ಬಳ್ಳಾರಿ ಬಾಯ್ಸ್ ಬಾಟಲಿ ಗಲಾಟೆ : ಶಾಸಕನ ತಲೆಗೆ 12 ಹೊಲಿಗೆ

ಕರ್ನಾಟಕದ ರಾಜಕಾರಣಿಗಳು ನಾವು ಬಿಹಾರದ ರಾಜಕಾರಣಿಗಳಿಗಿಂತ ಭಿನ್ನವಲ್ಲ ಎಂದು ಹಲವು ಸಲ ಸಾಬೀತು ಮಾಡಿದ್ದಾರೆ.

ವಿಧಾನಸೌಧದಲ್ಲಿ ತೊಡೆ ತೋಳು ತಟ್ಟಿದ್ದಾರೆ. ಅಂಗಿ ಹರಿದು ಹಾಕಿ ಪ್ರತಿಭಟಿಸಿದ್ದಾರೆ. ಕೈ ಎತ್ತಿ, ಬೆರಳು ತೋರಿ ಸವಾಲು ಎಸೆದಿದ್ದಾರೆ.

ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ರಾಜಕಾರಣಿಗಳು ಪರಿಸ್ಪರ ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಬಾಟಲಿಯಲ್ಲಿ ಹೊಡೆದಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಸುದ್ದಿ ವಾಹಿನಿಗಳ ವರದಿ ಪ್ರಕಾರ ಬಳ್ಳಾರಿ ಜಿಲ್ಲೆಯ ಶಾಸಕರುಗಳಾದ ಗಣೇಶ್ ಮತ್ತು ಆನಂದ್ ಸಿಂಗ್ ನಡುವೆ ಹೊಡೆದಾಟ ನಡೆದಿತ್ತು. ಗಂಭೀರವಾಗಿ ಗಾಯಗೊಂಡಿರುವ ಆನಂದ್ ಸಿಂಗ್ ಆಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರಂತೆ.

ಒಂದು ವೇಳೆ ಈ ಚಿಕಿತ್ಸೆಯ ವೆಚ್ಚದ ಬಿಲ್ ಗಳನ್ನು ಸರ್ಕಾರಕ್ಕೆ ನೀಡಿದರೆ, ರಾಜ್ಯದ ಜನತೆಯ ದುಡ್ಡಿನಲ್ಲೇ ಇವರ ವೆಚ್ಚವನ್ನು ಭರಿಸಲಾಗುತ್ತದೆ.

ಕಾಂಗ್ರೆಸ್ ರಾಜ್ಯ ಉಸ್ತುವಾರಿಯಾದ ವೇಣುಗೋಪಾಲ್ ಅವರೊಂದಿಗೆ ಶನಿವಾರ ಸಭೆ ನಿಗದಿಯಾಗಿತ್ತು. ಹೀಗಾಗಿ ವಿಧಾನಸೌಧದಿಂದ ನೇರವಾಗಿ ಶಾಸಕರು ಶುಕ್ರವಾರವೇ ರೆಸಾರ್ಟ್ ಗೆ ತೆರಳಿದ್ದರು.

ಶನಿವಾರ ರಾತ್ರಿ ಎಲ್ಲಾ ಶಾಸಕರಿಗೆ ಪಾರ್ಟಿ ಏರ್ಪಡಿಸಲಾಗಿತ್ತು. ಈ ವೇಳೆ ಬೆಳಗಿನ ಜಾವ 3 ಗಂಟೆಗೆ ಶಾಸಕರ ಪಾರ್ಟಿ ವೇಳೆ ನಡೆದ ಮಾತಿಗೆ ಮಾತು ಬೆಳೆದು ಕಂಪ್ಲಿ ಶಾಸಕ ಗಣೇಶ್ ಅವರು ಆನಂದ್ ಸಿಂಗ್ ತಲೆಗೆ ಬಾಟಲಿನಿಂದ ಏಟು ನೀಡಿದ್ದಾರೆ ಎಂದು ಸುದ್ದಿ ವಾಹಿನಿಯೊಂದು ವರದಿ ಮಾಡಿದೆ.

ಇದೀಗ ಆನಂದ್ ಸಿಂಗ್ ಅವರ ತಲೆಗೆ 12 ಹೊಲಿಗೆ ಹಾಕಲಾಗಿದೆ ಅನ್ನುವ ಮಾಹಿತಿ ಲಭ್ಯವಾಗಿದ್ದು, ಘಟನೆಗೆ ಬೇರೆಯದ್ದೇ ಕಾರಣಗಳನ್ನು ಆಸ್ಪತ್ರೆಯ ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ.

Advertisements

2 Comments on “ಬಳ್ಳಾರಿ ಬಾಯ್ಸ್ ಬಾಟಲಿ ಗಲಾಟೆ : ಶಾಸಕನ ತಲೆಗೆ 12 ಹೊಲಿಗೆ

  1. Pingback: ರವಿಚಂದ್ರನ್ ಮೇಲೆ ಅತ್ಯಾಚಾರ ಆರೋಪ ಹೊರಿಸಿದ್ದ ನಟಿಯನ್ನು ದೋಚಿದ ತಕ್ ತಕ್ ಗ್ಯಾಂಗ್! – torrentspree

  2. Pingback: ದೇವೇಗೌಡರ ಆರೋಗ್ಯ ವಿಚಾರಿಸಿದ ಪ್ರಥಮ್ :ಒಳ್ಳೆ ಹುಡುಗನ ಕಂಡು ಮಾಜಿ ಪಿಎಂ ಹೇಳಿದ್ದೇನು..? – torrentspree

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: