ಸುಳ್ಳೇ…ಸುಳ್ಳು: #10 years Challenge : ಕರ್ನಾಟಕ ಬಿಜೆಪಿಯ ಟ್ವೀಟ್ ನಲ್ಲಿ ಮೂರು ಪ್ರಮಾದಗಳು

ಸಾಮಾಜಿಕ ಜಾಲತಾಣಗಳಲ್ಲಿ ಇದೀಗ #10 years Challenge ದೊಡ್ಡದಾಗಿ ಸದ್ದು ಮಾಡುತ್ತಿದೆ. 10 ವರ್ಷಗಳ ಹಿಂದಿನ ಫೋಟೋ ಹಾಕಿ, ಆಗ ಹೀಗಿದ್ದೆವು ಎಂದು ಸಾರುವ ಕೆಲಸ ಭರ್ಜರಿಯಾಗಿ ಸಾಗುತ್ತಿದೆ.

ಇಂತಹುದೊಂದು ಟ್ರೆಂಡ್ ಪ್ರಾರಂಭವಾಗುತ್ತಿದಂತೆ ಪ್ರಧಾನಿ ಮೋದಿ ಸಾಧನೆ ತಿಳಿಸಲು ಇದೊಂದು ಉತ್ತಮ ಮಾರ್ಗ ಎಂದು ಭಾವಿಸಿತು. ಹಿಂದೆ ಮುಂದೆ ನೋಡದ ಕರ್ನಾಟಕ ಬಿಜೆಪಿ  10 years Challenge ಅನ್ನುವ ಪೋಸ್ಟ್ ಅನ್ನು ಕ್ರಿಯೇಟ್ ಮಾಡಿಯೇ ಬಿಡ್ತು.

ಹತ್ತು ವರ್ಷದ ಚಾಲೆಂಜ್, ಮೋದಿ ಸ್ಟೈಲ್ ಎಂದು ನಾಮಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಲಾಯ್ತು. ಕೆಲ ಸಂಸದರು, ಮೋದಿ ಬೆಂಬಲಿಸುವ ನಾಗರಿಕರು ಕೂಡಾ ಇದನ್ನು ಶೇರ್ ಮಾಡಲಾರಂಭಿಸಿದರು.ಮೋದಿ ಪರ ಪ್ರಚಾರಕ್ಕೆ ನಿಂತಿರುವ Nation with Namo ಮತ್ತು Bharat Positive ಪೇಜ್ ಗಳಲ್ಲಿ ಈ ಪೋಸ್ಟ್ ಭರ್ಜರಿ ಸದ್ದು ಮಾಡಿತ್ತು.

ಆದರೆ ಅಲ್ಲೇ ಎಡವಟ್ಟಾಗಿದ್ದು. ಬಿಜೆಪಿ ಕರ್ನಾಟಕ ಹರಿ ಬಿಟ್ಟ ಈ ಪೋಸ್ಟ್ ನ ಕಟೆಂಟ್ ನಲ್ಲಿ ಸತ್ಯ ಇದೆಯೋ ಗೊತ್ತಿಲ್ಲ. ಆದರೆ ಅದಕ್ಕೆ ಹಾಕಿದ ಫೋಟ್ ಮಾತ್ರ ಪಕ್ಕಾ ಸುಳ್ಳು ಹೇಳುತ್ತಿತ್ತು. 2009 ಮತ್ತು 2019ನ್ನು ಹೋಲಿಸುವ ಭರಾಟೆಯಲ್ಲಿ ಮಹಾ ಪ್ರಮಾದ ನಡೆದು ಹೋಗಿತ್ತು. ಹೋಲಿಕೆಯ ಎರಡು ಫೋಟೋ ಮತ್ತು ಕಟೆಂಟ್ ಗಳಿಗೆ ಸಂಬಂಧವೇ ಇರಲಿಲ್ಲ.

ಈ ಮೇಲಿನ ಫೋಟೋದಲ್ಲಿರುವ ಎಡ ಬದಿಯ ಚಿತ್ರವನ್ನು “ Vulnerable without toilet”  ಅನ್ನುವ ಸಾಕ್ಷ್ಯ ಚಿತ್ರದಿಂದ ಎತ್ತಿಕೊಳ್ಳಲಾಗಿದೆ.ಇದನ್ನು ‘Video Volunteers’  ಅನ್ನುವ ಯೂ ಟ್ಯೂಬ್ ಚಾನೆಲ್ ನಲ್ಲಿ 2014ರ ಮೇ ತಿಂಗಳ 23 ರಂದು ಅಪಲೋಡ್ ಮಾಡಲಾಗಿದೆ.

ಇನ್ನು ಬಲ ಭಾಗದಲ್ಲಿರುವ ಚಿತ್ರವನ್ನು 2011ರ ಅಕ್ಟೋಬರ್ 11 ರಂದು ಮಿಂಟ್ ಪತ್ರಿಕೆ ಪ್ರಕಟಿಸಿತ್ತು. ಸ್ವಚ್ಛ ಭಾರತದ ಅಂಗವಾಗಿ ಹುಂಡೈ ಕಂಪನಿ ಟಾಯ್ಲೆಟ್ ನಿರ್ಮಿಸಿಕೊಟ್ಟ ಸುದ್ದಿಯನ್ನು ಕ್ಯಾರಿ ಮಾಡುವ ಸಂದರ್ಭದಲ್ಲಿ ಈ ಫೋಟೋ ಬಳಸಿಕೊಳ್ಳಲಾಗಿತ್ತು.

ಆದರೆ ಬಿಜೆಪಿ ಇವರೆಡೂ ಫೋಟೋ ಬಳಸಿಕೊಂಡು 10 ವರ್ಷಗಳ ಸಾಧನೆ ಬಿಂಬಿಸಲು ಹೊರಟಿದೆ.

ಇನ್ನು ಇಲ್ಲಿ ಎಡ ಭಾಗದಲ್ಲಿರುವ ಫೋಟೋವನ್ನು ಹಲವು ಸಂದರ್ಭಗಳಲ್ಲಿ ಹಲವಾರು ಮಂದಿ ಬಳಸಿಕೊಂಡಿದ್ದಾರೆ. ಅದರಲ್ಲೂ 2012ರ ಅಗಸ್ಟ್ 7 ರಂದು Green Drinks Singapore ಅನ್ನುವ ವೆಬ್ ಸೈಟ್ ಈ ಫೋಟೋವನ್ನು ಬಳಸಿಕೊಂಡಿತ್ತು. Global Alliance For Clean Cookstoves ಸಂಸ್ಥೆಗೆ ಇದರ ಕ್ರೆಡಿಟ್  ನೀಡಲಾಗಿತ್ತು.

ಬಲ ಭಾಗದಲ್ಲಿರುವ ಫೋಟೋವನ್ನು Down to Earth ಪ್ರಕಾಶನ ಸಂಸ್ಥೆ 2018ರಲ್ಲಿ ಕ್ಯಾರಿ ಮಾಡಿತ್ತು. ಉಜ್ವಲ್ ಯೋಜನೆ ಕುರಿತಾದ ವಿಶೇಷ ವರದಿ ಸಂದರ್ಭದಲ್ಲಿ ಇದನ್ನು ಬಳಸಿಕೊಳ್ಳಲಾಗಿತ್ತು. ಸ್ವಾಲಿಯಾ ಬಿಬಿ ಅನ್ನುವ ಮಹಿಳೆ ಉಜ್ವಲ ಯೋಜನೆಯಿಂದ ಪ್ರಯೋಜನ ಮತ್ತು ಸಂಕಷ್ಟ ಅನುಭವಿಸಿದ ಪರಿಯನ್ನು ಈ ವರದಿಯಲ್ಲಿ ವಿವರಿಸಲಾಗಿತ್ತು.

ಮೋದಿ ಸಾಧನೆಗೂ ಈ ಫೋಟೋಗಳಿಗೂ ಯಾವುದೇ ಸಂಬಂಧವಿಲ್ಲ.

ಇನ್ನು ಇಲ್ಲಿರುವ ಎಡಭಾಗದಲ್ಲಿರುವ ಚಿತ್ರವನ್ನು ಹಲವಾರು ಲೇಖನಗಳಿಗೆ ಲೆಕ್ಕವಿಲ್ಲದಷ್ಟು ಸಲ ಬಳಸಿಕೊಳ್ಳಲಾಗಿದೆ. ಜನವರಿ 10 2011 ರಂದು ಬ್ಲಾಗೊಂದು, ಬಿಹಾರದ ವಿದ್ಯಾರ್ಥಿಗಳು ಸೀಮೆ ಎಣ್ಣೆ ಲ್ಯಾಟಿನ್ ಬಳಸಿ ಓದುತ್ತಿರುವ ಬಗೆಗಿನ ಸುದ್ದಿಗೆ ಇದನ್ನು ಬಳಸಿಕೊಳ್ಳಲಾಗಿತ್ತು.

ಬಲ ಭಾಗದಲ್ಲಿರುವ ಚಿತ್ರ ಫೆಬ್ರವರಿ 2010 Getty image ಸಂಸ್ಥೆಯ ಫೋಟೋಗ್ರಾಫರ್ ಈ ಚಿತ್ರವನ್ನು ಕ್ಲಿಕ್ಕಿಸಿದ್ದರು. ಇದೇ ಫೋಟೋವನ್ನು  The Mint ಪತ್ರಿಕೆ ಫೆಬ್ರವರಿ 24 2010 ರಂದು ಪ್ರಕಟಿಸಿತ್ತು.

ಕನಿಷ್ಟ ಪಕ್ಷ ಬಿಜೆಪಿ 2009 ಮತ್ತು 2019ರ ಫೋಟೋಗಳನ್ನು ಬಳಸಿಕೊಂಡು ಮೋದಿ ಸಾಧನೆಯನ್ನು ಕೊಂಡಾಡಬಹುದಾಗಿತ್ತು. ಆದರೆ ಬಿಜೆಪಿ ಹಾಗೇ ಮಾಡಿಯೇ ಇಲ್ಲ.

ಹಾಗಂತ ಪ್ರಧಾನಿಯಾಗಿ ನರೇಂದ್ರ ಮೋದಿ ಸಾಧನೆ ಮಾಡಿಲ್ಲವೇ..ಖಂಡಿತಾ ಮಾಡಿದ್ದಾರೆ. ಈ ಹಿಂದಿನ ಪ್ರಧಾನಿಗಳಿಗೆ ಹೋಲಿಸಿದರೆ ಮೋದಿಯವರ ಸಾಧನೆ ಅಪ್ರತಿಮ. ಆದರೆ ಮೋದಿಯವರ ಸಾಧನೆಯನ್ನು ಜನರಿಗೆ ತಲುಪಿಸುವಲ್ಲಿ ಬಿಜೆಪಿ ನಾಯಕರು ವಿಫಲರಾಗುತ್ತಿದ್ದಾರೆ ಅನ್ನುವುದಕ್ಕೆ ಇದೊಂದು ಬೆಸ್ಟ್ ಎಕ್ಸಾಂಪಲ್.

Advertisements

One Comment on “ಸುಳ್ಳೇ…ಸುಳ್ಳು: #10 years Challenge : ಕರ್ನಾಟಕ ಬಿಜೆಪಿಯ ಟ್ವೀಟ್ ನಲ್ಲಿ ಮೂರು ಪ್ರಮಾದಗಳು

  1. Pingback: ಮೋದಿ ಚಹಾ ಮಾರಿಲ್ಲ ಅದೊಂದು ಗಿಮಿಕ್ : ತೊಗಾಡಿಯಾ – torrentspree

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: