Advertisements

ಆ ದೇಶದಲ್ಲಿ ಡೇಟಿಂಗ್ ಗಾಗಿ ರಜೆ ಕೊಡ್ತಾರೆ…

ಹದಿಹರೆಯದ ಕುದಿ ಮನಸ್ಸಿಗೆ ಡೇಟಿಂಗ್ ಅಂದ್ರೆ ಅದೇನೋ ಪುಳಕ. ಸಾಂಪ್ರದಾಯಿಕ ಮನಸ್ಸುಗಳು ದ್ವೇಷಿಸುವ ಪ್ರಕ್ರಿಯೆ ಇದು.

ಅದರಲ್ಲೂ ಭಾರತದಂತಹ ದೇಶದಲ್ಲಿ ಡೇಟಿಂಗ್ ಅನ್ನುವುದು ಕದ್ದು ಮುಚ್ಚಿ ನಡೆಯುವ ಪ್ರಕ್ರಿಯೆ.

ಆದರೆ ಚೀನಾ ಒಂದು ಹೆಜ್ಜೆ ಮುಂದೆ ಹೋಗಿದ್ದು, 20-30 ವರೆಗಿನ ವಯಸ್ಸಿನಲ್ಲಿ ಮಹಿಳೆಯರು-ಪುರುಷರು ಡೇಟಿಂಗ್ ಮಾಡುವುದು ಸಹಜ. ನಮ್ಮ ದೇಶದಲ್ಲೂ ಇಂತವರ ಸಂಖ್ಯೆ ಕಡಿಮೆಯೇನಿಲ್ಲ.  ಹೀಗಾಗಿ ಅವರಿಗೆ ಸ್ಪೆಷಲ್ ಆಫರ್ ಗಳನ್ನು ಕೊಡಲು ನಿರ್ಧರಿಸಿದೆ. ಅದು ಕೇವಲ ಮಹಿಳೆಯರಿಗೆ ಮಾತ್ರ.

ಚೀನಾದಲ್ಲಿರುವ 20-30 ವರ್ಷದವರೆಗಿನ ಉದ್ಯೋಗಸ್ಥ ಮಹಿಳೆಯರಿಗೆ ಡೇಟಿಂಗ್ ಮಾಡುವುದಕ್ಕಾಗಿಯೇ ಪ್ರತ್ಯೇಕವಾಗಿ ರಜೆ ನೀಡಲಾಗುತ್ತದೆ. ವಾರ್ಷಿಕವಾಗಿ ನೀಡಲಾಗುವ ರಜೆಗಳ ಜೊತೆಗೆ 30 ದಿನಗಳು ಪ್ರತ್ಯೇಕವಾಗಿ ತಮ್ಮ ಊರುಗಳಿಗೆ ತೆರಳಿ ಡೇಟಿಂಗ್ ಮಾಡುವುದಕ್ಕಾಗಿಯೇ ನೀಡಲಾಗುತ್ತದೆ. 

2013 ರಿಂದ ಇತ್ತೀಚಿನ ವರ್ಷಗಳಲ್ಲಿ ಚೀನಾದಲ್ಲಿ ವಿವಾಹವಾಗುವವರ ಸಂಖ್ಯೆ ಇಳಿಕೆಯಾಗಿದ್ದು ಮಹಿಳೆಯರು ಹೆಚ್ಚು ತಮ್ಮ ಉದ್ಯೋಗಗಳತ್ತ ಗಮನ ಹರಿಸುತ್ತಿದ್ದಾರೆ.

ಈ ಕಾರಣದಿಂದಾಗಿ ಏಕಾಂಗಿಯಾಗಿ ಉಳಿಯುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚುತ್ತಿದ್ದು, ಡೇಟಿಂಗ್ ಗಾಗಿಯೇ ಪ್ರತ್ಯೇಕ ರಜೆ ನೀಡಲು ಚೀನಾ ಸಂಸ್ಥೆಗಳು ಮುಂದಾಗುತ್ತಿವೆ.

ಇದೇ ವ್ಯವಸ್ಥೆ ಭಾರತದಲ್ಲಿ ಬಂದ್ರೆ ಏನಾಗಬಹುದು ಜಸ್ಟ್ ಊಹಿಸಿಕೊಳ್ಳಿ.

Advertisements

Leave a Reply

%d bloggers like this: