Advertisements

ಲೋಕಸಭಾ ಚುನಾವಣೆ ಮುನ್ನ ಅರೆಸ್ಟ್ ಆಗ್ತಾರಂತೆ ಡಿಕೆಶಿ….ಹೌದಾ…?

ಅಕ್ರಮ ಆಸ್ತಿ ಸಂಪಾದನೆಯ ಆರೋಪ ಎದುರಿಸುತ್ತಿರುವ ಸಚಿವ ಡಿಕೆ ಶಿವಕುಮಾರ್ ಅವರಿಗೆ ಬ್ಯಾಡ್ ಟೈಮ್ ಶುರುವಾಗಿರುವ ಲಕ್ಷಣಗಳು ಗೋಚರಿಸುತ್ತಿದೆ.

ನಾನು ಪುಟ್ಭಾಲ್ ಆಡೋದಿಲ್ಲ, ಚೆಸ್ ಆಡ್ತೀನಿ ಅನ್ನುತ್ತಿದ್ದ ನಾಯಕನನ್ನು ಮಣಿಸಲು ಎಲ್ಲಾ ಸಿದ್ದತೆಗಳು ನಡೆದಿದೆಯಂತೆ.

ಈಗಾಗಲೇ 110 ಕೋಟಿಗೂ ಅಧಿಕ ಬೇನಾಮಿ ಆಸ್ತಿ ಹೊಂದಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಈ ನಡುವೆ ಆದಾಯ ಮೂಲವನ್ನು ಆದಾಯ ತೆರಿಗೆ ಇಲಾಖೆಗೆ ಮನವರಿಕೆ ಮಾಡುವಲ್ಲಿ ಡಿಕೆಶಿ ವಿಫಲರಾಗಿದ್ದಾರೆ ಎನ್ನಲಾಗಿದೆ. ಮಾತ್ರವಲ್ಲದೆ ಡಿಕೆಶಿ ಕೊಟ್ಟಿರುವ ಹೇಳಿಕೆಗೂ ಅವರ ಸಹೋದರ ಡಿಕೆ ಶಿವಕುಮಾರ್ ಹೇಳಿರುವುದಕ್ಕೂ, ತಾಯಿ ಗೌರಮ್ಮ ಹೇಳಿರುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆಯಂತೆ. ಒಂದಕ್ಕೊಂದು ತಾಳೆಯಾಗದಿರುವ ಹಿನ್ನಲೆಯಲ್ಲಿ ಅಕ್ರಮ ಕುರಿತಂತೆ ಐಟಿ ಅಧಿಕಾರಿಗಳು ಇಲಾಖೆಯ ಪ್ರಧಾನ ಕಚೇರಿ ಹಾಗೂ ಬೇನಾಮಿ ನ್ಯಾಯಾಧೀಕರಣಕ್ಕೆ ವರದಿ ಸಲ್ಲಿಸಿದ್ದಾರೆ.

ಹೀಗಾಗಿ 110 ಕೋಟಿ ಮೊತ್ತದ ಆಸ್ತಿಯನ್ನು ವಶಕ್ಕೆ ಪಡೆದುಕೊಳ್ಳಲು ಐಟಿ ಸಿದ್ದತೆ ನಡೆಸಿದೆಯಂತೆ.

ಇನ್ನು ಡಿಕೆಶಿ ವಿರುದ್ಧ ಜಾರ್ಜ್ ಶೀಟ್ ಸಲ್ಲಿಸಲು ಸಿದ್ದತೆಗಳು ನಡೆದಿದ್ದು, ಬೇನಾಮಿ ಆಸ್ತಿ ಕಾಯ್ದೆ ಸಾಕಷ್ಟು ಪ್ರಬಲವಾಗಿರುವುದರಿಂದ, ಎಲ್ಲವೂ ಸಾಬೀತಾದರೆ 1 ರಿಂದ 7 ವರ್ಷಗಳ ತನಕ ಶಿಕ್ಷೆಯಾಗಬಹುದು. ಎಡವಟ್ಟಾಗಿ 7 ವರ್ಷ ಶಿಕ್ಷೆಯಾದರೆ ಡಿಕೆಶಿ ರಾಜಕೀಯ ಜೀವನ ಅಂತ್ಯವಾಗಬಹುದು.

Advertisements

Leave a Reply

%d bloggers like this: