Advertisements

ಬಿಗ್ ಬಾಸ್ ಕೈ ಕೊಟ್ಟರೂ… ಕನ್ನಡಿಗರು ಧನ್ ರಾಜ್ ಕೈ ಬಿಡಲಿಲ್ಲ

ಕನ್ನಡ ಕಿರುತೆರೆಯ ಬಹು ನಿರೀಕ್ಷಿತ ಬಿಗ್ ಬಾಸ್ ಸೀಸನ್ ಈ ಬಾರಿ ಕೊನೆಯ ಹಂತಕ್ಕೆ ತಲುಪಿದೆ. ಈ ಬಾರಿ ಧನ್ ರಾಜ್ ಗೆಲ್ಲುತ್ತಾರೆ, ಗೆದ್ದಿಲ್ಲವಾದರೂ ಕನಿಷ್ಟ ಫೈನಲ್ ನಲ್ಲಿ ಇರುತ್ತಾರೆ ಅನ್ನುವುದು ಎಲ್ಲರ ನಿರೀಕ್ಷೆಯಾಗಿತ್ತು.

ಆದರೆ ಧನ್ ರಾಜ್ ಗೆದ್ದರೆ ಚಾನೆಲ್ ಗೆ ನಯಾ ಪೈಸೆ ಲಾಭವಿಲ್ಲ. ಅವರನ್ನು ವರ್ಷಪೂರ್ತಿ ಕುಣಿಸಲಾಗುವುದಿಲ್ಲ, ಬೇರೆ ಬೇರೆ ಶೋ ಗಳಲ್ಲಿ ಬಳಸಲಾಗುವುದಿಲ್ಲ ಅನ್ನುವ ಕಾರಣದಿಂದ ಮಿಡ್ ನೈಟ್ ಹೊರಗಟ್ಟುವ ಟಾಸ್ಕ್ ಮೂಲಕ ಮಹಾಮನೆಯಿಂದ ಹೊರಗೆ ದಬ್ಬಲಾಗಿದೆ.

ನವೀನ್ ಅವರನ್ನು ಗೆಲ್ಲಿಸುವುದು ಎಲ್ಲಾ ಪಕ್ಕಾ ಆಗಿದೆ. ( ಕಲರ್ಸ್ ವಾಹಿನಿಯವರು ಬೇಕಿದ್ದರೆ ಜನ ವೋಟ್ ಗಳನ್ನು ಬಹಿರಂಗಪಡಿಸಲಿ)

ಹಾಗಂತ ಧನ್ ರಾಜ್ ಅವರಿಗೆ ಮೋಸವಾಯ್ತೇ ಖಂಡಿತಾ ಇಲ್ಲ. ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಮೇಲೆ ಅದ್ಯಾವ ವಿನ್ನರ್ ಗೂ ಕಡಿಮೆ ಇಲ್ಲದಂತೆ ಧನ್ ರಾಜ್ ಅವರನ್ನು ಕನ್ನಡಿಗರು ಸ್ವಾಗತಿಸಿದರು.

ಕಂಪನಿಯೊಂದರ ಕಾರು ಬಿಡುಗಡೆಗೊಳಿಸುವ ಭಾಗ್ಯ ಅವರಿಗೆ ಸಿಕ್ತು.  ಇಷ್ಟು ಮಾತ್ರವಲ್ಲದೆ ಧನ್ ರಾಜ್ ಮನೆಗೆ ನಿತ್ಯ ಜನ ಸಾಗರದಂತೆ ಹರಿದು ಬಂದರು.

ಇಂದು ಮಹಾಮನೆಯ ಫೈನಲ್ ಕಾರ್ಯಕ್ರಮದಲ್ಲಿ ಧನ್ ರಾಜ್ 3 ಲಕ್ಷ ಗೆದ್ದಿದ್ದಾರೆ. ಮಹಾಮನೆಯಲ್ಲಿ ಬಿಗ್ ಬಾಸ್ India Gate Foods ಸಹಯೋಗದಲ್ಲಿ ಆಯೋಜಿಸಿದ್ದ ಬಾಸ್ಮತಿ ರೈಸ್ ಆಹಾರ ಪದಾರ್ಥ ತಯಾರಿಕೆಯಲ್ಲಿ ಧನ್ ರಾಜ್ ತಯಾರಿಸಿದ್ದ ಫುಡ್ ಐಟಂ ಅನ್ನು ಕನ್ನಡಿಗರು ರುಚಿ ಸವಿಯದೇ ಮೆಚ್ಚಿದ್ದಾರೆ.

ಇದಕ್ಕಾಗಿ ಅವರು 3 ಲಕ್ಷ ರೂಪಾಯಿ ಗೆದ್ದಿದ್ದಾರೆ. ಆಹಾರವನ್ನು ರುಚಿ ನೋಡದೆ ಜನ ಮೆಚ್ಚಿದ್ದಾರೆ ಅಂದರೆ ಅದು ಜನ ಕೊಟ್ಟ ಪ್ರೀತಿ ಅನ್ನುವುದರಲ್ಲಿ ಎರಡು ಮಾತಿಲ್ಲ.

ಬಿಗ್ ಬಾಸ್ ಗೆದ್ದಿಲ್ಲ ಅಂದ್ರೆ ಏನಾಯ್ತು..ಕನ್ನಡಿಗರ ಮನ ಗೆದ್ದ ಮೇಲೆ ಭವಿಷ್ಯದಲ್ಲಿ ಧನ್ ರಾಜ್ ಅವರಿಗೆ ಗೆಲುವು ಕಟ್ಟಿಟ್ಟ ಬುತ್ತಿ.

Advertisements

One Comment on “ಬಿಗ್ ಬಾಸ್ ಕೈ ಕೊಟ್ಟರೂ… ಕನ್ನಡಿಗರು ಧನ್ ರಾಜ್ ಕೈ ಬಿಡಲಿಲ್ಲ

  1. Pingback: ಉಳಿದ ಕಡೆ ಗಡಿಯಾರಕ್ಕೆ ಡೀಸೆಲ್ ಹಾಕ್ತಾರ ಸರ್..? – torrentspree

Leave a Reply

%d bloggers like this: