ರಾಮನಾಯ್ತು..ಈಗ ಸೀತೆಯ ಮೇಲೆ ವಿಚಾರವಾದಿಗಳ ಕಣ್ಣು : ಸೀತೆ ದನದ ಮಾಂಸ ತಿನ್ತಿದ್ದಳು -ಚಿಂತಕಿ ಕಲೈಸೆಲ್ವಿ

ವಿಚಾರವಾದಿಗಳಿಗೆ ಹಿಂದೂ ಧರ್ಮದ ದೇವರ ಬಗ್ಗೆ ಕೀಳಾಗಿ ಮಾತನಾಡದಿದ್ದರೆ ನಿದ್ದೆ ಹತ್ತುವುದಿಲ್ಲ. ಬುದ್ದಿಜೀವಿ ಎಂದು ಕರೆಸಿಕೊಂಡ ಅದ್ಯಾವ ವ್ಯಕ್ತಿಯ ಭಾಷಣ ತೆಗೆದು ನೋಡಿ ಧಾರ್ಮಿಕ ಭಾವನೆಗಳಿಗೆ ನೋವು ತರುವುದೇ ಅವರ ಉದ್ದೇಶ ಅನ್ನುವಂತೆ ತೋರುತ್ತದೆ.

ಇಷ್ಟು ದಿನಗಳ ಕಾಲ ರಾಮನ ಬಗ್ಗೆ ಕೆಎಸ್ ಭಗವಾನ್ ಮನಸ್ಸಿಗೆ ತೋಚಿದ್ದನ್ನು ಮಾತನಾಡಿದರು. ಇದೇ ಸಾಲಿನಲ್ಲಿ ಇದೀಗ ಸೀತೆ  ಆಹಾರ ಕ್ರಮದ ಬಗ್ಗೆ ಪೆರಿಯಾರ್ ​ವಾದಿ ಚಿಂತಕಿ ಕಲೈಸೆಲ್ವಿ ವಿವಾದಾತ್ಮಕ ಹೇಳಿಕೆ ನೀಡಿ ಸದ್ದು ಮಾಡಿದ್ದಾರೆ.

ಸೀತೆ ಜಿಂಕೆ, ಹಂದಿ, ದನದ ಮಾಂಸ ತಿಂದಿರುವ ಕುರಿತು ಅರಣ್ಯ ಕಾಂಡದಲ್ಲಿ ಉಲ್ಲೇಖವಿದೆ. ಆಕೆ ದನದ ಮಾಂಸವನ್ನು ತುಪ್ಪದಲ್ಲಿ ಹುರಿದು ತಿಂದ ಬಗ್ಗೆ ಉಲ್ಲೇಖವಿದೆ. ಅದೇ ನಾವು ಈಗಿನ ಕಾಲದಲ್ಲಿ ಜಿಂಕೆ ಮಾಂಸ ತಿಂದಿದ್ದರೆ ಅರಣ್ಯ ಕಾಯ್ದೆ ಅಡಿ ಬಂಧನವಾಗುತ್ತಿತ್ತು ಎಂದು ಹೇಳುವ ಮೂಲಕ ಹೊಸ ಕಿಡಿ ಹಬ್ಬಿಸಿದ್ದಾರೆ.

ವೇದಗಳ ಕಾಲದಲ್ಲಿ ಮಹಿಳೆಯರಿಗೆ ಹೆಚ್ಚಿನ ಮಹತ್ವ ಇತ್ತು ಅಂತಾರೆ. ಆದರೆ, ಮಹಿಳೆಯರಿಗೆ ಯಾವುದೇ ರೀತಿಯ ಸ್ವಾತಂತ್ರವಿರಲಿಲ್ಲ. ಧರ್ಮವನ್ನು‌ ಪ್ರತಿಪಾದಿಸಲು ಮಹಿಳೆಯರ ಮೇಲೆ ಈ ರೀತಿ ಹೇರಿಕೆ ಮಾಡಲು ಇವರು ಯಾರು ಎಂದು ಪ್ರಶ್ನಿಸಿದ್ದಾರೆ.

ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪೆರಿಯಾರ್ ವಾದಿ ಕಮ್ ಚಿಂತಕಿ ಕಲೈಸೆಲ್ವಿ  ವೇದಗಳ ಕಾಲದಲ್ಲಿ ಮಹಿಳೆಯರಿಗೆ ಹೆಚ್ಚಿನ ಮಹತ್ವ ಇತ್ತು ಅಂತಾರೆ. ಎಲ್ಲಿತ್ತು ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ವರ್ಣಾಶ್ರಮ ಧರ್ಮವನ್ನು ಒಪ್ಪಿಕೊಂಡು ವರ್ಣಾಶ್ರಮ ಶ್ರೇಷ್ಠ, ಬ್ರಾಹ್ಮಣರು ಶ್ರೇಷ್ಠ ಎಂದು ಒಪ್ಪಿಕೊಳ್ಳಬೇಕು. ಇಲ್ಲವಾದರೆ ಅವರನ್ನು ಕೀಳಾಗಿ ನೋಡುತ್ತಿದ್ದರು. ವಿಷ್ಣು ಅಷ್ಟೊಂದು ಅವತಾರ ಎತ್ತಿದ್ದಾನೆ. ಆದರೆ ಶಿವ ಯಾಕೆ ಎತ್ತಿಲ್ಲ. ವಿಷ್ಟು ದೇವಾಲಯಗಳು ವಿಜೃಂಭಣೆಯಿಂದ ಕೂಡಿರುತ್ತವೆ. ಶಿವನ ದೇವಾಲಯ ಸಿಂಪಲ್ಲಾಗಿರಲು ಕಾರಣ ಏನು. ಇದು ಮೌಢ್ಯವನ್ನು ಹೆಚ್ಚಿಸುವ ಕೆಲಸ ಎಂದು ಹೇಳಿದ್ದಾರೆ.

Advertisements

One Comment on “ರಾಮನಾಯ್ತು..ಈಗ ಸೀತೆಯ ಮೇಲೆ ವಿಚಾರವಾದಿಗಳ ಕಣ್ಣು : ಸೀತೆ ದನದ ಮಾಂಸ ತಿನ್ತಿದ್ದಳು -ಚಿಂತಕಿ ಕಲೈಸೆಲ್ವಿ

  1. Pingback: ಸಸ್ಪೆಂಡ್ ಮಾಡುತ್ತಾ ಕೂತ್ರೆ…? ಡಿಸಿ ಸಿಂಧೂರಿ ಮಾತು ಕೇಳಿ ರೇವಣ್ಣ ಗಪ್ ಚುಪ್ – torrentspree

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: