ವಿಮಾನ ನಿಲ್ದಾಣದಿಂದ ಪ್ರಾರಂಭವಾಯ್ತು ಮಹಿಳಾ ಪ್ರಯಾಣಿಕರಿಗೆ ಪಿಂಕ್‌ ಕ್ಯಾಬ್‌

ಕೆಐಎಎಲ್ ನಲ್ಲಿ ಮಹಿಳಾ ಚಾಲಕರಿರುವ ಗೋ ಪಿಂಕ್ ಕ್ಯಾಬ್ ಗಳಿಗೆ ಇಂದಿನಿಂದ ಚಾಲನೆ ನೀಡಲಾಗಿದೆ.

ರಾಜ್ಯ ಪ್ರವಾಸೋದ್ಯಮ ಇಲಾಖೆ (ಕೆಎಸ್‍ಟಿಡಿಸಿ) ಮತ್ತು ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ ಪ್ರಾಧಿಕಾರ (ಕೆಐಎಎಲ್) ಈ ಹೊಸ ಯೋಜನೆ ಜಾರಿ ಮಾಡಿದೆ.

ಪ್ರಾಯೋಗಿಕವಾಗಿ ಮೊದಲ ಹಂತದಲ್ಲಿ 10 ಗೋ ಪಿಂಕ್ ಕ್ಯಾಬ್ ಗಳಿಗೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಮಹಿಳಾ ಪ್ರಯಾಣಿಕರ ಸ್ಪಂದನೆ ಗಮನಿಸಿ ಬೇಡಿಕೆಗೆ ಅನುಗುಣವಾಗಿ ಗೋ ಪಿಂಕ್ ಕ್ಯಾಬ್ ಗಳನ್ನ ರಸ್ತೆಗಿಳಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಗೋ ಪಿಂಕ್ ಕ್ಯಾಬ್ ಗಳಲ್ಲಿ ಜಿಪಿಎಸ್ ಟ್ರಾಕಿಂಗ್,, ಪ್ಯಾನಿಕ್ ಬಟನ್ ಆಳವಡಿಸಲಾಗಿದೆ. ವಿಶೇಷ ಅಂದರೆ ದಿನದ 24 ಗಂಟೆ ಪಿಂಕ್ ಕ್ಯಾಬ್ ಸೇವೆ ಲಭ್ಯವಿರಲಿದೆ.

ಪಿಂಕ್ ಕ್ಯಾಬ್ ಚಾಲಕಿಯರು

ಮಹಿಳಾ ಚಾಲಕಿಯರು ತಮ್ಮ ಹೆಸರನ್ನು ಹಾಲಿ ಇರುವ ಏರ್‌ಪೋರ್ಟ್‌ ಚಾಲಕ ಸೇವೆಗೆ ನೋಂದಣಿ ಮಾಡಿಕೊಳ್ಳುವಂತೆ ನಿಗಮ ಈಗಾಗಲೇ ಸೂಚನೆ ನೀಡಿತ್ತು. 15ಕ್ಕೂ ಹೆಚ್ಚು ಮಂದಿ ಚಾಲಕಿಯರು ಹೆಸರು ನೋಂದಾಯಿಸಿಕೊಂಡಿದ್ದರು. ಅವರ ವಾಹನಗಳನ್ನು ಪರಿಶೀಲನೆ ನಡೆಸಿ ಇದೀಗ ಸೇವೆ ಪ್ರಾರಂಭಿಸಲಾಗಿದೆ. ಪ್ರಯಾಣಿಕರನ್ನು ಅವರ ಮನೆಗಳಿಂದ ಪಿಕ್‌ ಮಾಡುವುದು, ಮನೆಗಳಿಗೆ ಡ್ರಾಪ್‌ ಮಾಡುವ ಕೆಲಸವನ್ನು ಪಿಂಕ್‌ ಕ್ಯಾಬ್‌ಗಳು ಹಾಲಿ ಇರುವ ಸೇವೆಗಳಂತೆಯೇ ನೀಡಲಿವೆ.

ಬೆಂಗಳೂರು ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಪುರುಷ ಚಾಲಕರಿಂದ ಮಹಿಳಾ ಪ್ರಯಾಣಿಕರಿಗೆ ಲೈಂಗಿಕ ಕಿರುಕುಳ, ದೌರ್ಜನ್ಯ ಮತ್ತಿತರ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಪಿಂಕ್‌ ಕ್ಯಾಬ್‌ ಸೇವೆ ಮಹಿಳಾ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: