕ್ ಕೀರ್ತಿ ಜೊತೆ ಸುದೀಪ್ ಕೈ ಜೋಡಿಸಿದ್ದರು. ಇದೀಗ ನವೀನ್ ಅನ್ನುವ ಹಳ್ಳಿಯ ಮುಗ್ಧ ಪ್ರತಿಭೆಯನ್ನು ಬೆಳೆಸಲು ಸುದೀಪ್ ಪಣ ತೊಟ್ಟಿದ್ದಾರೆ.

Advertisements

4 Comments on “ಗೆದ್ದು ಸೋತ ನವೀನ್ ಸಜ್ಜುಗೆ ಕಿಚ್ಚು ಸುದೀಪ್ ಕೊಟ್ಟರು ಮಹಾ ಗಿಫ್ಟ್

  1. Pingback: ಸೀತಾ ವಲ್ಲಭನಿಗೆ ಕೂಡಿ ಬಂದ ಕಂಕಣ ಬಲ – ರಕ್ಷಿತಾ ಜೊತೆ ಸಪ್ತಪದಿ ತುಳಿಯಲು ಮುಂದಾದ ಜಗನ್ – torrentspree

  2. Pingback: ರಶ್ಮಿTIPS :ಬಿಗ್ ಬಾಸ್ ಗೆಲ್ಲಲು ಮಾಡಬೇಕಾಗಿರುವುದೇನು..? – torrentspree

  3. Pingback: ನಾಗಮಂಡಲ ಖ್ಯಾತಿಯ ವಿಜಯಲಕ್ಷ್ಮಿ ಸಹಾಯಕ್ಕೆ ಕಿಚ್ಚ ಸುದೀಪ್ – torrentspree

  4. Pingback: ಸರ್ಕಾರಿ ಶಾಲಾ ಮಕ್ಕಳಿಗೆ ಸ್ಕೂಲ್ ಶೂ ತೊಡಿಸಿದ ಕಿಚ್ಚ ಸುದೀಪ್ – ವಿಡಿಯೋ ವೈರಲ್ – torrentspree

Leave a Reply

%d bloggers like this: