ಜನವರಿ 24 ರಂದು ನಿಮ್ಮ ಮನೆ ಟಿವಿ ಪ್ರತಿಭಟಿಸಲಿದೆ.. ಸಮಸ್ಯೆ ಅವರದ್ದು ಶಿಕ್ಷೆ ನಮಗೆ..!

ಯಾರೆಲ್ಲಾ ಕೇಬಲ್ ಅಪರೇಟರ್ ಗಳ ಕನೆಕ್ಷನ್ ಸಹಾಯದಿಂದ ಟಿವಿ ನೋಡ್ತಿರೋ ಇದೇ ತಿಂಗಳ 24 ರಂದು ನಿಮ್ಮ ಕಣ್ಣಿಗೆ ರೆಸ್ಟ್ ಸಿಗಲಿದೆ.

ಅವತ್ತು ಒಂದು ದಿನ ನಿಮ್ಮ ಟಿವಿಯಲ್ಲಿ ಯಾವುದೇ ವಾಹಿನಿಗಳು ಪ್ರಸಾರವಾಗುವುದಿಲ್ಲ.

ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾದ ಹೊಸ ದರ ನಿಗದಿಗೆ ಕೇಬಲ್ ಆಪರೇಟರ್​​ಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಈ ಹಿನ್ನೆಲೆಯಲ್ಲಿ ಜನವರಿ 24 ರಂದು ರಾಜ್ಯದಲ್ಲಿ ಕೇಬಲ್ ಟಿವಿ ಬಂದ್​ ಮಾಡಲು ರಾಜ್ಯ ಕೇಬಲ್ ಆಪರೇಟರ್​​ಗಳು ತೀರ್ಮಾನಿಸಿದ್ದಾರೆ.

ಫೆಬ್ರವರಿ 1ರಿಂದ TRAI ಹೊಸ ದರ ನಿಗದಿಪಡಿಸಲು ಮುಂದಾಗಿದೆ. ಈ ಬೆಂಗಳೂರಿನಲ್ಲಿ ಸಭೆ ನಡೆಸಿದ ಕರ್ನಾಟಕ ರಾಜ್ಯ ಕೇಬಲ್ ಆಪರೇಟರ್​​ಗಳು TRAI ವಿರುದ್ಧ ತಿರುಗಿ  ಬೀಳಲು ಮುಂದಾಗಿದ್ದಾರೆ.

ಜನವರಿ 24 ರಂದು ರಾಜ್ಯದಲ್ಲಷ್ಟೇ ಅಲ್ಲದೇ, ಇಡೀ ದಕ್ಷಿಣ ಭಾರತದಲ್ಲಿ ಕೇಬಲ್ ಸ್ಥಗಿತಗೊಳಿಸುವ ಮೂಲಕ ಪ್ರತಿಭಟನೆಗೆ ನಿರ್ಧರಿಸಿರುವುದಾಗಿ ರಾಜ್ಯ ಕೇಬಲ್ ಟಿವಿ ಆಪರೇಟರ್ಸ್ ಅಸೋಸಿಯೇಶನ್ ಅಧ್ಯಕ್ಷ ಪ್ಯಾಟ್ರಿಕ್ ರಾಜು ಹೇಳಿದ್ದಾರೆ.

ಎಲ್ಲಾ ಸರಿ ಅನ್ಯಾಯವಾದ ವೇಳೆ ಪ್ರತಿಭಟಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಹಾಗಂತ ಗ್ರಾಹಕರಿಗೆ ಅದ್ಯಾಕೆ ಬರೆ ಎಳೆಯುತ್ತೀರಿ. ನಿಮಗೆ ಅನ್ಯಾಯವಾಗಿದೆ ಅನ್ನುವುದೇ ಆಗಿದ್ದರೆ ಕೋರ್ಟ್ ಮೆಟ್ಟಿಲೇರಿ. ಭಾರತ ಪವಿತ್ರ ಸಂವಿಧಾನ ನ್ಯಾಯಾಲಯ ಅನ್ನುವ ಅದ್ಭುತ ವ್ಯವಸ್ಥೆಯನ್ನು ದೇಶಕ್ಕೆ ಕೊಟ್ಟಿದೆ. ಟ್ರಾಯ್ ನಿರ್ಧಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿಲ್ಲ ಅಂದರೆ ನಿಮ್ಮದೇ ತಪ್ಪಿರಬೇಕಲ್ವ.

ಹೋಗ್ಲಿ 24 ರಂದು ಕೇಬಲ್ ಪ್ರಸಾರ ಸ್ಥಗಿತಗೊಳಿಸುವ ಕೇಬಲ್ ಅಪರೇಟರ್ ಗಳು ಅವತ್ತು ಒಂದು ದಿನದ ದುಡ್ಡನ್ನು ಮೈನಸ್ ಮಾಡಿ ತಿಂಗಳ ಮೊತ್ತವನ್ನು ಸ್ವೀಕರಿಸುತ್ತಾರೆಯೇ..ಖಂಡಿತಾ ಇಲ್ಲ ತಾನೇ.

ಹಲವು ಕಡೆಗಳಲ್ಲಿ ಕೇಬಲ್ ಟಿವಿ ಅಪರೇಟರ್ ಗಳ ಮೇಲೆ ನೂರಾರು ದೂರುಗಳಿವೆ. ಗ್ರಾಹಕರಿಗೆ ಸ್ಪಂದಿಸದ ಹಲವಾರು ಕೇಬಲ್ ಅಪರೇಟರ್ ಗಳಿದ್ದಾರೆ. ಕೆಲವೊಂದು ಕಡೆ ಅದ್ಭುತ ಸೇವೆ ಕೊಡಬಲ್ಲ ಅಪರೇಟರ್ ಗಳು ಕೂಡಾ ಇದ್ದಾರೆ.

ಆದರೆ ಅದನ್ನು ಬಿಟ್ಟು ಕೇಬಲ್ ಅಪರೇಟರ್ ಗಳಿಗೆ ಅನ್ಯಾಯವಾಗಿದೆ ಎಂದು ಗ್ರಾಹಕರಿಗೆ ಅನ್ಯಾಯ ಮಾಡುವುದು ಸರಿಯೇ..?

ಡಿಟಿಎಚ್ ಸಂಸ್ಥೆಗಳಿಗೆ ಪೈಪೋಟಿ ನೀಡುವ ರೀತಿಯಲ್ಲಿ ಕೇಬಲ್ ಅಪರೇಟರ್ ಗಳು ಸೇವೆ ನೀಡಲು ಮುಂದಾದರೆ ಜನ ಮೆಚ್ಚುತ್ತಾರೆ.

ಓದುಗರೇ ನಿಮ್ಮ ಏರಿಯಾದಲ್ಲಿ ಕೇಬಲ್ ಅಪರೇಟರ್ ಗಳಿಂದ ಆಗುತ್ತಿರುವ ಸಮಸ್ಯೆಯೇನು… ನಿಮಗಾಗುತ್ತಿರುವ ಅನ್ಯಾಯವೇನು ಕಮೆಂಟ್ ಮಾಡಿ. ಕೇಬಲ್ ಅಪರೇಟರ್ ಗಳು ಈ ಮೂಲಕವಾದರೂ ಎಚ್ಚೆತ್ತುಕೊಳ್ಳಲಿ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: