Advertisements

ಸಿದ್ದರಾಮಯ್ಯ ನಮ್ಮ ಮುಖ್ಯಮಂತ್ರಿ : ಸಮ್ಮಿಶ್ರ ಸರ್ಕಾರದ ಸಚಿವರಿಂದ ಇದೆಂಥ ಮಾತು ಸ್ವಾಮಿ

ನಮಗೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ. ನಮ್ಮ ಕಷ್ಟಗಳು ಏನೇ ಇದ್ದರೂ ನಾವು ಅವರ ಬಳಿಯೇ ಹೇಳಿಕೊಳ್ಳುತ್ತೇವೆ. ನಾನು ಮೂರು ಬಾರಿ ಶಾಸಕನಾಗಲು ಸಿದ್ದರಾಮಯ್ಯ ಅವರೇ ಕಾರಣ ಎಂದು ಹಿಂದುಳಿದ ಕಲ್ಯಾಣ ಇಲಾಖೆ ಸಚಿವ ಪುಟ್ಟರಂಗ ಶೆಟ್ಟಿ ಹೇಳಿದ್ದಾರೆ.

ನಗರದ ನೈಸ್ ರಸ್ತೆಯ ಸೋಂಪುರ ಗೇಟ್ ಸಮೀಪದ ಜಟ್ಟಿಗರಹಳ್ಳಿಯಲ್ಲಿ ನಡೆದ ನೂತನ ಕನಕ ಸಮುದಾಯ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯ ಅವರೇ ನಿಜವಾದ ಮಣ್ಣಿನ ಮಗ ಎಂದು ಒತ್ತಿ ಹೇಳಿದರು.

ಈ ಮೂಲಕ ದೇವೇಗೌಡರಿಗೆ ಜನರೇ ಕೊಟ್ಟಿರುವ ಮಣ್ಣಿನ ಮಗ ಅನ್ನುವ ಬಿರುದಿಗೆ ಟಾಂಗ್ ಕೊಟ್ಟರು.

ಯಾರು ಏನೇ ಹೇಳಿದರೂ ಶಾಸಕ ಸುಧಾಕರ್ ಹೇಳಿದ್ದಂತೆ ನಮಗೆ ಸಿದ್ದರಾಮಯ್ಯ ಅವರೇ ಸಿಎಂ ಎಂದು ತಮ್ಮ ಭಾಷಣದಲ್ಲಿ ಪದೇ ಪದೇ ಹೇಳಿದ ಸಚಿವ ಪುಟ್ಟರಂಗ ಶೆಟ್ಟಿ ಕುಮಾರಸ್ವಾಮಿ ಸಿಎಂ ಅನ್ನುವುದನ್ನು ಹೇಳಲೇ ಇಲ್ಲ.

ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾದ ಮೇಲೆ ಸಂಪುಟದ ಬಾಸ್ ಎಂದು ಕರೆಸಿಕೊಳ್ಳುವವರು ಮುಖ್ಯಮಂತ್ರಿಗಳು. ಆದರೆ ಸಂಪುಟದ ಸಚಿವರ ಮಾತುಗಳನ್ನು ಕೇಳಿದ ಮೇಲೆ ನಿಜಕ್ಕೂ ಅಚ್ಚರಿಯಾಗುತ್ತದೆ.

ಸಿದ್ದರಾಮಯ್ಯ ಅವರು ಮಾಜಿಯಾದ ಮೇಲೂ ಕಾಂಗ್ರೆಸ್ ಶಾಸಕರಿಗೆ ಅವರೇ ಮುಖ್ಯಮಂತ್ರಿ ಅರ್ಥವೇನು. ಇವರನ್ನು ಸಚಿವರಾಗಿ ಪಡೆದ ಕರ್ನಾಟಕ ಧನ್ಯ, ಕರುನಾಡು ಪಾವನವಾಯ್ತು.

Advertisements

One Comment on “ಸಿದ್ದರಾಮಯ್ಯ ನಮ್ಮ ಮುಖ್ಯಮಂತ್ರಿ : ಸಮ್ಮಿಶ್ರ ಸರ್ಕಾರದ ಸಚಿವರಿಂದ ಇದೆಂಥ ಮಾತು ಸ್ವಾಮಿ

  1. Pingback: ದೇವೇಗೌಡರ ಆರೋಗ್ಯ ವಿಚಾರಿಸಿದ ಪ್ರಥಮ್ :ಒಳ್ಳೆ ಹುಡುಗನ ಕಂಡು ಮಾಜಿ ಪಿಎಂ ಹೇಳಿದ್ದೇನು..? – torrentspree

Leave a Reply

%d bloggers like this: