Advertisements

ಹೆಣ್ಮಕ್ಲು ಕಣ್ಣೀರು ಹಾಕಿದ್ರೆ ಏನು ಅನ್ನಿಸೋದಿಲ್ವ: ಸಾ.ರಾ.ಮಹೇಶ್ ವರ್ತನೆಯನ್ನು ಸಮರ್ಥಿಸಿದ ಸಿಎಂ

ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜಕೀಯ ವೇದಿಕೆಗಳಲ್ಲಿ ಹಾಕಿದ ಕಣ್ಣೀರಿಗೆ ಲೆಕ್ಕವಿಲ್ಲ. ಆ ಕಣ್ಣೀರನ್ನು ಪ್ರತಿಪಕ್ಷಗಳು, ಜಮೀರ್ ಅಹಮ್ಮದ್ ಏನೆಂದು ಕರೆದಿದ್ದಾರೆ ಅನ್ನುವುದು ನಾಡಿಗೆ ಗೊತ್ತಿರುವ ಸತ್ಯ.

ಕುಮಾರಸ್ವಾಮಿ ಅಂದ್ರೆ ಹೆಂಗರುಳಿನ ಮನುಷ್ಯ. ಜನರ ಸಂಕಷ್ಟಕ್ಕೆ ಅವರು ಸಿಕ್ಕಾಪಟ್ಟೆ ಮಿಡಿಯುತ್ತಾರೆ. ಅದರಲ್ಲೂ ಹೆಣ್ಣು ಮಕ್ಕಳ ನೋವಿಗೆ ಸದಾ ಸ್ಪಂದಿಸುತ್ತಾರೆ ಅನ್ನುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ.

ಆದರೆ ತುಮಕೂರು ಎಸ್ಪಿ ದಿವ್ಯಾ ಗೋಪಿನಾಥ್ ಕಣ್ಣೀರಿಗೆ ಕುಮಾರಸ್ವಾಮಿ ಮನಸ್ಸು ಕರಗಿಯೇ ಇಲ್ಲ. ಸಾರಾ ಮಹೇಶ್ ಅವರನ್ನು ಸಮರ್ಥಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿರುವ ಕುಮಾರಸ್ವಾಮಿ, ಮಹೇಶ್ ವರ್ತನೆಗೆ ಭೇಷ್ ಅಂದಿದ್ದಾರೆ.

ಕುಮಾರಸ್ವಾಮಿ ಪ್ರಕಾರ ಸಚಿವರನ್ನೂ ಕೂಡಾ ಗದ್ದುಗೆ ಒಳಗೆ ಬಿಡಲೇಬೇಕಿತ್ತು. ಕುಮಾರಸ್ವಾಮಿ ಹೇಳಿರುವ ಮಾತುಗಳನ್ನು ನೋಡಿದ್ರೆ, ಸಂಪುಟ ಸಚಿವರು ಹೋಗದಿರುತ್ತಿದ್ದರೆ ಕ್ರಿಯಾ ವಿಧಿಗಳು ನಡೆಯುತ್ತಿರಲಿಲ್ಲವೇನೋ.

ತನ್ನ ಕರ್ತವ್ಯ ಪಾಲಿಸಿದ ಮಹಿಳಾ ಎಸ್ಪಿ ದಿವ್ಯಾ ಗೋಪಿನಾಥ್ ವಿರುದ್ಧ ಕೂಗಾಡಿದ ಸಚಿವ ಸಾ.ರಾ.ಮಹೇಶ್ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದರೂ ಸಿಎಂ ಕುಮಾರಸ್ವಾಮಿ ಮಾತ್ರ ಸಚಿವರ ನಡೆಯನ್ನು ಸಮರ್ಥಿಸಿಕೊಂಡಿದ್ದು, ‘ಅಚಾತುರ್ಯ ನಡೆದಿರುವುದು ನಿಜ. ಇದನ್ನು ದೊಡ್ಡದು ಮಾಡುವುದು ಬೇಡ, ಎಂದು ಅಧಿಕಾರಿನ್ನು ನಾನೇ ಕರೆದು ನೀವೆಲ್ಲಾ ಒಳ್ಳೆ ಕೆಲಸ ಮಾಡಿದ್ದೀರಿ. ಆದರೆ ಇಂತಹ ಕೆಲಸ ಮಾಡುವ ಸಂದರ್ಭದಲ್ಲಿ ತಾವು ತೆಗೆದುಕೊಳ್ಳುವ ನಿರ್ಧಾರ ಮುಜುಗರಕ್ಕೀಡು ಮಾಡುವಂತಹುದ್ದನ್ನು ಗಮನಿಸಿದ್ದೇನೆ’ ಎಂದಿದ್ದಾರೆ.

ಕ್ರಿಯಾ ವಿಧಿ ಸಂದರ್ಭದಲ್ಲಿ ಎಂತಹವರನ್ನು ಒಳಗೆ ಬಿಟ್ಟಿದ್ದೀರಿ, ನಿಮ್ಮ ಕ್ಯಾಮಾರ ರೆಕಾರ್ಡ್ ನೋಡಿ ಅನ್ನುವ ಮೂಲಕ ಶ್ರೀಗಳ ಕ್ರಿಯಾ ವಿಧಿ ಸರ್ಕಾರದ ಮೂಗಿನ ನೇರಕ್ಕೆ ನಡೆಯಬೇಕು ಅನ್ನುವಂತೆ ಮಾತನಾಡಿದ್ದಾರೆ.

ನಡೆದಾಡುವ ದೇವರನ್ನು ನೋಡಲು ಕರ್ನಾಟಕದ ಮೂಲೆ ಮೂಲೆಗಳಿಂದ ಜನ ಆಗಮಿಸಿದ್ದರು, ಅವರಿಗೆ ವ್ಯವಸ್ಥೆ ಮಾಡುವುದನ್ನು ಬಿಟ್ಟು ವಿಐಪಿ ಕಲ್ಚರ್ ತೋರಿಸಲು ಹೋದ ಸಾರಾ ಮಹೇಶ್ ಅವರನ್ನು ಬೆಂಬಲಿಸಿದ ಕುಮಾರಸ್ವಾಮಿಯವರಿಗೆ ಜೈ ಹೇಳಲೇಬೇಕು.

ಒಬ್ಬ ಮಹಿಳಾ ಅಧಿಕಾರಿಯೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂದು ಅರಿವಿಲ್ಲದ ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಂಡಿರುವ ಪಕ್ಷ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಯಲಿದೆ ಅನ್ನುವುದರಲ್ಲಿ ಎರಡು ಮಾತಿಲ್ಲ.

Advertisements

One Comment on “ಹೆಣ್ಮಕ್ಲು ಕಣ್ಣೀರು ಹಾಕಿದ್ರೆ ಏನು ಅನ್ನಿಸೋದಿಲ್ವ: ಸಾ.ರಾ.ಮಹೇಶ್ ವರ್ತನೆಯನ್ನು ಸಮರ್ಥಿಸಿದ ಸಿಎಂ

  1. Pingback: 90% ದಷ್ಟು ಮುಸ್ಲಿಮರು ಮತ ಹಾಕಿದ್ರೆ ರಾಹುಲ್ ಗಾಂಧಿಯೇ ಪ್ರಧಾನಿ: ಜಮೀರ್ – torrentspree

Leave a Reply

%d bloggers like this: