Advertisements

ಯಾವುದೇ ಕಾರಣಕ್ಕೂ ಹೆಂಡ್ತಿಗೆ ಸಲಹೆ ಕೊಡಲು ಹೋಗಬೇಡಿ…ಇದು ನಿತ್ಯಾನಂದನ ಸಲಹೆ

ತಮ್ಮ ಉಪನ್ಯಾಸವೊಂದರಲ್ಲಿ ಹೆಂಡತಿಯ ಬಗ್ಗೆ ಬಿಡದಿ ಸ್ವಾಮಿ ಮಾತನಾಡಿರುವ ಮಾತುಗಳ ವಿಡಿಯೋ ಕ್ಲಿಪ್ಪಿಂಗ್ ಒಂದು ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗಿದೆ.

ಇತ್ತೀಚೆಗಷ್ಟೇ ನಿತ್ಯಾನಂದ ಅವರು ಹೆಂಡತಿ ಬಗ್ಗೆ ಉಪನ್ಯಾಸ ನೀಡಿದ್ದರು. ಈ ಉಪನ್ಯಾಸದ ವಿಡಿಯೋ ತುಣುಕೊಂದು ವಾಟ್ಸಪ್ ಹಾಗೂ ಫೇಸ್ ಬುಕ್ ಗಳಲ್ಲಿ ಶೇರ್ ಆಗುತ್ತಿದೆ. ಹೆಂಡತಿ ಕಾಟಕ್ಕೆ ಬೇಸತ್ತ ಗಂಡಸರು ಈ ವಿಡಿಯೋವನ್ನು ತಮ್ಮ ಸಾಮಾಜಿಕ ತಾಣಗಳಲ್ಲಿ ಅಪ್ ಲೋಡ್ ಮಾಡಿಕೊಳ್ಳುತ್ತಿದ್ದಾರೆ.

ಯಾವುದೇ ಕಾರಣಕ್ಕೂ ಹೆಂಡತಿಗೆ ಸಲಹೆ ಕೊಡಲು ಹೋಗಬೇಡಿ. ಬೇರೆ ಯಾರಿಗೆ ಬೇಕಾದ್ರೂ ಅಡ್ವೈಸ್ ಮಾಡಬಹುದು. ಆದ್ರೆ ನಿಮ್ಮ ಪತ್ನಿಯರಿಗೆ ಮಾತ್ರ ಮಾಡಬೇಡಿ.

ನಾನು ಯಾಕೆ ಹೀಗೆ ಹೇಳುತ್ತಿದ್ದೇನೆ ಅಂದ್ರೆ, ದೇವರ ದೇವ ಮಹಾದೇವ ಕೂಡ ಆತನ ಹೆಂಡತಿಗೆ ಸಲಹೆ ನೀಡಲು ಸಾಧ್ಯವಾಗಿಲ್ಲ. ಮತ್ತೆ ನೀವು ಯಾಕೆ ಸಲಹೆ ಕೊಡುತ್ತೀರಿ.? ಮಹಾದೇವ ಕೊನೆಗೆ ದಕ್ಷನನ್ನು ಕೊಲ್ಲಲು ವೀರಭದ್ರನನ್ನು ಕಳುಹಿಸಿದನೇ ಹೊರತು ಪತ್ನಿ ಸತಿಗೆ ಸಲಹೆ ನೀಡಲು ಆತನಿಂದ ಸಾಧ್ಯವಾಗಿಲ್ಲ.

ಇದೀಗ ಗಂಡಂದಿರು ಈ ವಿಡಿಯೋವನ್ನು ವಾಟ್ಸಾಪ್ ಮೂಲಕ ತಮ್ಮ ಪತ್ನಿಯರಿಗೆ ಕಳುಹಿಸಿ ನೋಡಿ ಅಂತ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಪತ್ನಿಗೆ ಸಲಹೆ ನೀಡಲು ಮಹದೇವನಿಗೇ ಆಗಿಲ್ಲ, ಇನ್ನು ನೀವು ಯಾವ ಲೆಕ್ಕ ಎಂಬ ನಿತ್ಯಾನಂದರ ಈ ವಿಡಿಯೋಗೆ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದೆ.

Advertisements

Leave a Reply

%d bloggers like this: