ಪುತ್ತೂರಿನಲ್ಲಿ ವಿಸ್ಮಯ : ದೈವಗಳು ಗುರುತಿಸಿದ ಜಾಗದಲ್ಲಿ ಉಕ್ಕಿ ಹರಿದ ಗಂಗೆ

ತುಳುನಾಡು ಎಂದು ಕರೆಯಲ್ಪಡುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಹಲವಾರು ದೈವ ದೇವರುಗಳ ನೆಲೆಬೀಡು. ತುಳು ನಾಡಿನಲ್ಲಿ ಹೆಜ್ಜೆಗೊಂದರಂತೆ ದೈವಸ್ಥಾನ ದೇವಸ್ಥಾನಗಳು ಕಾಣ ಸಿಗುತ್ತದೆ. ಇಂಥಹ ಪುಣ್ಯಭೂಮಿಯಲ್ಲಿ ದೈವಿ ಪವಾಡಗಳು ಕೂಡಾ ಆಗಾಗ ನಡೆಯುತ್ತಿರುತ್ತದೆ. ಈ ಕಾರಣಕ್ಕಾಗಿಯೇ ಕರಾವಳಿಯಲ್ಲಿ ದೈವಗಳ ಮೇಲೆ ನಂಬಿಕೆ ಒಂದಿಷ್ಟು ಹೆಚ್ಚು.

ಇಂತಹ ಒಂದು ಪವಾಡ ಪುತ್ತೂರು ತಾಲೂಕಿನ ಪಾಪೆಮಜಲು ದಕ್ಷಿಣ ಕನ್ನಡ ಜಿಲ್ಲೆಯ ಅತ್ಯಂತ ಪುರಾತನ ಕೋಟಿ ಚೆನ್ನಯ್ಯ ಗರಡಿಯಲ್ಲಿ ನಡೆದಿದೆ.

ತುಳುನಾಡಿನ ಐತಿಹಾಸಿಕ ವೀರ ಪುರುಷರಾದ ಕೋಟಿ-ಚೆನ್ನಯ ಗರಡಿ ಇರುವ ಸ್ಥಳದಲ್ಲಿ ನೀರಿನ ಕೊರತೆ ಎದುರಾದ ಸಂದರ್ಭದಲ್ಲಿ ಕೈಲಾದ ಪ್ರಯತ್ನ ಮಾಡಿ ಫಲ ಕಾಣದೇ ಇದ್ದಾಗ ಗರಡಿಯ ಉಸ್ತುವಾರಿಗಳು ಕಳೆದ ಬಾರಿ ನಡೆದ ಭೂತಗಳ ನರ್ತನದ ಸಮಯದಲ್ಲಿ ಕೋಟಿ ಚೆನ್ನಯ್ಯರ ಮುಂದೆ ನೀರಿನ ಸಮಸ್ಯೆಯನ್ನು ತೋಡಿಕೊಂಡಿದ್ದರು.

ಈ ಸಂದರ್ಭದಲ್ಲಿ ಅವಳಿ ದೈವಗಳು ಅಭಯ ನೀಡಿ ತಮ್ಮ ಬಿರು ಸುರ್ಯೆ (ಆಯುಧ) ವನ್ನು ನಿಗದಿತ ಜಾಗವೊಂದರಲ್ಲಿ ಚುಚ್ಚಿ   ಸತ್ಯೋಡ್ ಬತ್ತುಂಡ ತಿಗಲೆಡ್ ಸಾದಿ, ಅನ್ಯಾಯಡ್ ಬತ್ತುಂಡ ಸುರ್ಯೋಡ್ ಸಾದಿ ( ಸತ್ಯದಿಂದ ಬಂದವರಿಗೆ ಎದೆಯಲ್ಲೇ ದಾರಿ ಕೊಡುತ್ತೇವೆ. ಅನ್ಯಾಯದಿಂದ ಬಂದವರಿಗೆ ಆಯುಧದಿಂದಲೇ ಶಿಕ್ಷೆ  ಎಂದು ನೆಲಕ್ಕೆ ಸುರ್ಯೆ ಚುಚ್ಚಿ ಗುರುತು ಮಾಡಿ ಅದೇ ಸ್ಥಳದಲ್ಲಿ ಕೊಳವೆ ಬಾವಿ ಕೊರೆಯುವಂತೆ ಸೂಚಿಸಿತ್ತು.

ದೈವದ ಆದೇಶದಂತೆ ಕೆಲ ದಿನಗಳ ಹಿಂದೆ ದೈವಗಳು ಸೂಚಿಸಿದ ಸ್ಥಳದಲ್ಲೇ ಕೊಳವೆ ಬಾವಿ ಕೊರೆಯುವ ಕಾಮಗಾರಿ ಆರಂಭಿಸಲಾಗಿತ್ತು. ಇದೀಗ ಬಾವಿ ಕೊರೆಯುತ್ತಿದ್ದ ಸ್ಥಳದಲ್ಲಿ ಭೂಮಿಯಡಿಯಿಂದ ರಭಸದಿಂದ ನೀರು ಹೊರ ಚಿಮ್ಮಿದ್ದು, ಸ್ಥಳೀಯರ ವಿಸ್ಮಯಕ್ಕೆ ಕಾರಣವಾಗಿದೆ.

ಕೊಳವೆ ಬಾವಿಯಲ್ಲಿ ಏನಿಲ್ಲ ಅಂದರೂ 4 ಇಂಚಿಗೂ ಅಧಿಕ ನೀರು ಲಬಿಸಿದೆ. ಒತ್ತಡಕ್ಕೆ ನೀರು ಬಲು ಎತ್ತರಕ್ಕೆ ಚಿಮ್ಮಿದೆ. ವೈಜ್ಞಾನಿಕ ಕಾಲದಲ್ಲಿ ಜಲ ತಜ್ಞರೇ ಹೇಳಿದ ಬೋರ್ ವೆಲ್ ಪಾಯಿಂಟ್ ಗಳು ವಿಫಲವಾಗುತ್ತದೆ. ಅಂತಹುದರಲ್ಲಿ ಕೇವಲ ಆಯುಧವನ್ನು ಚುಚ್ಚಿ ನೀರು ಶೋಧಿಸಿ ವೈಜ್ಞಾನಿಕ ತಂತ್ರಜ್ಞಾನಕ್ಕೆ ಸವಾಲು ಹಾಕಿದ್ದು ವಿಸ್ಮಯವೇ ಸರಿ.

ಬಾವಿ ಕೊರೆಯುತ್ತಿದ್ದ ಸ್ಥಳದಲ್ಲಿ ಭೂಮಿಯಡಿಯಿಂದ ರಭಸದಿಂದ ನೀರು ಹೊರ ಚಿಮ್ಮಿದ್ದು, ಸ್ಥಳೀಯರ ವಿಸ್ಮಯಕ್ಕೆ ಕಾರಣವಾಗಿದೆ. ಕೊಳವೆ ಬಾವಿ ಕೊರೆಯುವ ಸಂದರ್ಭ ವಿವಿಧ ವೈಜ್ಞಾನಿಕ ವಿಧಾನ ಅನುಸರಿಸಬೇಕಾದ ಈ ಕಾಲಘಟ್ಟದಲ್ಲಿ ದೈವಗಳು ಕೇವಲ ತನ್ನ ಆಯುಧಗಳಿಂದ ಸೂಚಿಸಿದ ಸ್ಥಳದಲ್ಲಿ ಅಗಾಧ ಪ್ರಮಾಣದ ನೀರು ಸಿಕ್ಕಿರುವುದು ದೈವದ ಇರುವಿಕೆಗೆ ಸಾಕ್ಷಿ ಅನ್ನುವುದು ಆಸ್ತಿಕರ ಅಭಿಪ್ರಾಯ

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: