Advertisements

ನಿಮಗೆ ಕಣ್ಣೀರ ಶಾಪ ತಟ್ಟುವುದರಲ್ಲಿ ಸಂಶಯವಿಲ್ಲ :ಮಹಿಳಾ ಅಧಿಕಾರಿಗೆ ಸಚಿವ ಸಾರಾ ಮಹೇಶ್ ಅವಾಜ್

ಸಿದ್ದಗಂಗಾ ಶ್ರೀಗಳ ಕ್ರಿಯಾ ಸಮಾಧಿ ವಿಧಿ ವಿಧಾನ ಸಂದರ್ಭದಲ್ಲಿ ಪೊಲೀಸರು ನಡೆದುಕೊಂಡ ರೀತಿಗೆ ಇಡೀ ಕರ್ನಾಟಕ ಭೇಷ್ ಅಂದಿದೆ. ಮುಖ್ಯಮಂತ್ರಿಗಳೇ ಪೊಲೀಸರ ಕೆಲಸವನ್ನು ಕಂಡು ಬೆನ್ನು ತಟ್ಟಿದ್ದಾರೆ.

ಆದರೆ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಕರ್ತವ್ಯ ನಿರತ ಎಸ್‍ಪಿ ದಿವ್ಯಾ ಗೋಪಿನಾಥ್ ಅವರಿಗೆ ಅವಾಜ್ ಹಾಕಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಮಂಗಳವಾರ ಶ್ರೀಗಳ ಕ್ರಿಯಾ ಸಮಾಧಿ ವಿಧಿವಿಧಾನ ವೀಕ್ಷಿಸಲು ಸಾ.ರಾ. ಮಹೇಶ್ ಗದ್ದುಗೆ ಪ್ರವೇಶಿಸಲು ಮುಂದಾಗಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಎಸ್‍ಪಿ ದಿವ್ಯಾ ಗೋಪಿನಾಥ್ ಸಚಿವರನ್ನು ತಡೆದಿದ್ದಾರೆ. ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದ ಕೋಪಗೊಂಡ ಸಚಿವರು ಗದರಿದ್ದರಿಂದ ಎಸ್‍ಪಿ ಕಣ್ಣೀರು ಹಾಕಿದ್ದಾರೆ.

ಸಿದ್ದಗಂಗಾ ಶ್ರೀಗಳ ಕ್ರಿಯಾವಿಧಿ ವೇಳೆ ಗದ್ದುಗೆಗೆ ಕೇವಲ 30 ಪ್ರಮುಖರನ್ನು ಮಾತ್ರ ಬಿಡಲು ಐಜಿ ದಯಾನಂದ್ ಆದೇಶಿಸಿದ್ದರು. ಆ ಪಟ್ಟಿಯಲ್ಲಿ ಸಚಿವ ಸಾ.ರಾ. ಮಹೇಶ್ ಹೆಸರಿಲ್ಲದ ಕಾರಣ ಒಳಬಿಡಲು ನಿರಾಕರಿಸದ ಎಸ್ಪಿ ದಿವ್ಯಾ ಅವರನ್ನು ತಡೆದಿದ್ದರು. ಈ ವೇಳೆ ಕುಪಿತರಾದ ಸಚಿವರು ನಾನು ಮಿನಿಸ್ಟರ್, ನನ್ನನ್ನೇ ಬಿಡುವುದಿಲ್ವಾ? ಬ್ಲಡಿ ಈಡಿಯಟ್ ಎಂದು ನಾಲಿಗೆ ಹರಿ ಬಿಟ್ಟಿದ್ದಾರೆ. ಸಚಿವರ ಉಗ್ರಾವತಾರ ನೋಡಿ ನೊಂದುಕೊಂಡ ಐಪಿಎಸ್ ಅಧಿಕಾರಿ ದಿವ್ಯಾ ಗೋಪಿನಾಥ್, ಹಿರಿಯ ಅಧಿಕಾರಿಗಳ ಆದೇಶ ಪಾಲಿಸುತ್ತಿದ್ದೇನೆ ಎಂದಿದ್ದಾರೆ. ಆದರೆ ಇದನ್ನು ಕೇಳಲು ತಯಾರಿಲ್ಲದ ಸಚಿವ ಸಾ.ರಾ. ಮಹೇಶ್ ಮಹಿಳಾ ಅಧಿಕಾರಿ ಮೇಲೆ ಕೂಗಾಡಿದ್ದಾರೆ.

ಈ ವಿಡಿಯೋ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಸಚಿವರು, ನಾನು ಮಂತ್ರಿ ಎಂದು ಹೇಳಿದ್ರೂ ನನ್ನನ್ನು ತಡೆದರು. ಕೆಲವು ಅಧಿಕಾರಿಗಳಿಗೆ ಮಂತ್ರಿಗಳು ಯಾರು ಅನ್ನುವುದೇ ಗೊತ್ತಿಲ್ಲ. ನನ್ನ ಹಿಂದೆ ಬಂದ ಸಚಿವ ವೆಂಕಟರಾವ್ ನಾಡಗೌಡರು ಬಂದಾಗ ಇದೇ ಎಸ್‍.ಪಿ ತಡೆದಿದ್ದರು. ನಾಡಗೌಡ್ರು ನಾನು ಮಂತ್ರಿ ಇದ್ದೇನಮ್ಮಾ, ಒಳಗೆ ಹೋಗಲು ಬಿಡಿ. ಶ್ರೀಗಳ ದರ್ಶನ ಪಡೆದು ಹಿಂದಿರುಗುತ್ತೇನೆಂದು ಮನವಿ ಮಾಡಿಕೊಂಡಿದ್ದರು.

ನಾನು ಅವರಿಗೆ ಯಾವುದೇ ಕೆಟ್ಟ ಪದಗಳಿಂದಲೂ ನಿಂದಿಸಿಲ್ಲ. ದಾರಿ ಬಿಡಿ ಎಂಬುವುದನ್ನು ಎತ್ತರದ ಧ್ವನಿಯಲ್ಲಿ ಹೇಳಿದ್ದೇನೆ. ಅಧಿಕಾರಿಗಳು ತಪ್ಪು ಮಾಡಿದಾಗ ಅವರಿಗೆ ಸಚಿವರು ಏನು ಹೇಳಬಾರದಾ? ಆ ಕ್ಷಣದಲ್ಲಿ ನಡೆದ ತಪ್ಪನ್ನು ಸರಿಪಡಿಸಿಕೊಳ್ಳುವಂತೆ ಹೇಳಿದ್ದೇನೆ. ಈ ಬಗ್ಗೆ ನನಗೆ ವಿಷಾಧವಿಲ್ಲ,ನಾನು ಕ್ಷಮೆ ಕೇಳುವುದಿಲ್ಲ ಅಂದಿದ್ದಾರೆ.

ಇದನ್ನು ದುರಂತ ಅನ್ನದೆ ವಿಧಿಯಿಲ್ಲ. ತುಮಕೂರಿನ ಕಿರಿಯ ಶ್ರೀಗಳೇ ಹೇಳಿದ್ದರು. ಜನ ಸಾಮಾನ್ಯ ಭಕ್ತರೇ ನಮ್ಮ ಪಾಲಿನ ವಿಐಪಿಗಳೆಂದು. ಮಂತ್ರಿಗಳಿಗೆ ಶ್ರೀಗಳ ದರ್ಶನ ವ್ಯವಸ್ಥೆಯನ್ನು ಮಾಡಲಾಗಿತ್ತು.ಧಾರ್ಮಿಕ ವಿಧಿ ವಿಧಾನಗಳನ್ನು ವೀಕ್ಷಣೆ ಸಲುವಾಗಿ ಸ್ಕ್ರೀನ್ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಗದ್ದುಗೆಯ ಒಳಭಾಗದಲ್ಲಿ ಧಾರ್ಮಿಕ ಮುಖ್ಯಸ್ಥರು, ಸ್ವಾಮೀಜಿಗಳು ಉಪಸ್ಥಿತರಿರಬೇಕಿತ್ತು. ಅದನ್ನು ಬಿಟ್ಟು ಮಂತ್ರಿಗಳಿಗೆ ಮಾಡಲು ಕೆಲಸವೇನಿತ್ತು.

ಸಾರಾ ಮಹೇಶ್ ಅವರಿಗೆ ಶಿಸ್ತಾಗಿ ತಮ್ಮ ಇಲಾಖೆಯನ್ನು ನೋಡಿಕೊಂಡರೆ ಸಾಕು. ಮಂತ್ರಿಯಾದ ತಕ್ಷಣ ಎಲ್ಲಾ ಸೌಲಭ್ಯಗಳು ಬೇಕು ಅನ್ನಲು ಇವರಿಗೇನು ಎರಡು ಕೊಂಬಿದೆಯೇ.

ಕೊಡಗು ಪ್ರವಾಹ ಸಂದರ್ಭದಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ಬೈಯ್ದಿರುವುದನ್ನು ಸಚಿವರು ಮರೆತಿರುವ ಹಾಗಿದೆ.

ಇದೇ ಸಾರಾ ಮಹೇಶ್ ಪುತ್ರ ಹಿಂದೊಮ್ಮೆ ಅದ್ಯಾವುದೇ ರೌಡಿಗಳಿಗೆ ಕಡಿಮೆ ಇಲ್ಲದಂತೆ ವರ್ತಿಸಿದ್ದ.


ಇಂತಹ ಸಚಿವರು ನಮ್ಮ ಕರ್ನಾಟಕಕ್ಕೆ ಬೇಕಾಗಿಲ್ಲ. ಮುಂದಿನ ಚುನಾವಣೆಯಲ್ಲಿ ದರ್ಪ ತುಂಬಿದ ಜನಪ್ರತಿನಿಧಿಗಳಿಗೆ ತಕ್ಕ ಪಾಠ ಕಲಿಸಬೇಕಾಗಿದೆ. ಸೋಲಿಸಿ ಮನೆಗೆ ಕಳುಹಿಸಿದರೆ ದರ್ಪವೆಲ್ಲಾ ಇಳಿಯುತ್ತದೆ.

Advertisements

One Comment on “ನಿಮಗೆ ಕಣ್ಣೀರ ಶಾಪ ತಟ್ಟುವುದರಲ್ಲಿ ಸಂಶಯವಿಲ್ಲ :ಮಹಿಳಾ ಅಧಿಕಾರಿಗೆ ಸಚಿವ ಸಾರಾ ಮಹೇಶ್ ಅವಾಜ್

  1. Pingback: ಕರ್ನಾಟಕದ ಗತಿ ಬೇಡವಾದ್ರೆ…ಸಚಿವ ಸ್ಥಾನ ಕೊಡಿ :ಕಮಲನಾಥ್ ಗೆ ಬಿಎಸ್ಪಿ ಶಾಸಕಿ ಎಚ್ಚರಿಕೆ – torrentspree

Leave a Reply

%d bloggers like this: