Advertisements

ಮೋದಿ ಚಹಾ ಮಾರಿಲ್ಲ ಅದೊಂದು ಗಿಮಿಕ್ : ತೊಗಾಡಿಯಾ

ಪ್ರಧಾನಿ ನರೇಂದ್ರ ಮೋದಿ ಚಹಾ ಮಾರಿದ್ದಾರೆ ಅನ್ನುವುದು ಕೇವಲ ಗಿಮಿಕ್, ಜನರ ಅನುಕಂಪ ಗಿಟ್ಟಿಸಲು ಮಾಡಿದ ಸರ್ಕಸ್ ಎಂದು ಅಂತರಾಷ್ಟ್ರೀಯ ಹಿಂದೂ ಪರಿಷತ್ ಮುಖ್ಯಸ್ಥ ಪ್ರವೀಣ್ ತೊಗಾಡಿಯಾ ಹೇಳಿದ್ದಾರೆ.

ಈ ಸಂಬಂಧ ಇಂಡಿಯಾ ಟುಡೇ ವರದಿ ಮಾಡಿದ್ದು, ಮೋದಿ ಅವರೊಂದಿಗೆ ನನಗೆ 43 ವರ್ಷಗಳ ಸ್ನೇಹವಿತ್ತು. ನಾನು ಯಾವತ್ತೂ ಅವರು ಚಹಾ ಮಾರುವುದನ್ನು ನೋಡಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

ಬಿಜೆಪಿ ಮತ್ತು ಆರ್.ಎಸ್.ಎಸ್ ಗೆ ರಾಮ ಮಂದಿರ ನಿರ್ಮಿಸುವ ಯಾವುದೇ ಉದ್ದೇಶ ಇಲ್ಲ. ಮೋದಿಯ ಹೇಳಿಕೆ ನಂತರ ಆರ್.ಎಸ್.ಎಸ್ ಮುಖ್ಯಸ್ಥ ಭಯ್ಯಾಜಿ ಜೋಶಿ ಅವರು ಮುಂದಿನ ಐದು ವರ್ಷ ರಾಮ ಮಂದಿರ ನಿರ್ಮಿಸುವುದಿಲ್ಲ ಎಂದಿದ್ದಾರೆ.

ತ್ರಿವಳಿ ತಲಾಖ್ ನಿಷೇಧ ಕಾನೂನು ಜಾರಿಗೆ ತರಲು ಪ್ರಧಾನಿ ಮೋದಿ ಹಗಲು ರಾತ್ರಿ ಪ್ರಯತ್ನಿಸಿದರು. ಆದರೆ ರಾಮ ಮಂದಿರದ ಅಂತಹ ಯಾವುದೇ ಪ್ರಯತ್ನ ಮಾಡಲಿಲ್ಲ ಎಂದರು.

ಇದೇ ವೇಳೆ ಮೋದಿ ಎರಡನೇ ಬಾರಿ ಅಧಿಕಾರಕ್ಕೆ ಬಂದರೂ ರಾಮ ಮಂದಿರ ನಿರ್ಮಿಸುವುದಿಲ್ಲ ಎಂದು ಹೇಳಿದ ತೊಗಾಡಿಯಾ ಫೆಬ್ರವರಿ 9ರಂದು ನಾನು ಹೊಸ ರಾಜಕೀಯ ಪಕ್ಷ ಘೋಷಿಸುತ್ತಿದ್ದು, ಲೋಕಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಮರುದಿನವೇ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ತೊಗಾಡಿಯಾ ಹೇಳಿದ್ದಾರೆ.

Advertisements

Leave a Reply

%d bloggers like this: