ಮಗುವಿಗೆ ಹಾಲು ಕುಡಿಸದ ಪತ್ನಿಯನ್ನೇ ಕೊಂದ ಪತಿ

ಮಗಳಿಗೆ ಹೇಳಿದ ಸುಳ್ಳೇ ಜೈಲಿಗೆ ದಾರಿ ತೋರಿಸಿತು

ಮಗುವಿಗೆ ಹಾಲುಣಿಸಲು ಒಪ್ಪಲಿಲ್ಲ ಅನ್ನುವ ಕ್ಷುಲಕ ಕಾರಣಕ್ಕೆ ಪತ್ನಿಯನ್ನೇ ಕೊಂದ ಪಾಪಿ ಪತಿಯನ್ನು ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಹೊರಮಾವು ನಿವಾಸಿ ವಿನಯ್‌ ಕುಮಾರ್‌ (31) ಎಂದು ಗುರುತಿಸಲಾಗಿದೆ.

ಘಟನೆಯ ವಿವರ

ಬಿಹಾರದ ಬಾಲಟೋಲ ಗ್ರಾಮದವನಾದ ಆರೋಪಿ ವಿನಯ್‌ಕುಮಾರ್‌, ಆರು ವರ್ಷಗಳ ಹಿಂದೆ ಮುಜಾಫ‌ರ್‌ಪುರ ಜಿಲ್ಲೆಯ ಕಲ್ಯಾಣಪುರ ಹರೋನಾ ಗ್ರಾಮದ ಗೀತಾದೇವಿಯನ್ನು ಮದುವೆಯಾಗಿದ್ದ. ದಂಪತಿಗೆ ಐದು ವರ್ಷ ಹೆಣ್ಣು ಮತ್ತು ಒಂದು ವರ್ಷದ ಗಂಡು ಮಗು ಇದೆ.

ಎಂಟು ತಿಂಗಳ ಹಿಂದಷ್ಟೇ ಆರೋಪಿ ಕುಟುಂಬ ಸಮೇತ ರಾಮಮೂರ್ತಿನಗರದ ಹೊರಮಾವು ಮುಖ್ಯರಸ್ತೆಯಲ್ಲಿರುವ ಪ್ರರಾಣ ಟ್ರಾ ಕ್ಯೂಲ್‌ ಅಪಾರ್ಟ್‌ಮೆಂಟ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಸೇರಿದ್ದ. ಪತ್ನಿ ಗೀತಾದೇವಿ, ಅಪಾರ್ಟ್‌ಮೆಂಟ್‌ನ ಫ್ಲಾಟ್‌ ಒಂದರಲ್ಲಿ ಮನೆಗೆಲಸ ಮಾಡುತ್ತಿದ್ದರು. ಹೀಗಾಗಿ ಅಪಾರ್ಟ್‌ಮೆಂಟ್‌ನ ನೆಲಮಹಡಿಯಲ್ಲೇ ದಂಪತಿ ವಾಸವಿದ್ದರು.

ವಿನಯ್‌ ಪ್ರತಿ ತಿಂಗಳು ಬಿಹಾರದಲ್ಲಿರುವ ತನ್ನ ಪೋಷಕರಿಗೆ ಹಣ ಕಳುಹಿಸುತ್ತಿದ್ದ. ಇದೇ ವಿಚಾರಕ್ಕೆ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ಜನವರಿ12ರಂದು ರಾತ್ರಿ ಕೂಡಾ ಇದೇ ವಿಚಾರಕ್ಕೆ ವಾಗ್ವಾದ ನಡೆದಿತ್ತು.

ಜಗಳದಲ್ಲೇ ಊಟ ಮುಗಿಸಿ ನಿದ್ದೆಗೆ ಜಾರಿದ್ದಾರೆ. ತಡರಾತ್ರಿ ಎಚ್ಚರಗೊಂಡ ಒಂದು ವರ್ಷದ ಗಂಡು ಅಳಲು ಆರಂಭಿಸಿದೆ. ಅಳು ಕೇಳಿ ಎಚ್ಚರಗೊಂಡ ವಿನಯ್‌, ಮಗುವಿಗೆ ಹಾಲುಣಿಸುವಂತೆ ಪತ್ನಿಗೆ ಆದೇಶಿಸಿದ್ದಾನೆ. ಹಾಲುಣಿಸಲು ನಿರಾಕರಿಸಿದ ಗೀತಾದೇವಿ, ಹಾಲು ಕುಡಿಸೋದಿಲ್ಲ.ಬೇಕಿದ್ದರೆ ನೀನೇ ಕುಡಿಸು’ ಅಂದಿದ್ದಾಳೆ.

ಅಷ್ಟಕ್ಕೆ ಕುಪಿತಗೊಂಡ ವಿನಯ್ ಗೀತಾ ದೇವಿ ಕುತ್ತಿಗೆ ಹಿಸುಕಿ ಕೊಂದಿದ್ದಾನೆ. ಬಳಿಕ ಜ.13ರ ನಸುಕಿನ 3 ಗಂಟೆ ಸುಮಾರಿಗೆ ಯಾರಿಗೂ ಅನುಮಾನ ಬಾರದಂತೆ ಅಪಾರ್ಟ್‌ಮೆಂಟ್‌ನ ಪಾರ್ಕಿಂಗ್‌ ಸ್ಥಳಕ್ಕೆ ಶವವನ್ನು ಎಳೆದೊಯ್ದು, ಕುತ್ತಿಗೆ ಹಾಗೂ ತಲೆ ಮೇಲೆ ಕಲ್ಲು ಎತ್ತಿ ಹಾಕಿದ್ದಾನೆ. ಮುಂದೇನು ಎಂದು ಎರಡು ಗಂಟೆಗಳ ಕಾಲ ಅಂದರೆ ಮುಂಜಾನೆ 5 ಗಂಟೆ ತನಕ ಶವದ ಬಳಿಯೇ ಕುಳಿತಿದ್ದಾನೆ.

ನಂತರ ಪತ್ನಿಯ ಸಹೋದರ ಮತ್ತು ಪೊಲೀಸರಿಗೆ ಕರೆ ಮಾಡಿ, “ಇಬ್ಬರು ಅಪರಿಚಿತ ಮುಸುಕುಧಾರಿಗಳು ಪತ್ನಿಯನ್ನು ಕೊಂದಿದ್ದಾರೆ, ಎಂದು ಕಣ್ಣೀರು ಹಾಕಿದ್ದ.

ಆದರೆ ಗೀತಾ ಸಹೋದರ ಗುಡ್ಡು ಭಾಗತ್‌ ಗೆ ವಿನಯ್ ಮೇಲೆ ಅನುಮಾನವಿತ್ತು. ಪೊಲೀಸರಿಗೂ ಈ ವಿಚಾರವನ್ನು ತಿಳಿಸಿದ್ದ. ಹೀಗಾಗಿ ಪೊಲೀಸರು ವಿನಯ್ ಮೇಲೊಂದು ಕಣ್ಣಿಟ್ಟಿದ್ದರು.

ಪೊಲೀಸರು ಕಾನೂನು ಪ್ರಕ್ರಿಯೆ ಮುಗಿಸಿ, ಐದು ವರ್ಷದ ಪುತ್ರಿಯನ್ನು ಪ್ರತ್ಯೇಕವಾಗಿ ಕರೆದೊಯ್ದು ಘಟನೆ ಬಗ್ಗೆ ಕೇಳಿದ್ದಾರೆ. ಆಗ ಮಗು, ಯಾರೋ ಇಬ್ಬರು ಬಂದು ಅಮ್ಮನನ್ನು ಹೊಡೆದು ಹೋದರು ಎಂದಷ್ಟೇ ಹೇಳಿದೆ. ಅನುಮಾನಗೊಂಡ ಪೊಲೀಸರು, ಹೀಗೆ ಹೇಳುವಂತೆ ಯಾರು ಹೇಳಿಕೊಟ್ಟರು ಎಂದು ಪ್ರಶ್ನಿಸಿದಾಗ, “ಪಪ್ಪಾ ಹೇಳಿಕೊಟ್ಟರು’ ಎಂದಿದೆ.

ಅಷ್ಟು ಸಾಕಿತ್ತು ಪೊಲೀಸರಿಗೆ, ವಿನಯ್ ನನ್ನು ಕರೆದುಕೊಂಡು ಟ್ರೀಟ್ ಮೆಂಟ್ ಕೊಟ್ರೆ ಸತ್ಯ ಕಕ್ಕಿದ್ದಾನೆ.

ಪತ್ನಿಯನ್ನು ಕೊಂದು ಮನೆಗೆ ಬಂದೆ. ಮುಂದೇನು ಎಂದು ಯೋಚಿಸಿ ಐದು ವರ್ಷದ ಮಗಳಿಗೆ, “ಯಾರೋ ಇಬ್ಬರು ಮುಸುಕುಧಾರಿಗಳು ಬಂದು ನನ್ನ ಮೇಲೆ ಹಲ್ಲೆ ನಡೆಸಿ, ನಿನ್ನ ತಾಯಿಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ. ಈ ವಿಚಾರದ ಬಗ್ಗೆ ಯಾರೇ ಕೇಳಿದರೂ, ನಾನೀಗ ಹೇಳಿಕೊಟ್ಟಂತೆಯೇ ಹೇಳಬೇಕು’ ಎಂದು ಹೇಳಿಕೊಟ್ಟೆ ಎಂದು ಬಾಯಿ ಬಿಟ್ಟಿದ್ದಾನೆ.

 ಆದರೆ ಮಗಳಿಗೆ ಹೇಳಿ ಕೊಟ್ಟ ಕಟ್ಟು ಕಥೆಯೇ ಉರುಳಾಗಿ ಪರಿಣಮಿಸುತ್ತದೆ ಎಂದು ಗೊತ್ತಿರಲಿಲ್ಲ. ಇನ್ನು ಆರೋಪಿ ವಿನಯ್‌ ಕಚ್ಚೆ ಗಟ್ಟಿ ಇರಲಿಲ್ವಂತೆ. ಗಂಡನಿಗೆ ಪರಸ್ತ್ರೀ ಸಹವಾಸ ಇತ್ತು ಎಂದು ಗೀತಾ ಸ್ನೇಹಿತರ ಬಳಿ ಹೇಳಿಕೊಂಡಿದ್ದರಂತೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: