ಒಂದು ದಶಕದ ನಂತರ ಉದ್ಯಾನನಗರಿಯಲ್ಲಿ ಮಧು ಮೇಳ

ಜೇನು ಬೆಳೆದು ಸಿರಿವಂತರಾಗಬೇಕೇ…?

ಬೆಂಗಳೂರಿನಲ್ಲಿ ಇದೀಗ ಮೇಳಗಳ ಭರಾಟೆ,ಕೃಷಿ, ತೋಟಗಾರಿಕೆ, ಸಿರಿಧಾನ್ಯ, ಕೃಷಿ ಮೇಳಗಳ ಬಳಿಕ ಈಗ “ಮಧು ಮೇಳ’ದ ಸರದಿ.

ರಾಜ್ಯದಲ್ಲಿ ಜೇನು ಕೃಷಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಮಧು ಕೃಷಿಗೆ ಸಂಬಂಧಿಸಿದ ತಾಂತ್ರಿಕ ತರಬೇತಿ, ಸುಸ್ಥಿರ ಆದಾಯ ಗಳಿಕೆ ಕುರಿತು ತಿಳಿವಳಿಕೆ ನೀಡುವ ಉದ್ದೇಶದಿಂದ  ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ( ಜಿಕೆವಿಕೆ) ಯಲ್ಲಿವು ಫೆ.1ರಂದು ಮಧು ಮೇಳ’ ಆಯೋಜಿಸಲಾಗಿದೆ.

ಸುಮಾರು ಒಂದು ದಶಕದ ನಂತರ ನಗರದಲ್ಲಿ ಮಧು ಮೇಳ ನಡೆಯುತ್ತಿದ್ದು, ಈ ಹಿಂದೆ ಜೇನು ಕುಟುಂಬಗಳ ನಿರ್ವಹಣೆ ಕುರಿತು ಸಣ್ಣ ಪ್ರಮಾಣದಲ್ಲಿ ಮೇಳ ಆಯೋಜಿಸಲಾಗಿತ್ತು. ಈ ಬಾರಿ “ಅಧಿಕ ಬೆಳೆ ಇಳುವರಿ ಮತ್ತು ಸುಸ್ಥಿರ ಆದಾಯ ಗಳಿಕೆ’ ಕುರಿತು ಬೆಳೆಗಾರರಿಗೆ ತಿಳಿವಳಿಕೆ ನೀಡಲು ದೊಡ್ಡ ಮಟ್ಟದಲ್ಲಿ ಮೇಳ ಆಯೋಜಿಸಲಾಗಿದೆ.

ರಾಜ್ಯದ ಜೇನುಕೃಷಿಯಲ್ಲಿ ನುರಿತ ತಜ್ಞರು ತಾಂತ್ರಿಕ ಗೋಷ್ಠಿಗಳಲ್ಲಿ ಭಾಗವಹಿಸಲಿದ್ದು, ಜೇನು ಸಾಕಣೆ ಪಾಠ ನಡೆಸಲಿದ್ದಾರೆ.

ತಾಂತ್ರಿಕ ಗೋಷ್ಠಿಗಳಲ್ಲಿ ಜೇನುನೊಣಗಳ ಪರಾಗಸ್ಪರ್ಶ ಮತ್ತು ಬೆಳೆಗಳ ಇಳುವರಿ, ಜೇನುತುಪ್ಪ ಮತ್ತು ಇತರೆ ಉತ್ಪನ್ನಗಳ ಉತ್ಪಾದನೆ ಹಾಗೂ ಮಾರುಕಟ್ಟೆ, ಹೆಜ್ಜೇನು ಸಂರಕ್ಷಣೆ ಮತ್ತು ಸುಸ್ಥಿರ ಕೊಯ್ಲು, ಜೇನು ಕುಟುಂಬಕ್ಕೆ ತಗಲುವ ಕೀಟ ಭಾದೆ ಮತ್ತು ರೋಗಗಳು, ಜೇನು ಕೃಷಿ ಕ್ಷೇತ್ರದಲ್ಲಾಗುತ್ತಿರುವ ಹೊಸ ಹೊಸ ಆವಿಷ್ಕಾರಗಳ ಕುರಿತು ತಜ್ಞರು ಮತ್ತು ಜೇನು ಕೃಷಿಕರು ವಿಚಾರ ಮಂಡಿಸಲಿದ್ದಾರೆ.

ಇನ್ನು ಮೇಳದಲ್ಲಿ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ಶಿವಮೊಗ್ಗ, ಮಡಿಕೇರಿ, ದಾವಣಗೆರೆ, ಬಳ್ಳಾರಿ, ಬಾಗಲಕೋಟೆ, ರಾಯಚೂರು, ಚಿತ್ರದುರ್ಗ, ಮೈಸೂರು, ರಾಮನಗರ, ಚಾಮರಾಜನಗರ ಸೇರಿ ವಿವಿಧೆಡೆಯಿಂದ 300ಕ್ಕೂ ಅಧಿಕ ಜನ ಭಾಗವಹಿಸುವ ನಿರೀಕ್ಷೆ ಇದೆ.

ಮೇಳದಲ್ಲಿ ಜೇನುತುಪ್ಪ, ಜೇನು ಸಾಕಣೆಗೆ ಪೂರಕವಾದ ಪರಿಕರಗಳು, ಜೇನು ಕೃಷಿಗೆ ಸಂಬಂಧಿಸಿದ ವಸ್ತುಪ್ರದರ್ಶನವನ್ನು ಆಯೋಜಿಸಲಾಗಿದೆ ಮಾತ್ರವಲ್ಲದೆ ಜೇನು ಕೃಷಿಕರು ಮತ್ತು ಕಂಪನಿಗಳಿಂದ ನೇರವಾಗಿ ಶುದ್ಧ ಜೇನುತುಪ್ಪ ಮಾರಾಟಕ್ಕೆ ಲಭ್ಯವಿರುತ್ತದೆ.

ಹೆಜ್ಜೆನು, ತುಡುವೆ ಜೇನು, ನಸಿರು ಜೇನುಗಳು ಮಾರಾಟಕ್ಕೆ ಲಭ್ಯವಿದ್ದು, ಜೇನು ಕೃಷಿಗೆ ಪೂರಕ ಹೂವುಗಳಾದ ಹೊಂಗೆ, ಸೂರ್ಯಕಾಂತಿ, ಲಿಚಿ ಸೇರಿ ಅನೇಕ ಹೂವಿನ ಗಿಡ ಮತ್ತು ಅದರ ಬೀಜಗಳು ಕೂಡಾ ಮಾರಾಟಕ್ಕೆ ಲಭ್ಯ.

ಈ ಮೇಳದಿಂದ ಲಾಭವೇನು ಅನ್ನುವುದಾದರೆ ಪುಟಗಟ್ಟಲೆ ಬರೆಯಬಹುದು. ಆದರೆ ನಿಜವಾದ ಪ್ರಯೋಜನವೇನು ಅನ್ನುವುದು ಮೇಳದ ನಂತರವೇ ಗೊತ್ತಾಗಲಿದೆ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: