ಅಪರೇಷನ್ ಕಮಲದ ಮಾಹಿತಿ ಆ ಮೂವರಿಗೆ ಗೊತ್ತಿತ್ತು…! ಡಿಕೆಶಿ ಬಾಂಬ್

ಡಿಕೆಶಿ ವೈಲೆಂಟ್..ಸಿದ್ದು ಸೈಲೆಂಟ್..ಹೆಚ್ಡಿಕೆ ನೋ ಟೆನ್ಸನ್

ಐದು ವರ್ಷಗಳ ನಮ್ಮದೇ ಸರ್ಕಾರ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಆತ್ಮ ವಿಶ್ವಾಸದಿಂದ ನುಡಿದಿದ್ದರು. ಆಣೆ ಪ್ರಮಾಣದಲ್ಲಿ ಸಿದ್ದ ಹಸ್ತರಾದವರು ಕೂಡಾ ಸರ್ಕಾರವನ್ನು ಅಲುಗಾಡಿಸಲು ಸಾಧ್ಯವೇ ಇಲ್ಲ ಅಂದಿದ್ದರು.

ಆದರೆ ಇದೀಗ ಸರ್ಕಾರದ ಬುಡ ಅಲ್ಲಾಡುತ್ತಿದೆ. ಕಾಂಗ್ರೆಸ್ ಸಮರೋಪಾದಿಯಲ್ಲಿ ಪರಿಹಾರ ಕ್ರಮಗಳನ್ನು ಕಂಡುಕೊಂಡರೆ ಮಾತ್ರ ಸರ್ಕಾರ ಉಳಿಸಲು ಸಾಧ್ಯ. ಇಲ್ಲವಾದ್ರೆ ಸರ್ಕಾರವನ್ನು ಉರುಳಿಸುವುದು ಗ್ಯಾರಂಟಿ. ಆದರೆ ಕಾಂಗ್ರೆಸ್ ಪಾಲಿನ ಟ್ರಬಲ್ ಶೂಟರ್ ಅಖಾಡಕ್ಕೆ ಇಳಿಯುವ ಲಕ್ಷಣ ಗೋಚರಿಸುತ್ತಿಲ್ಲ. ಹೀಗಾಗಿ ಸಮ್ಮಿಶ್ರ ಸರ್ಕಾರ ಉಳಿಯುವ ಲಕ್ಷಣವೂ ಕಾಣಿಸುತ್ತಿಲ್ಲ.

ಇದಕ್ಕೆ ಸಾಕ್ಷಿ ಅನ್ನುವಂತೆ ಡಿಕೆ ಶಿವಕುಮಾರ್ ಮಾತನಾಡಿದ್ದಾರೆ. ಮೂವರಿಗೆ ಮುಂದೊಂದು ದಿನ ಸಮಸ್ಯೆ ಬರಲಿದೆ ಅನ್ನುವುದು ಗೊತ್ತಿತ್ತು. ಆದರೆ ಅದನ್ನು ನಿರ್ಲಕ್ಷ್ಯ ಮಾಡಿದರು. ನಾನಾಗಿದ್ರೆ ಸುಮ್ನೆ ಇರ್ತಿರ್ಲಿಲ್ಲ ಎಂದು ಬಹಿರಂಗವಾಗಿಯೇ ಡಿಕೆಶಿ ಹೇಳಿರುವುದು ಕುತೂಹಲ ಕೆರಳಿಸಿದೆ.

ಡಿಕೆಶಿ ಮಾತುಗಳು

“ ಏನೇನು ಟ್ರಾನ್ಸ್ ಫರ್ ಆಗಿದೆ, ಏನೇನು ಮಾತುಕತೆ ಆಗಿದೆ ಎಲ್ಲಾ ಕೂಡಾ ಇದೆ. ಮುಖ್ಯಮಂತ್ರಿಗಳು ಸ್ವಲ್ಪ ಲಿನಿಯೆಂಟ್ ಆಗಿದ್ದಾರೆ. ಬಿಜೆಪಿಯವರ ಮೇಲೆ. ಸ್ವಲ್ಪ ಲಿನಿಯೆಂಟ್ ಅಂದ್ರೆ ಏನು ಅವರಿಗೆ ವಿಚಾರ ಗೊತ್ತಿದೆ, ಇನ್ನು ಅದನ್ನ ಬಿಚ್ಚಿಡುತ್ತಿಲ್ಲ. ಎಲ್ಲಾ ಶಾಸಕರುಗಳು ಹೋಗಿ ಮುಖ್ಯಮಂತ್ರಿಗಳ ಹತ್ತಿರ ಏನೇನು conspiracy ನಡೆಯುತ್ತಿದೆ ಅಂತಾ ತಿಳಿಸಿದ್ದಾರೆ. ಸಿದ್ದರಾಮಯ್ಯ ಹತ್ತಿರವೂ ತಿಳಿಸಿದ್ದಾರೆ. ಸ್ಪಲ್ಪ ಇರ್ಲಿ ನೋಡೋಣ, ಸ್ಪಲ್ಪ ಇರ್ಲಿ ನೋಡೋಣ ಅಂತಾ ಹೇಳಿ ಮುಖ್ಯಮಂತ್ರಿಗಳು ಸುಮ್ಮನಾಗಿದ್ದಾರೆ. ನಾನಾಗಿದ್ರೆ 24 ಗಂಟೆಗಳಲ್ಲಿ Expose ಮಾಡುತ್ತಿದ್ದೆ.

ಎಲ್ಲಾ MLA ಗಳು ಬಂದು ಹೇಳಿಕೊಂಡಿದ್ದಾರೆ. ಏನೇನು ಆಫರ್ ಮಾಡಿದ್ದಾರೆ, ಏನೇನು ಮಾಡಿದ್ದಾರೆ, ಆಪರೇಷನ್ ಲೋಟಸ್ ಹಿಂದೆ ಯಾವ ರೀತಿ ನಡೆದಿತ್ತು. ಆ ರೀತಿ ಬಂದು ಹೇಳಿಕೊಂಡಿದ್ದಾರೆ.

ಇವೆಲ್ಲವೂ ಸಿದ್ದರಾಮಯ್ಯ ಅವರಿಗೂ ಗೊತ್ತಿದೆ. ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲ ಅಂತಾ ಏನಿಲ್ಲ. ದಿನೇಶ್ ಗುಂಡೂರಾವ್ ಅವರಿಗೂ ಗೊತ್ತಿದೆ. ಎಲ್ಲಾ ಟೈಮ್. ಆದರೆ ನನಗೆ ಸರಿಯಾಗಿ ಗೊತ್ತಿಲ್ಲ ಎಂದು ಡಿಕೆಶಿ ಅಸಮಾಧಾನದ ಮಾತುಗಳಿಗೆ ಪೂರ್ಣ ವಿರಾಮ ಹಾಕಿದ್ದಾರೆ.

ಇವೆಲ್ಲಾ ಗೊತ್ತಿತ್ತು ಅಂದ ಮೇಲೆ ಡಿಕೆಶಿ ಸೈಲೆಂಟ್ ಆಗಿದ್ದು ಯಾಕೆ. ನಾನು ಪುಟ್ಭಾಲ್ ಆಡೋದಿಲ್ಲ ಚೆಸ್ ಆಡ್ತೀನಿ ಅಂದ ಡಿಕೆಶಿ ಇದೀಗ ಚೆಕ್ ಯಾರಿಗೆ ಇಟ್ಟರು ಅನ್ನುವುದೇ ಅರ್ಥವಾಗುತ್ತಿಲ್ಲ.

ಆದರೆ ಡಿಕೆಶಿ ಮಾತುಗಳನ್ನು ಕೇಳಿದ ಎರಡು ಘಟನೆಗಳನ್ನು ನೆನಪಿಸಿಕೊಳ್ಳಿ. ಮೊದಲನೇಯದ್ದು ಡಿಕೆಶಿ ಮನೆ ಮೇಲೆ ಐಟಿ ರೈಡ್. ಮತ್ತೊಂದು ಕಡೆ ಮಾಜಿ ಸಿಎಂ ಯಡಿಯೂರಪ್ಪ ಅವರೇ ಡಿಕೆಶಿ ಮನೆಗೆ ಅದ್ಯಾವುದೋ ಕಾಮಗಾರಿ ಬಗ್ಗೆ ಮಾತನಾಡಲು ಭೇಟಿ ಕೊಟ್ಟಿದ್ದು.

ಏನಾಗಿರಬಹುದು ಅನ್ನುವುದನ್ನು ಊಹಿಸುವುದು ಓದುಗರಿಗೆ ಬಿಟ್ಟಿದ್ದು.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: