Peruser!!! It is a trendy supermarket: read articles on day to day basis in English & Kannada. Read,Share & Care
ನಡೆದಾಡುವ ದೇವರು ಇನ್ನಿಲ್ಲ ಅನ್ನುವ ಸುದ್ದಿ ಕೇಳಿ ನಾಡು ಕಣ್ಣೀರಿನಲ್ಲಿ ಮುಳುಗಿದೆ. ಶತಮಾನದ ಸಂತ ಇನ್ನಿಲ್ಲ ಅನ್ನುವ ಸುದ್ದಿಯನ್ನು ನಂಬಲು ಅಸಾಧ್ಯವಾಗುತ್ತಿದೆ.
ಈ ನಡುವೆ ಶ್ರೀಗಳಿಗೆ ಗಣ್ಯರು ಅಂತಿಮ ನಮನವನ್ನು ಸಲ್ಲಿಸಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡಾ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದರು.
ಆದರೆ ರಾಹುಲ್ ಈ ವೇಳೆ ಬಳಸಿದ ಶಬ್ಧವೊಂದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಟ್ವೀಟ್ ನಲ್ಲಿ ರಾಹುಲ್ ಗಾಂಧಿ ‘Pontiff’ ಅನ್ನುವ ಶಬ್ಧ ಬಳಕೆ ಮಾಡಿದ್ದರು. ‘ Pontiff ‘ ಪದವನ್ನು ಗೂಗಲ್ ಭಾಷಾಂತರ ಟೂಲ್ ನಲ್ಲಿ ಹಾಕಿದ್ರೆ ‘ ಮಠಾಧೀಶ ‘ ಅನ್ನುವ ಅರ್ಥ ತೋರಿಸುತ್ತದೆ. ಹೀಗಾಗಿ ಅದೇನೂ ದೊಡ್ಡ ವಿಚಾರ ಎಂದು ಕನ್ನಡಿಗರಿಗೆ ಅನ್ನಿಸಿಲ್ಲ. ಆದರೂ Pontiff ಶಬ್ಧವನ್ನು ಶ್ರೀಗಳಿಗೆ ಬಳಸಬಾರದಿತ್ತು ಎಂದು ಅನೇಕ ಮಂದಿ ರಾಹುಲ್ ಗಾಂಧಿ ಟ್ವೀಟ್ ಗೆ ವಿರೋಧ ವ್ಯಕ್ತಪಡಿಸಲಾಗಿದೆ.
Pontiff ಶಬ್ಧವನ್ನು ಕೈಸ್ತ ಧರ್ಮಗುರುಗಳಿಗೆ, ಪೋಪ್ ಗಳಿಗೆ ಬಳಸಲಾಗುತ್ತದೆ, ಅದನ್ನು ಹಿಂದು ಸಂತನೊಬ್ಬನಿಗೆ ಬಳಕೆ ಮಾಡುವುದು ಎಷ್ಟರ ಮಟ್ಟಿಗೆ ಸರಿ ಅನ್ನುವುದು ನೆಟ್ಟಿಗರ ಪ್ರಶ್ನೆ.
ಜೊತೆಗೆ ರಾಹುಲ್ ಗಾಂಧಿ Mutt ಅನ್ನುವ ಶಬ್ಧ ಬಳಕೆ ಮಾಡಿರುವುದಕ್ಕೂ ತಗಾದೆ ತೆಗೆದಿದ್ದಾರೆ. ಎರಡು ಸ್ಭದಗಳನ್ನು ನೀವು ತಪ್ಪಾಗಿ ಬಳಕ್ಕೆ ಮಾಡಿದ್ದೀರಿ. ದಯವಿಟ್ಟು ಹಿಂದುತ್ವವನ್ನು ಅರ್ಥ ಮಾಡಿಕೊಳ್ಳಿ, ಬಳಿಕ ಹಿಂದೂವಾಗಲು ಮುಂದಾಗಿ ಅಂದಿದ್ದಾರೆ.
ಇದೇ ವೇಳೆ ಸಂತಾಪ ಸೂಚಿಸಿ ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ ಟ್ವೀಟ್ ಗೆ ಜನ ಭೇಷ್ ಅಂದಿದ್ದಾರೆ. ಶ್ರೀ ಶಿವಕುಮಾರ ಸ್ವಾಮೀಜಿಗಳು ಎಂದು ಕನ್ನಡ ಪ್ರಯೋಗವನ್ನು ಜನ ಭೇಷ್ ಅಂದಿದ್ದಾರೆ.