Advertisements

ಸರ್ಕಾರದ ಬಗ್ಗೆ ಡೋಂಟ್ ಕೇರ್ …ಮಗ ಅಭಿಮನ್ಯು ಪಾತ್ರ ಹೇಗೆ ಮಾಡಿದ್ದಾನೆ ಅನ್ನೋದೇ ವರಿ

ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎದ್ದಿದೆ. ಕಮಲ ಪಾಳಯದ ಅಪರೇಷನ್ ಕಮಲದ ಹೊಡೆತಕ್ಕೆ ಕಾಂಗ್ರೆಸ್ ನಾಯಕರು ತತ್ತರಿಸಿ ಹೋಗಿದ್ದಾರೆ. ಈ ನಡುವೆ ಸಿಎಂ ಕುಮಾರಸ್ವಾಮಿ ಏನು ಆಗಿಲ್ಲ ಅನ್ನುವಂತೆ ನಡೆದುಕೊಳ್ಳುತ್ತಿರುವುದು ಕುತೂಹಲ ಹುಟ್ಟಿಸಿದೆ.

ಕಾಂಗ್ರೆಸ್ ನಾಯಕರು ಸರಣಿ ಸಭೆಗಳನ್ನು ನಡೆಸುತ್ತಿದ್ದರೆ, ಕುಮಾರಸ್ವಾಮಿ ಮಾತ್ರ ತನಗೇನೂ ಸಂಬಂಧವಿಲ್ಲ, ಅವೆಲ್ಲಾ ಕಾಂಗ್ರೆಸ್ ನಾಯಕರ ತಲೆನೋವು ಕಾಲ ಕಳೆಯುತ್ತಿದ್ದಾರೆ.

ಈ ನಡುವೆ ಶಾಸಕ ಮುನಿರತ್ನ ಮನೆಗೆ ಎಂಟ್ರಿ ಕೊಟ್ಟ ಕುಮಾರಸ್ವಾಮಿ, ಕುರುಕ್ಷೇತ್ರ ಚಿತ್ರದಲ್ಲಿ ನಿಖಿಲ್ ಅಭಿನಯದ ಭಾಗವನ್ನು ಕೂತು ನೋಡಿದರು. ಮಗನ ಅಭಿನಯ ಹೇಗಿದೆ ಅನ್ನುವುದನ್ನು ಸವಿದ ಕುಮಾರಸ್ವಾಮಿ ನಿಖಿಲ್ ಭಾಗದ ಟೀಸರ್ ಅನ್ನು ಕೂಡಾ ವೀಕ್ಷಿಸಿದರು.

ಇದೇ ವೇಳೆ ಮಾತನಾಡಿದ ಕುಮಾರಸ್ವಾಮಿ, ಕುರುಕ್ಷೇತ್ರ ಚಿತ್ರ ಮುನಿರತ್ನ ಅವರ ಕನಸಿನ ಪ್ರಾಜೆಕ್ಟ್. ಕನ್ನಡ ಚಿತ್ರರಂಗಕ್ಕೆ ಹೊಸ ಮೈಲಿಗಲ್ಲಾಗಲಿದೆ ಇದು. ತಾಂತ್ರಿಕವಾಗಿ ತುಂಬಾ ಶ್ರೀಮಂತ ಚಿತ್ರ ಇದಾಗಿದ್ದು, ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆಯನ್ನು ಈ ಚಿತ್ರ ಬರೆಯಲಿದೆ ಎಂದರು.

ಇನ್ನು ನಿಖಿಲ್ ಅಭಿನಯ ಕುರಿತಂತೆ ಮಾತನಾಡಿದ ಕುಮಾರಸ್ವಾಮಿ, ನಿರ್ಮಾಪಕ ಮುನಿರತ್ನ ಅವರ ಆಸೆಗೆ ನಿಖಿಲ್ ನಿರಾಸೆ ಮಾಡಿಲ್ಲ. ಅವರ ನಿರೀಕ್ಷೆಯನ್ನು ಮುಟ್ಟುವ ಪ್ರಯತ್ನ ಮಾಡಿದ್ದಾನೆ ಎಂದು ಮಗನ ಅಭಿನಯಕ್ಕೆ ಭೇಷ್ ಅಂದಿದ್ದಾರೆ.

ಕುಮಾರಸ್ವಾಮಿ ಕೂಲ್ ಆಗಿರುವುದನ್ನು ನೋಡಿದರೆ, ಸರ್ಕಾರ ಉಳಿದರೆ ಕ್ರೆಡಿಟ್ ನನಗೆ, ಉರುಳಿದರೆ ಕಾಂಗ್ರೆಸ್ ತಲೆಗೆ ಅನ್ನುವಂತಿದೆ.

Advertisements

Leave a Reply

%d bloggers like this: