ಕರ್ನಾಟಕದ ಗತಿ ಬೇಡವಾದ್ರೆ…ಸಚಿವ ಸ್ಥಾನ ಕೊಡಿ :ಕಮಲನಾಥ್ ಗೆ ಬಿಎಸ್ಪಿ ಶಾಸಕಿ ಎಚ್ಚರಿಕೆ

ಕರ್ನಾಟಕದಲ್ಲಿ ಸರ್ಕಾರ ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಅನ್ನುವ ಸುದ್ದಿಯ ನಡುವೆ ಮಧ್ಯ ಪ್ರದೇಶದಲ್ಲೂ ಕಮಲನಾಥ್ ಸರ್ಕಾರವನ್ನು ಕೆಳಗಿಳಿಸಲು ಬಿಜೆಪಿ ಮುಂದಾಗಿದೆಯಂತೆ.

ಮುಖ್ಯಮಂತ್ರಿ ಕಮಲನಾಥ್ ಈ ಬಗ್ಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಇದರ ಬೆನ್ನಲ್ಲೇ

ತಮಗೂ ಸಚಿವ ಸ್ಥಾನ ಬೇಕು ಎಂದು ಮಧ್ಯ ಪ್ರದೇಶ ಸಿಎಂ ಕಮಲ ನಾಥ್ ಅವರಿಗೆ ಬೇಡಿಕೆ ಇಟ್ಟಿರುವ ಬಹುಜನ ಸಮಾಜ ಶಾಸಕಿಯೊಬ್ಬರು, ತಪ್ಪಿದರೆ ಕರ್ನಾಟಕದ ಪರಿಸ್ಥಿತಿ ಎದುರಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದಲ್ಲೇನಾಗುತ್ತಿದೆ ಎಂದು ಎಲ್ಲರಿಗೂ ಗೊತ್ತಿದೆ. ಅಲ್ಲಿ ಸೃಷ್ಟಿಯಾಗಿರುವ ಪರಿಸ್ಥಿತಿ ಇಲ್ಲೂ ಆಗಬಾರದು. ಆ ರೀತಿ ಬೇಡ ಅನ್ನುವುದಾಗಿದ್ದರೆ, ಬಿಎಸ್ಪಿಗೆ ಸಚಿವ ಸ್ಥಾನ ನೀಡಿ ಎಂದು ಪತರಿಯಾ ಕ್ಷೇತ್ರದ ಶಾಸಕಿ ರಮಾಬಾಯಿ ಅಹಿರ್ವಾರ್ ಎಚ್ಚರಿಕೆ ರವಾನಿಸಿದ್ದಾರೆ.

ಸಹೋದರಿ ಮಾಯಾವತಿ ಅವರ ಬೆಂಬಲದಿಂದ ಇಲ್ಲಿ ಸರಕಾರ ನಡೆಯುತ್ತಿದೆ. ನಮ್ಮ ಪಕ್ಷದ ಶಾಸಕರಿಗೆ ಮಂತ್ರಿ ಸ್ಥಾನ ನೀಡಬೇಕು. ಕಮಲನಾಥ್ ಸರಕಾರದಲ್ಲಿ ನಮ್ಮ ಕಡೆಯಿಂದ ಇಬ್ಬರಿಗೆ ಸಚಿವ ಪದವಿ ನೀಡಬೇಕು. ನನಗೆ ಸಚಿವ ಸ್ಥಾನ ಸಿಗದಿದ್ದರೆ ನನ್ನ ವಿರೋಧವಷ್ಟೇ ಅಲ್ಲ, ಪಕ್ಷದ ಇತರರ ವಿರೋಧವನ್ನು ಸಹ ಎದುರಿಸಬೇಕಾಗುತ್ತದೆ ಎಂದಿದ್ದಾರೆ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: