Advertisements

ಗೌಡರ ‘ ದಿವ್ಯ’ ಪ್ರೇಮ ಕಥೆ : ಕಾಮಿಡಿ ಕಿಲಾಡಿಗಳು ಸೀರಿಯಸ್ ಆಗಿ ಮದುವೆಯಾಗುತ್ತಿದ್ದಾರೆ

2018ರಲ್ಲಿ ಹಲವು ತಾರಾ ಜೋಡಿಗಳು ಗೃಹಸ್ಥಾಶ್ರಮ ಪ್ರವೇಶಿಸಿತ್ತು. ಬಣ್ಣದ ಲೋಕದಲ್ಲಿ ಹುಟ್ಟಿದ ಪ್ರೇಮಕ್ಕೆ ಮತ್ತಷ್ಟು ಬಣ್ಣ ಬಳಿದು, ಬಣ್ಣ ಬಣ್ಣದ ಕನಸುಗಳೊಂದಿಗೆ ಸಪ್ತಪದಿ ತುಳಿದಿದ್ದರು.

2019ರಲ್ಲಿ ಮತ್ತೊಂದು ತಾರಾ ಜೋಡಿ ವಿವಾಹ ಬಂಧನಕ್ಕೆ ಒಳಗಾಗಲು ನಿರ್ಧರಿಸಿದೆ. ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟ ಗೋವಿಂದೆ ಗೌಡ ಮತ್ತು ದಿವ್ಯ ಈ ವರ್ಷ ಸಪ್ತಪದಿ ತುಳಿಯಲಿದ್ದಾರೆ.

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದ ಮೊದಲ ಸೀಸನ್  ನಲ್ಲಿ ಇವರಿಬ್ಬರು ಕನ್ನಡಿಗರ ಮನ ಗೆದ್ದಿದ್ದರು. ಕಾರ್ಯಕ್ರಮದಲ್ಲಿ ಒಟ್ಟಿಗೆ ವೇದಿಕೆ ಏರುತ್ತಿದ್ದ ಗೋವಿಂದೆ ಗೌಡ ಹಾಗೂ ದಿವ್ಯ ಜೋಡಿ ಇದೀಗ ಒಟ್ಟಿಗೆ ಹಸೆಮಣಿ ಏರುತ್ತಿದ್ದಾರೆ.

ಇವರಿಬ್ಬರ ನಿಶ್ವಿತಾರ್ಥ ಇದೇ ತಿಂಗಳ 27ರ ಭಾನುವಾರದಂದು ಬೆಂಗಳೂರಿನಲ್ಲಿ ನಡೆಯಲಿದೆ.

ನಿಶ್ಚಿತಾರ್ಥದ ಎರಡು ತಿಂಗಳ ಬಳಿಯ ಗೋವಿಂದೆ ಗೌಡ ಹಾಗೂ ದಿವ್ಯ ಮದುವೆ ಕಾರ್ಯಕ್ರಮ ನಡೆಯಲಿದೆ. ಮಾರ್ಚ್ 14 ರಂದು ಜಿಜಿ ಅವರ ಕಲ್ಯಾಣೋತ್ಸವ ನಡೆಯಲಿದ್ದು, ಶೃಂಗೇರಿಯಲ್ಲಿ ಮದುವೆ ಕಾರ್ಯಕ್ರಮ ಜರುಗಲಿದೆ.

ತಮ್ಮ ದಿವ್ಯ ಪ್ರೀತಿಯ ಬಗ್ಗೆ ಮಾತನಾಡಿದ ಗೋವಿಂದೆ ಗೌಡ ಕಾಮಿಡಿ ಕಿಲಾಡಿ ಕಾರ್ಯಕ್ರಮದಲ್ಲಿ ಪರಿಚಯವಾಯ್ತು. ಕಾರ್ಯಕ್ರಮ ಮುಗಿದ ಮೇಲೆ ಪರಸ್ಪರ ಪ್ರೀತಿಯಲ್ಲಿ ಬಿದ್ದೆವು. ಇಬ್ಬರು ಕೂತು ಮಾತಾಡಿ, ಮನೆಯವರ ಸಮ್ಮುಖದಲ್ಲಿ ಮದುವೆ ನಿರ್ಧಾರಕ್ಕೆ ಬಂದೆವು ಅಂದಿದ್ದಾರೆ.

‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದ ನಂತರ ದಿವ್ಯ ಮತ್ತು ಗೋವಿಂದೇ ಗೌಡ ಅನೇಕ ಸಿನಿಮಾ ಅವಕಾಶಗಳನ್ನು ಪಡೆದರು. ದಿವ್ಯ ಸದ್ಯ ‘ಪುಣ್ಯಾತ್ ಗಿತ್ತೀಯರು’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಗೋವಿಂದೆ ಗೌಡ ಅವರು ‘ಕೆಜಿಎಫ್’ ಬಳಿಕ ‘ಭರಾಟೆ’ ಸೇರಿದಂತೆ ಸಾಕಷ್ಟು ಚಿತ್ರಗಳ ಅವಕಾಶ ಪಡೆದಿದ್ದಾರೆ.

ಜೊತೆಗೆ ಒಂದು ಚಿತ್ರವನ್ನು ಕೂಡಾ ಗೌಡರು ನಿರ್ದೇಶಿಸಿದ್ದಾರೆ.

Advertisements

Leave a Reply

%d bloggers like this: