ಆಪರೇಷನ್ ಸಂಕ್ರಾಂತಿ : ಸಚಿವ ಸ್ಥಾನ ತ್ಯಜಿಸಲು ಮುಂದಾದ ನಾಲ್ವರು

ಸಮ್ಮಿಶ್ರ ಸರ್ಕಾರಕ್ಕೆ ಸಂಕಷ್ಟ ಬಂದೊಡ್ಡಿರುವುದು ಸ್ಪಷ್ಟವಾಗಿದೆ. ಸರ್ಕಾರ ಉರುಳಿಸಲು ಟೊಂಕ ಕಟ್ಟಿ ನಿಂತಿರುವ ಬಿಜೆಪಿ ಗುರಿ ತಲುಪಲು ನಾಲ್ಕೈದು ಹೆಜ್ಜೆಗಳೇ ಬಾಕಿ.

ಹೀಗಾಗಿ ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ರಣತಂತ್ರ ಹೆಣೆಯಲಾರಂಭಿಸಿದೆ.ಎಂದಿನಂತೆ ಕಾಂಗ್ರೆಸ್ ಪಾಲಿನ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಅವರಿಗೆ ಈ ಜವಾಬ್ದಾರಿ ವಹಿಸಲಾಗಿದೆ. ಮತ್ತೊಂದು ಕಡೆ ಬೆಂಗಳೂರಿಗೆ ಆಗಮಿಸಿರುವ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆಸಿ ವೇಣುಗೋಪಾಲ್ ಆಪರೇಷನ್ ಸಂಕ್ರಾಂತಿ ವಿಫಲಗೊಳಿಸುವುದು ಹೇಗೆ ಎಂದು ನಾಯಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.

ಈ ನಡುವೆ ಮೈತ್ರಿ ಸರ್ಕಾರ ಉಂಟಾಗಿರುವ ಅಸ್ಥಿರತೆ ದೂರ ಮಾಡಲು ಸಮ್ಮಿಶ್ರ ಸರ್ಕಾರದಲ್ಲಿರುವ ಕಾಂಗ್ರೆಸ್ ಪಕ್ಷದ ನಾಲ್ವರು ಸಚಿವರು ನಾವು ರಾಜೀನಾಮೆ ಕೊಡಲು ಸಿದ್ದ. ನಮ್ಮ ಸ್ಥಾನವನ್ನು ಸಚಿವರಾಂಕ್ಷಿಗಳಿಗೆ ಬಿಟ್ಟುಕೊಟ್ಟು ಸರ್ಕಾರ ಉಳಿಸಿಕೊಳ್ಳಿ ಅಂದಿದ್ದಾರೆ,

ಕೈಗಾರಿಕೆ ಸಚಿವ ಕೆ.ಜೆ. ಜಾರ್ಜ್, ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಮತ್ತು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ತ್ಯಾಗಕ್ಕೆ ಸಿದ್ದರಾಗಿದ್ದಾರೆ ಎನ್ನಲಾಗಿದೆ.

ಸಂಪುಟ ಸ್ಥಾನ ಸಿಗಲಿಲ್ಲ, ನಿಗಮ ಮಂಡಳಿ ಕೈಗೆ ಸಿಗಲಿಲ್ಲ ಎಂದು ನೊಂದಿರುವ ಶಾಸಕರನ್ನು ಸಮಾಧಾನಗೊಳಿಸಲು ಇದೊಂದು ಮಾರ್ಗ ಎಂದು ರಾಜೀನಾಮೆ ಕೊಡಲು ಮುಂದಾಗಿರುವ ಸಚಿವರು ನಾಯಕರಿಗೆ ಮನವರಿಕೆ ಮಾಡಲು ಮುಂದಾಗಿದ್ದಾರೆ.

ಈ ಮೂಲಕ ರಾಷ್ಟ್ರೀಯ ನಾಯಕರ ಅನುಕಂಪ ಗಿಟ್ಟಿಸಿಕೊಳ್ಳಲು ಮುಂದಾಗಿದ್ದಾರೆ. ಹೀಗೆ ಸಂಕಷ್ಟ ಕಾಲದಲ್ಲಿ ರಾಜೀನಾಮೆ ನೀಡಿದರೆ, ಪಕ್ಷದಲ್ಲಿ ತ್ಯಾಗಮಯಿ ಅನ್ನುವ ಹೆಸರು ಬಂದರೆ ಮುಂದಿನ ದಿನಗಳಲ್ಲಿ ಸಾಕಷ್ಟು ಅನುಕೂಲಗಳಿವೆ ಅನ್ನುವುದು ರಾಜೀನಾಮೆ ಕೊಡಲು ಮುಂದಾದ ನಾಯಕರಿಗೂ ಗೊತ್ತಿದೆ.

Advertisements

One Comment on “ಆಪರೇಷನ್ ಸಂಕ್ರಾಂತಿ : ಸಚಿವ ಸ್ಥಾನ ತ್ಯಜಿಸಲು ಮುಂದಾದ ನಾಲ್ವರು

  1. Pingback: ಅಪರೇಷನ್ ಸಂಕ್ರಾಂತಿ : ಕಾಂಗ್ರೆಸ್ ಮನೆಯಲ್ಲಿ ಬೆಂಕಿ : ಕುಮಾರಸ್ವಾಮಿ ಫುಲ್ ಕೂಲ್ – torrentspree

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: