Advertisements

ಬಿಡದಿ to ಪರಪ್ಪನ ಆಗ್ರಹಾರ : ಮಾಡಿದ ತಪ್ಪಿಗೆ ಜೈಲು ಸೇರ್ತಾನ ಆ್ಯಂಡಿ

ಬಿಗ್ ಬಾಸ್ ಸೀಜನ್ 6ರಲ್ಲಿ ತನ್ನ ವಿಭಿನ್ನ ವ್ಯಕ್ತಿತ್ವದಿಂದ ಗುರುತಿಸಿಕೊಂಡ ಹಾಗೂ ಪ್ರೇಕ್ಷಕರ ಗಮನ ಸೆಳೆದಿರುವ ಆ್ಯಂಡಿಗೆ ಸಂಕಷ್ಟವೊಂದು ಎದುರಾಗಿದೆ. ಮಹಾಮನೆಯಲ್ಲಿ ಮನೆಯಲ್ಲಿ ಮಾಡಿದ ಎಡವಟ್ಟಿನ ಕಾರಣಕ್ಕೆ ಆ್ಯಂಡ್ರೂ ಜೈಪಾಲ್ ವಿರುದ್ಧ ಬಿಡದಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಡಿ. 26 ರಂದು ಪ್ರಸಾರವಾದ ಸಂಚಿಕೆಯಲ್ಲಿ ಆ್ಯಂಡಿ ಇತರ ಸ್ಪರ್ಧಿಗಳ ಮೇಲೆ ಹಾನಿಕಾರಕ ಪರ್ಪ್ಯೂಮ್ ಸ್ಪ್ರೇ ಮಾಡಿದ್ದರು. ಯಾವುದೇ ಸುಗಂಧ ದ್ರವ್ಯವನ್ನು ಮಿತಿಗಿಂತಲೂ ಹೆಚ್ಚು ಬಳಸಿದರೆ ಅದರಿಂದ ಕಣ್ಣು, ಶ್ವಾಸಕೋಶಗಳಿಗೆ ತೊಂದರೆಯಾಗುತ್ತದೆ.

ಟಾಸ್ಕ್ ನಲ್ಲಿ ಆ್ಯಂಡಿ ತಾನು ಗೆಲ್ಲಲೇಬೇಕೆಂಬ ಉದ್ದೇಶದಿಂದ ಇತರೆ ಸ್ಪರ್ಧಿಗಳ ಕಣ್ಣಿಗೆ ಸ್ಪ್ರೇ ಮಾಡಿ ಇತರ ಸ್ಪರ್ಧಿಗಳಿಗೆ ಚಿತ್ರಹಿಂಸೆ ನೀಡಿದ್ದಾರೆ. ಹೀಗಾಗಿ ಕೂಡಲೇ ಆ್ಯಂಡಿಯನ್ನ ಹೊರಗೆ ತಂದು ಕ್ರಮ ಜರುಗಿಸಬೇಕು ಎಂದು ಫ್ಯೂಚರ್​ ಇಂಡಿಯಾ ಆರ್ಗನೈಸೇಷನ್​ ಎಂಬ ಸಂಸ್ಥೆಯ ಪರವಾಗಿ ಆಡುಗೋಡಿಯ ರೋಲ್ಯಾಂಡ್ ರೋಲ್ಸ್ ಎಂಬುವವರು ಬಿಡದಿ ಠಾಣೆಗೆ ದೂರು ನೀಡಿದ್ದರು.

ಬಳಿಕ ಬಿಗ್ ಬಾಸ್ ಮನೆಗೆ ಭೇಟಿ ಕೊಟ್ಟ ಪೊಲೀಸರು ತನಿಖೆ ಕೂಡಾ ನಡೆಸಿದ್ದರು ಎನ್ನಲಾಗಿದೆ. ಆದರೆ ಆ್ಯಂಡಿ ವಿರುದ್ಧ ಯಾವುದೇ FIR ದಾಖಲಾಗಿಲ್ಲ. ಬದಲಾಗಿ ಕೇವಲ NCR ಮಾತ್ರ ದಾಖಲಾಗಿದೆ.

ಈ ನಡುವೆ ಆ್ಯಂಡಿ ವಿರುದ್ಧ ದೂರು ದಾಖಲಿಸಿದ ರೋಲ್ಯಾಂಡ್ ರೋಲ್ಸ್, ಬಿಡದಿ ಪೊಲೀಸ್ ಠಾಣಾಧಿಕಾರಿ ದೂರಿಗೆ ಸರಿಯಾಗಿ ಸ್ಪರ್ಧಿಸಿಲ್ಲ ಎಂದು ಅವರ ಮೇಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಅಲ್ಲೂ ನ್ಯಾಯ ಸಿಕ್ಕಿಲ್ಲ ಅನ್ನುವ ಕಾರಣಕ್ಕೆ ಆ್ಯಂಡಿ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗಳಿಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.

ಒಂದು ವೇಳೆ ಪೊಲೀಸ್ ಹಿರಿಯ ಅಧಿಕಾರಿಗಳಿಗೆ ದೂರು ತಲುಪಿದರೆ ಆ್ಯಂಡಿಗೆ ಸಂಕಷ್ಟ ಕಾದಿದೆ.

Advertisements

One Comment on “ಬಿಡದಿ to ಪರಪ್ಪನ ಆಗ್ರಹಾರ : ಮಾಡಿದ ತಪ್ಪಿಗೆ ಜೈಲು ಸೇರ್ತಾನ ಆ್ಯಂಡಿ

  1. Pingback: ರಶ್ಮಿTIPS :ಬಿಗ್ ಬಾಸ್ ಗೆಲ್ಲಲು ಮಾಡಬೇಕಾಗಿರುವುದೇನು..? – torrentspree

Leave a Reply

%d bloggers like this: