Advertisements

ಅಕ್ರಮ ಸಂಬಂಧ ಶಂಕೆ : ಪತಿಯ ಮರ್ಮಾಂಗಕ್ಕೆ ಕತ್ತರಿ ಪ್ರಯೋಗಿಸಿದ ಪತ್ನಿ

ಪತಿ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿದ್ದ ಪತ್ನಿ, ಗಂಡ ಮಲಗಿದ್ದ ವೇಳೆ ಆತನ ಮರ್ಮಾಂಗವನ್ನೇ ಕತ್ತರಿಸಿ ಹಾಕಿರುವ ಘಟನೆ ಒಡಿಶಾದಲ್ಲಿ ನಡೆದಿದೆ.

ಒಡಿಶಾದ ನಬರಾಂಗ್ಪುರ ಜಿಲ್ಲೆಯ ಉದಯ್ ಪುರ ಗ್ರಾಮದ ಟೆಂಟುಲ್ಕುಂಟಿ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದ್ದು, ಪತಿಯ ಮರ್ಮಾಂಗಕ್ಕೆ ಕತ್ತರಿ ಹಾಕಿದ ಮಹಿಳೆಯನ್ನು ಗಂಗೀ ಹರಿಜನ್ ಎಂದು ಗುರುತಿಸಲಾಗಿದೆ.
ಮಾರಣಾಂತಿಕವಾಗಿ ಹಲ್ಲೆಗೊಳಗಾದ ಪತಿಯನ್ನು ಸದಾಶಿವ ಹರಿಜನ್ ಎಂದು ಪೊಲೀಸರು ತಿಳಿಸಿದ್ದಾರೆ.

ಸದಾಶಿವ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸುತ್ತಿದ್ದ ಗಂಗೀ, ಗಂಡನ ಜೊತೆ ಪದೇ ಪದೇ ಜಗಳವಾಡುತ್ತಿದ್ದಳು. ಕಳೆದ ಭಾನುವಾರ ತಡವಾಗಿ ಮನೆಗೆ ಬಂದ ಸದಾಶಿವ ಹರಿಜನ್ ಜೊತೆ ಗಂಗೀ ಜಗಳ ತೆಗೆದಿದ್ದಾಳೆ. ರಾತ್ರಿಯೂ ಈ ಬಗ್ಗೆ ಮಾತಿನ ಚಕಮಕಿ ಬೆಳೆದಿತ್ತು.

ಭಾನುವಾರ ರಾತ್ರಿ ಊಟ ಮಾಡಿ ಮಲಗಿದ್ದ ಅವನ ಮರ್ಮಾಂಗವನ್ನು ಹರಿತವಾದ ಚಾಕುವಿನಿಂದ ಗಂಗೀ ಕತ್ತರಿಸಿ ಹಾಕಿದ್ದಾಳೆ. ನೋವಿನಿಂದ ಕಿರುಚಾಡುತ್ತಿದ್ದ ಸದಾಶಿವನನ್ನು ಗ್ರಾಮಸ್ಥರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪತ್ನಿಯನ್ನು ವಶಕ್ಕೆ ಪಡೆದಿದ್ದಾರೆ

ಸದಾಶಿವ ಹರಿಜನ್ ತಮಿಳುನಾಡಿನಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಗೊತ್ತಾಗಿದೆ.

Advertisements

Leave a Reply

%d bloggers like this: