Advertisements

ಅಜ್ಜಿಯ ವೇಷ ಧರಿಸಿ ಅಯ್ಯಪ್ಪನ ದರ್ಶನ ಪಡೆದ 36 ವರ್ಷದ ದಲಿತ ಮಹಿಳೆ

ಕೇರಳ : ಮಹಿಳೆಯರು ಪ್ರತಿಭಟನಾಕಾರರಿಗೆ ಹೆದರಿ ಮಾರುವೇಷದಲ್ಲಿ ಶಬರಿಮಲೆಗೆ ಆಗಮಿಸುತ್ತಿದ್ದು, 36 ವರ್ಷದ ಮಹಿಳೆಯೊಬ್ಬರು ವಯಸ್ಸಾದ ಅಜ್ಜಿಯಂತೆ ಮೇಕಪ್ ಮಾಡಿಕೊಂಡು ಬಂದು ಬುಧವಾರ ಅಯ್ಯಪ್ಪನ ದರ್ಶನ ಪಡೆದಿದ್ದಾರೆ.

ಅಜ್ಜಿಯ ವೇಷದಲ್ಲಿ ತೆರಳಿ ಬುಧವಾರ ಬೆಳಗ್ಗೆ 7.30ರ ಸುಮಾರಿಗೆ ಅಯ್ಯಪ್ಪನ ದರ್ಶನ ಪಡೆದಿರುವುದಾಗಿ ಕೇರಳ ದಲಿತ ಮಹಿಳಾ ಫೆಡರೇಶನ್ ರಾಜ್ಯ ಕಾರ್ಯದರ್ಶಿಯಾದ ಎಸ್‌.ಪಿ. ಮಂಜು ಅವರು ಹೇಳಿದ್ದಾರೆ. ಅಲ್ಲದೆ ತಾನು ಶಬರಿಮಲೆಗೆ ಭೇಟಿ ನೀಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕೇರಳದ ದೇವಸ್ಥಾನವೊಂದರ ಪೂಜಾರಿಯ ಮಗಳಾಗಿರುವ ಮಂಜು ಮುಖಕ್ಕೆ ಮೇಕಪ್ ಮಾಡಿಕೊಂಡು ಶಬರಿಮಲೆಗೆ ಭೇಟಿ ನೀಡಿರುವುದಾಗಿ ಹೇಳಿಕೊಂಡಿದ್ದಾರೆ.

ಅಜ್ಜಿಯಂತೆ ಡ್ರೆಸ್ ಮಾಡಿಕೊಂಡು, ತಲೆಗೆ ಕೂದಲಿಗೆ ಪವಿದ್ರ ಬೂದಿ ಹಚ್ಚಿಕೊಂಡು ದೊಡ್ಡ ಕಿವಿಯೋಲೆ ಹಾಗೂ ಬಿಂದಿ ಧರಿಸಿಕೊಂಡು ದೇವಸ್ಥಾನಕ್ಕೆ ತೆರಳಿದೆ.

ನಾನು ಇದೇ ಮೊದಲ ಬಾರಿಗೆ ಶಬರಿಮಲೆಗೆ ಭೇಟಿ ನೀಡಿದ್ದರಿಂದ ಇರುಮುಡಿಕಟ್ಟು ಹಾಗೂ ಪೂಜಾ ವಿಧಾನಗಳ ಬಗ್ಗೆ ಗೊತ್ತಿರಲಿಲ್ಲ. ಹೀಗಾಗಿ ಅಯ್ಯಪ್ಪ ಸೇವಾ ಸಂಘಮ್ ಕಾರ್ಯಕರ್ತರ ಸಹಾಯ ಪಡೆದೆ ಎಂದು ಮಂಜು ತಿಳಿಸಿದ್ದಾರೆ.

ಬೆಟ್ಟದಲ್ಲಿ ಕೆಲವು ಜನ ನನ್ನನ್ನು ಗುರುತಿಸಿದರು. ಆದರೆ ಯಾರೂ ಪ್ರತಿಭಟಿಸಲಿಲ್ಲ ಎಂದು ದಲಿತ ನಾಯಕಿ ಹೇಳಿಕೊಂಡಿದ್ದಾರೆ.

Advertisements

Leave a Reply

%d bloggers like this: