ಪ್ರಿಯಾಂಕಾ ಲಾವೋ ಕಾಂಗ್ರೆಸ್​ ಬಚಾವೋ:ಕೊನೆಗೂ ಈಡೇರಿತು ಕಾರ್ಯಕರ್ತರ ಬೇಡಿಕೆ

2019ರ ಲೋಕಸಭೆ ಚುನಾವಣೆಗೆ ಮೊದಲೇ ಕಾಂಗ್ರೆಸ್‌ ರಾಜಕಾರಣಕ್ಕೆ ಪ್ರಿಯಾಂಕ ಗಾಂಧಿ ಪ್ರವೇಶವಾಗಿದೆ. ಉತ್ತರ ಪ್ರದೇಶದ ಪೂರ್ವ ಪ್ರಾಂತ್ಯದಿಂದ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಪ್ರಿಯಾಂಕಾ ಅವರನ್ನು ನೇಮಿಸಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆದೇಶಿಸಿದ್ದಾರೆ.

ಮುಂದಿನ ತಿಂಗಳ ಮೊದಲ ವಾರ ಪ್ರಿಯಾಂಕಾ ಪಕ್ಷದ ಹೊಣೆಗಾರಿಕೆ ವಹಿಸಿಕೊಳ್ಳಲಿದ್ದಾರೆ. 

ಈ ವರೆಗೆ ರಾಜಕೀಯದಲ್ಲಿ ಪ್ರಿಯಾಂಕಾ ಪಾಲುದಾರಿಕೆ ಪಕ್ಷದ ಭದ್ರಕೋಟೆ ಅಮೇಥಿ ಮತ್ತು ರಾಯ್‌ ಬರೇಲಿ ಕ್ಷೇತ್ರಗಳ ಚುನಾವಣೆ ಪ್ರಚಾರಕ್ಕೆ ಮಾತ್ರ ಸೀಮಿತವಾಗಿತ್ತು. ಇದೇ ಮೊದಲ ಬಾರಿಗೆ ಅವರನ್ನು ಸಂಘಟನಾತ್ಮಕ ಹುದ್ದೆಗೆ ನಿಯೋಜಿಸಲಾಗಿದೆ.

ಹಾಗೇ ನೋಡಿದ್ರೆ ಪ್ರಿಯಾಂಕ ರಾಜಕೀಯಕ್ಕೆ ಬರಬೇಕು ಅನ್ನುವುದು ಕಾರ್ಯಕರ್ತರ ಹಳೆಯ ಬೇಡಿಕೆ. ರಾಹುಲ್ ಗಾಂಧಿಗೆ ವರ್ಚಸ್ಸಿನ ಕೊರತೆಯಿದೆ. ಮಾತ್ರವಲ್ಲದೆ ಬಿಜೆಪಿಯ ಅಬ್ಬರವನ್ನು ಎದುರಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಇಂದಿರಾ ಗಾಂಧಿಯ ಮೊಮ್ಮಗಳನ್ನು ರಾಜಕೀಯಕ್ಕೆ ತನ್ನಿ ಎಂದು ಕಾರ್ಯಕರ್ತರು ಆಗ್ರಹಿಸಿದ್ದರು.

‘ಪ್ರಿಯಾಂಕಾ ಲಾವೋ ಕಾಂಗ್ರೆಸ್​ ಬಚಾವೋ’ ಎಂಬ ಘೋಷಣೆ ಕೂಗಿ ಕಾಂಗ್ರೆಸ್​ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಪ್ರಿಯಾಂಕಾ ಅವರಿಗೆ ರಾಜಕೀಯ ಸ್ಥಾನಮಾನ ಕೊಟ್ಟರೆ ಎಲ್ಲಿ ರಾಹುಲ್ ಗಾಂಧಿ ರಾಜಕೀಯ ಭವಿಷ್ಯ ಹಾಳಾಗುತ್ತದೋ ಎಂದು ಸೋನಿಯಾ ಅದಕ್ಕೆ ಅವಕಾಶ ಕೊಟ್ಟಿರಲಿಲ್ಲ.

ಮತ್ತೊಂದು ಕಡೆ ಪಕ್ಷದ ಹಿರಿಯ ನಾಯಕರು ರಾಹುಲ್​ ಗಾಂಧಿ ಅವರಿಗಿಂತ ಪ್ರಿಯಾಂಕಾ ಮೇಲೆ ಹೆಚ್ಚಿನ ವಿಶ್ವಾಸ ಹೊಂದಿದ್ದರು. 2004ರಲ್ಲಿ ಅಮೇಥಿಯಿಂದ ರಾಹುಲ್​ ಗೆದ್ದಾಗ ಮನಮೋಹನ್​ ಸಿಂಗ್​ ಸರ್ಕಾರದಲ್ಲಿ ಮಂತ್ರಿಯಾಗುವ ಅವಕಾಶ ಬಂದಿತ್ತು.ಆದರೆ ರಾಹುಲ್​ ಅದನ್ನು ತಿರಸ್ಕರಿಸಿದ್ದರು. ಇದು ಅವರ ಅಪ್ರಬುದ್ಧತೆಗೆ ಸಾಕ್ಷಿಯಾಗಿತ್ತು. ಒಂದು ವೇಳೆ ಸಚಿವರಾಗಿರುತ್ತಿದ್ದರೆ, ಆಡಳಿತದ ಪಟ್ಟುಗಳು ಕರಗತವಾಗುತ್ತಿತ್ತು.

ಬಳಿಕ 2014ರಲ್ಲಿ ಕಾಂಗ್ರೆಸ್​ ಹೀನಾಯವಾಗಿ ಸೋಲು ಕಂಡಿತು. ಇದರ ಬೆನ್ನಲ್ಲೇ ಬಿಹಾರ, ದೆಹಲಿ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್​ಗಢ, ಗುಜರಾತ್ ಸೇರಿ ಹಲವು ರಾಜ್ಯಗಳು ​ ಕೈ ತಪ್ಪಿತು. ಕಾಂಗ್ರೆಸ್​ ಮುಳುಗುತ್ತಿದೆ ಎಂದು ಭೀತಿಗೊಂಡ ನಾಯಕರು ರಾಹುಲ್​ ಪಕ್ಷವನ್ನು ಮುನ್ನಡೆಸಲಾರರು, ಅವರ ಬದಲಿಗೆ ಪ್ರಿಯಾಂಕಾ ಅವರಿಗೆ ಪಟ್ಟ ಕಟ್ಟಬೇಕು ಎಂದು ಪರೋಕ್ಷವಾಗಿ ಸೋನಿಯಾ ಗಾಂಧಿಗೆ ಅರ್ಥ ಮಾಡಿಸಲು ಯತ್ನಿಸಿದರು ಆದರೆ ಸೋನಿಯಾ ಮಗನ ಪರವಾಗಿದ್ದರು. ಜೊತೆಗೆ ಆಳಿಯ ವಾದ್ರಾ ತಲೆ ಮೇಲಿದ್ದ ಹಗರಣಗಳು ಮತ್ತೊಂದು ಸಮಸ್ಯೆಯಾಗಿತ್ತು. ಕೊನೆಗೂ ರಾಹುಲ್ ಅವರಿಗೆ ಕಾಂಗ್ರೆಸ್​ ಅಧ್ಯಕ್ಷ ಸ್ಥಾನ ನೀಡಲಾಯಿತು.

ಹಾಗೇ ನೋಡಿದರೆ ಪ್ರಿಯಾಂಕಾ ಅವರಿಗೆ ಜನರನ್ನು ಸೆಳೆಯುವ ಶಕ್ತಿ ಇದೆ. ಆಕರ್ಷಣೆ, ಸುಂದರ ರೂಪ, ಮಾತುಗಾರಿಕೆಯಲ್ಲಿ ಅಜ್ಜಿ ಇಂದಿರಾ ಗಾಂಧಿಯನ್ನು ಹೋಲುತ್ತಾರೆ. ಮಾಧ್ಯಮಗಳು ಕೂಜಾ ಪ್ರಿಯಾಂಕಾ ಅವರಲ್ಲಿ ಇಂದಿರಾ ಅವರ ಹೋಲಿಕೆಯನ್ನು ಕಂಡಿದೆ. ಆದರೆ ಪುತ್ರ ವಾತ್ಸಲ್ಯ ಅಡ್ಡಿಯಾಗಿ ಕೂತಿತ್ತು.

ಇದೀಗ ರಾಹುಲ್ ಗಾಂಧಿಯವರಿಗೂ ಅರಿವಾಗಿದೆ. ನಾನೊಬ್ಬನೇ ಪಕ್ಷವನ್ನು ಮುನ್ನಡೆಸುವುದು ಕಷ್ಟ. ಬಿಜೆಪಿಯ ಘಟಾನುಘಟಿ ನಾಯಕರನ್ನು ಮಣಿಸಬೇಕಾದರೆ ಪ್ರಿಯಾಂಕ ಅನಿವಾರ್ಯ ಎಂದು ಅವರಿಗೆ ಅರಿವಾಗಿದೆ.

ಹೀಗಾಗಿ ದಿಢೀರ್ ಎಂದು ಸಹೋದರಿಗೆ ಪಕ್ಷದ ಸಂಘಟನೆಯ ಜವಾಬ್ದಾರಿ ನೀಡಲಾಗಿದೆ.

ಬಿಜೆಪಿ ಕಡೆಯಿಂದ ಬರುತ್ತಿರುವ ಪ್ರತಿಕ್ರಿಯೆ ನೋಡಿದರೆ, ಪ್ರಿಯಾಂಕ ರಾಜಕೀಯ ಪ್ರವೇಶ ಬಿಜೆಪಿಯನ್ನು ಕಂಗಾಲು ಮಾಡಿದೆ ಅನ್ನುವುದು ಸ್ಪಷ್ಟ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: