Advertisements

ಶೇಮ್..ಶೇಮ್…ಶೇಮ್ : ಸಾರ್ಥಕವಾಯ್ತು ಸಮ್ಮಿಶ್ರ ಸರ್ಕಾರ : ರೆಸಾರ್ಟ್ ಗೆ ಕಾಂಗ್ರೆಸ್

ರಾಜ್ಯ ರಾಜಕೀಯದಲ್ಲಿ ಮತ್ತೆ ರೆಸಾರ್ಟ್ ರಾಜಕೀಯ ಪ್ರಾರಂಭಗೊಂಡಿದೆ. ಅತ್ತ ಅಪರೇಷನ್ ಕಮಲ ಸಲುವಾಗಿ ಬಿಜೆಪಿ ಶಾಸಕರು ಗುರುಗ್ರಾಮದಲ್ಲಿ ರೆಸಾರ್ಟ್ ಸೇರಿ ಮಜಾ ಉಡಾಯಿಸುತ್ತಿದ್ದಾರೆ. ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ ಅನ್ನುವ ಪರಿಜ್ಞಾನವಿಲ್ಲದ ಮಂದಿ, ಮತದಾರರು ಕುಡಿಯಲು ನೀರಿಲ್ಲದೆ ಪರದಾಡುತ್ತಿದ್ದಾರೆ, ಜಾನುವಾರುಗಳು ಮೇವಿಲ್ಲದೆ ಸಾಯುತ್ತಿವೆ ಅನ್ನುವುದನ್ನೇ ಮರೆತಿದ್ದಾರೆ.

ಮತ್ತೊಂದು ಕಡೆ ಬಿಜೆಪಿ ನಡೆಯನ್ನು ಕಾಂಗ್ರೆಸ್ ಟೀಕಿಸಿದ್ದು, ರೆಸಾರ್ಟ್ ರಾಜಕೀಯವನ್ನು ವ್ಯಂಗ್ಯ ಮಾಡುತ್ತಿದೆ. ಆದರೆ ಇದೇ ಕಾಂಗ್ರೆಸ್ ತನ್ನ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ರೆಸಾರ್ಟ್ ರಾಜಕೀಯ ಶುರುವಿಟ್ಟುಕೊಂಡಿದೆ.

ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಮುಗಿಸಿದ ಬೆನ್ನಲ್ಲೇ ಎಲ್ಲಾ ಶಾಸಕರನ್ನು ಉಟ್ಟ ಬಟ್ಟೆಯಲ್ಲೇ ಬಸ್ ಹತ್ತಿಸಿ ಈಗಲ್ ಟನ್ ರೆಸಾರ್ಟ್ ಕಳುಹಿಸಲಾಗಿದೆ.

ನಿಜಕ್ಕೂ ಇದನ್ನು ಶೇಮ್ ಅನ್ನದೆ ವಿಧಿಯಿಲ್ಲ. ಮತದಾರನ್ನು ಮರೆತ ರಾಜಕೀಯ ಪಕ್ಷಗಳನ್ನು ಬೈಯಲು ಪದಗಳೇ ಇಲ್ಲ. ಜನತೆ ಉತ್ತಮ ಆಡಳಿತ ಕೊಡಲು ಸಾಧ್ಯವಿಲ್ಲ ಅನ್ನುವುದಾದರೆ ರಾಜಕೀಯವನ್ನು ಬಿಟ್ಟು ತೊಲಗಲಿ. ಹೊಸ ಮುಖಗಳು ರಾಜ್ಯವನ್ನು ಆಳ್ವಿಕೆ ಮಾಡಲು ಅವಕಾಶ ಕೊಡಲಿ ಅದನ್ನು ಬಿಟ್ಟು ರೆಸಾರ್ಟ್ ನಲ್ಲಿ ಮೋಜು ಮಸ್ತಿ ಮಾಡುವುದಕ್ಕೆ ಇವರಿಗೆ ಶಾಸಕ ಅನ್ನುವ ಹುದ್ದೆ ಯಾವ ಪುರುಷಾರ್ಥಕ್ಕೆ.

ಅವತ್ತು ಬಿಜೆಪಿಯ ರೆಸಾರ್ಟ್ ರಾಜಕೀಯವನ್ನು ಟೀಕಿಸಿ ಕಾಂಗ್ರೆಸ್ ಕಾರ್ಯಕರ್ತರು ಬೀದಿಯಲ್ಲಿ ಪ್ರತಿಭಟಿಸಿದ್ರಲ್ಲ. ಎಲ್ಲಿ ಹೋದ್ರು ಈಗ ಅವರೆಲ್ಲ.

ಅದಕ್ಕಿಂತಲೂ ಮಜಾ ಕೇಳಿ. ರೆಸಾರ್ಟ್ ರಾಜಕೀಯವನ್ನು ಸಮರ್ಥಿಸಿಕೊಂಡಿರುವ ಸಿದ್ದರಾಮಯ್ಯ ಬರಗಾಲ ಕುರಿತಂತೆ ಚರ್ಚೆ ನಡೆಸಬೇಕಾಗಿದೆ. ಅದಕ್ಕೆ ರೆಸಾರ್ಟ್ ಕಡೆಗೆ ಹೋಗುತ್ತಿದ್ದೇವೆ ಅಂದಿದ್ದಾರೆ. ಅರೇ… ಬರಗಾಲ ಬಗ್ಗೆ ಚರ್ಚೆ ನಡೆಸಲು ಸರ್ಕಾರದ ದುಡ್ಡಿನಲ್ಲಿ ಕಟ್ಟಿದ ಜಿಲ್ಲಾಧಿಕಾರಿ ಕಚೇರಿ ಇದೆ, ವಿಧಾನಸೌಧವಿದೆ. ಅದನ್ನು ಬಿಟ್ಟು ಐಷಾರಾಮಿ ರೆಸಾರ್ಟ್ ಬೇಕಾ.

ಜನ ನೀರಿಲ್ಲದೆ ಸಾಯುತ್ತಿದ್ದಾರೆ, ಇವರಿಗೆ ಬಿಯರ್ ಬೇಕು. ನಿಜಕ್ಕೂ ಕಾಂಗ್ರೆಸ್ ಮತ್ತು ಬಿಜೆಪಿ ಇಬ್ಬರಿಗೂ ನಾಚಿಕೆಯಾಗಬೇಕು.

ಮತ ಕೊಟ್ಟ ನಾವು ಬಕ್ರಗಳು, ಬನ್ನಿ ಲೋಕಸಭೆ ಎಲೆಕ್ಷನ್ ಹೊತ್ತಿಗೆ ಜನ ಪಾಠ ಕಲಿಸುವುದು ಖಚಿತ. ಮತ್ತೆ ವಿಧಾನ ಸಭೆ ಚುನಾವಣೆ ಬಂದೇ ಬರುತ್ತದೆ. ಮತ ಬೇಕು ಎಂದು ಮನೆ ಬಾಗಿಲಿಗೆ ಬಂದಾಗ ಅದ್ಯಾವ ಪಾಠ ಕಲಿಸಬೇಕೋ ಜನ ಖಂಡಿತಾ ಕಲಿಸುತ್ತಾರೆ.

ಹಿಂದಿನಂತೆ ಮತದಾರರು ಮುಗ್ಧರಾಗಿ ಉಳಿದಿಲ್ಲ. ನಿಮ್ಮ ಆಶೆ ಅಮಿಷಗಳಿಗೆ ಬಲಿಯಾಗುವ ಜನರೂ ಈಗಿಲ್ಲ.

ರೆಸಾರ್ಟ್ ಗೆ ಹೋಗುತ್ತಿರುವ ಶಾಸಕರೇ ನೆನಪಿಡಿ, ಮನೆಗೆ ಹೋಗಲು ಸಿದ್ದರಾಗಿ.

Advertisements

One Comment on “ಶೇಮ್..ಶೇಮ್…ಶೇಮ್ : ಸಾರ್ಥಕವಾಯ್ತು ಸಮ್ಮಿಶ್ರ ಸರ್ಕಾರ : ರೆಸಾರ್ಟ್ ಗೆ ಕಾಂಗ್ರೆಸ್

  1. Pingback: ಮೋದಿ ಚಹಾ ಮಾರಿಲ್ಲ ಅದೊಂದು ಗಿಮಿಕ್ : ತೊಗಾಡಿಯಾ – torrentspree

Leave a Reply

%d bloggers like this: