ಅಪರೇಷನ್ ಸಂಕ್ರಾಂತಿ : ಕಾಂಗ್ರೆಸ್ ಮನೆಯಲ್ಲಿ ಬೆಂಕಿ : ಕುಮಾರಸ್ವಾಮಿ ಫುಲ್ ಕೂಲ್

ರಾಜ್ಯ ರಾಜಕೀಯದಲ್ಲಿ ಸಿಕ್ಕಾಪಟ್ಟೆ ಬೆಳವಣಿಗೆ ಸಂಭವಿಸುತ್ತಿದೆ. ಅಪರೇಷನ್ ಕಮಲಕ್ಕೆ ಕೈ ಹಾಕಿರುವ ಬಿಜೆಪಿ ನಾಯಕರು ದೆಹಲಿ, ಮುಂಬೈ, ಗುರುಗ್ರಾಮದಲ್ಲಿ ಕೂತು ಕರ್ನಾಟಕದ ರಾಜ್ಯದ ರಾಜಕೀಯ ಭವಿಷ್ಯ ಬರೆಯುತ್ತಿದ್ದಾರೆ.

ಗಮನಿಸಬೇಕಾಗಿರುವ ಅಂಶ ಅಂದರೆ ಬಿಜೆಪಿ ಈ ಬಾರಿ ಟಾರ್ಗೇಟ್ ಮಾಡಿರುವುದು ಕಾಂಗ್ರೆಸ್ ಶಾಸಕರನ್ನು ಹೊರತು ಜೆಡಿಎಸ್ ಶಾಸಕರನಲ್ಲ. ಆಪರೇಷನ್ ಕಮಲದ ಗಾಳವನ್ನು ಕೈ ಪಾಳಯಕ್ಕೆ ಎಸೆದಿರುವ ಬಿಜೆಪಿ ನಾಯಕರು, ಅಪ್ಪಿ ತಪ್ಪಿಯೂ ಜೆಡಿಎಸ್ ಕಡೆಯಿಂದ ಶಾಸಕರನ್ನು ಎಳೆಯುವ ಪ್ರಯತ್ನ ಮಾಡಿಲ್ಲ ಇದು ಸಾಕಷ್ಟು ಕುತೂಹಲ ಕೆರಳಿಸಿದೆ.

ಕುಮಾರಸ್ವಾಮಿ ವಿರುದ್ಧ ಹಿಂದೆ ಯಡಿಯೂರಪ್ಪ ಆಡಿದ ಮಾತುಗಳನ್ನು ನೆನಪಿಸಿಕೊಂಡರೆ ಅವರು ಜೆಡಿಎಸ್ ಶಾಸಕರನ್ನು ಸೆಳೆಯಬೇಕಾಗಿತ್ತು, ಆದರೆ ಹಾಗೆ ಮಾಡಿಯೇ ಇಲ್ಲ.

ಇನ್ನು ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ನಾಯಕರು ಇನ್ನಿಲ್ಲದ ಸರ್ಕಸ್ ನಡೆಸುತ್ತಿದ್ದಾರೆ. ದೆಹಲಿಯಿಂದ ವೇಣುಗೋಪಾಲ್ ಓಡಿ ಬಂದಿದ್ದಾರೆ. ರಾಜ್ಯದ ಘಟಾನುಘಟಿ ನಾಯಕರು ವೇಣು ಗೋಪಾಲ್ ಜೊತೆ ಚರ್ಚೆ ನಡೆಸಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ದೇವೇಗೌಡರಾಗಲಿ, ಕುಮಾರಸ್ವಾಮಿಯಾಗಲಿ ಈ ಬೆಳವಣಿಗೆ ಬಗ್ಗೆ ತಲೆ ಕೆಡಿಸಿಕೊಂಡೇ ಇಲ್ಲ. ಅದೇನಿದ್ದರೂ ಕಾಂಗ್ರೆಸ್ ನಾಯಕರ ತಲೆ ನೋವು ಎಂದು ಅವರು ಸುಮ್ಮನಿದ್ದಾರೆ.

ಅದಕ್ಕೆ ಕಾರಣವೂ ಇದೆ. ಜೆಡಿಎಸ್ ಜೊತೆ ಸರ್ಕಾರ ಮಾಡೋಣ, ಕುಮಾರಸ್ವಾಮಿ ಸಿಎಂ ಆಗಲಿ ಎಂದು ಆಫರ್ ಕೊಟ್ಟವರು ಕಾಂಗ್ರೆಸ್ ನಾಯಕರು. ಆಗ ದೇವೇಗೌಡರ ಮನೆ ಬಾಗಿಲಿಗೆ ದೆಹಲಿಯ ಕೈ ನಾಯಕರು ಬಂದಿದ್ದರು. ಅಗ್ಲೇ ಸ್ಪಷ್ಟ ಸಂದೇಶವೊಂದನ್ನು ಜೆಡಿಎಸ್ ವರಿಷ್ಠರು ರವಾನಿಸಿದ್ದರು. ಯಾವುದೇ ಸಮಸ್ಯೆಗಳು ಬಂದರೂ ರಾಹುಲ್ ಗಾಂಧಿ ಜೊತೆಗೆ ನಮ್ಮ ಮಾತುಕತೆ. ಅಸಾಧ್ಯವಾದ ಸಂದರ್ಭದಲ್ಲಿ ದೆಹಲಿಯ ಬೇರೆ ನಾಯಕರ ಜೊತೆ ಮಾತುಕತೆ ಮಾಡುತ್ತೇವೆ. ಯಾವುದೇ ಕಾರಣಕ್ಕೂ ರಾಜ್ಯ ನಾಯಕರೊಂದಿಗೆ ದೋಸ್ತಿ ಸರ್ಕಾರದ ಬಗ್ಗೆ ನಮ್ಮ ಮಾತುಕತೆ ಇಲ್ಲ ಎಂದಿದ್ದರು.

ಹೀಗಾಗಿಯೇ ಕುಮಾರಸ್ವಾಮಿ ದೆಹಲಿಗೆ ಹೋದ ವೇಳೆ ರಾಹುಲ್ ಗಾಂಧಿಗೊಂದು ಹಾಯ್ ಹೇಳಿ ಬರುತ್ತಿದ್ದರು. ಅಪ್ಪಿ ತಪ್ಪಿ ರಾಜ್ಯ ನಾಯಕರ ಜೊತೆ ಚರ್ಚೆ ನಡೆಸುತ್ತಿರಲಿಲ್ಲ. ಹೀಗಾಗಿ ಕಾಂಗ್ರೆಸ್ ನಲ್ಲಿ ಸಮಸ್ಯೆಗಳು ಬಂದಿದೆ. ಅವೆಲ್ಲವೂ ಕಾಂಗ್ರೆಸ್ ಪಕ್ಷದ ಸಮಸ್ಯೆ ಎಂದು ಸೈಲೆಂಟ್ ಆಗಿದ್ದಾರೆ.

ಈ ಕಾರಣದಿಂದಲೇ ಕಾಟಚಾರ ಅನ್ನುವಂತೆ ಕೆಸಿ ವೇಣುಗೋಪಾಲ್ ಅವರನ್ನು ಭೇಟಿ ಬಂದಿದ್ದಾರೆ. ಬಳಿಕ ಕುರುಕ್ಷೇತ್ರದ ಚಿತ್ರದ ನಿಖಿಲ್ ಕುಮಾರಸ್ವಾಮಿ ಅಭಿನಯದ ಟೀಸರ್ ನೋಡಿ ಎಂಜಾಯ್ ಮಾಡಿದ್ದಾರೆ.

ಮತ್ತೊಂದು ಕಡೆ ಕುಮಾರಸ್ವಾಮಿಯವರಿಗೂ ಸರ್ಕಾರದ ಬಂಡಿ ಎಳೆಯುವುದು ಕಷ್ಟವಾಗಿದೆ. ಸಿದ್ದರಾಮಯ್ಯ ಸದ್ದಿಲ್ಲದೆ, ಸುದ್ದಿ ಇಲ್ಲದೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಅವರ ಕಾಲದ ಯೋಜನೆಗಳನ್ನು ಮುಂದುವರಿಸುವಂತೆ ಒತ್ತಡ ಹೇರುತ್ತಿದ್ದಾರೆ. ಸಂಪುಟದಲ್ಲಿ ಅವರ ಬಳಗದ ಸಂಖ್ಯೆ ಹೆಚ್ಚಿರುವಂತೆ ನೋಡಿಕೊಳ್ಳುವ ಮೂಲಕ ಪರೋಕ್ಷ ಒತ್ತಡ ತರುತ್ತಿದ್ದಾರೆ.

ಬೇಷರತ್ ಬೆಂಬಲ ಅಂದವರು ಇದೀಗ ನಿಧಾನವಾಗಿ ಷರತ್ತುಗಳನ್ನು ವಿಧಿಸಲಾರಂಭಿಸಿದ್ದಾರೆ. ಈ ಕಾರಣದಿಂದಲೇ ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರ ದಣಿದಿದ್ದಾರೆ. ಹೀಗಾಗಿ ಅಪರೇಷನ್ ಕಮಲದ ಬಿರುಗಾಳಿ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ರಿಲ್ಯಾಕ್ಸ್ ಮೂಡ್ ಗೆ ಜಾರಿದ್ದಾರೆ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: