Advertisements

ಕೆರಳಿದ ಕೇರಳ :ಬಿಜೆಪಿ, ಆರ್.ಎಸ್.ಎಸ್ ಕಚೇರಿಗೆ ಗಾಳಿ –ಗಲಭೆ ನಿಯಂತ್ರಿಸಲು ಸೋತ ಪಿಣರಾಯಿ ಸರ್ಕಾರ

ಕೇರಳ : ಶಬರಿಮಲೆಗೆ ಸಂಪ್ರದಾಯ ಮೀರಿ ಮಹಿಳೆಯರ ಪ್ರವೇಶದ ಬಳಿಕ ದೇವರನಾಡಿನಲ್ಲಿ ಹಿಂಸಾಚಾರ ಅಬ್ಬರಿಸುತ್ತಿದೆ. ಬಿಜೆಪಿ ನಡೆಸುತ್ತಿದ್ದ ಪ್ರತಿಭಟನೆಯನ್ನು ಹತ್ತಿಕ್ಕಲು ಎಡಪಕ್ಷಗಳು ಬೀದಿಗೆ ಬಂದಿದೆ.
ಶಬರಿಮಲೆ ಹೆಸರಿನಲ್ಲಿ ಇದೀಗ ರಾಜಕೀಯ ಹೊಡಿ ಬಡಿ ಪ್ರಾರಂಭವಾಗಿದೆ. ತಮ್ಮದೇ ಸರ್ಕಾರ ಇರುವ ಕಾರಣ ಎಡಪಕ್ಷಗಳ ಕಾರ್ಯಕರ್ತರನ್ನು ಕೇಳುವವರೇ ಇಲ್ಲ ಅನ್ನುವಂತಾಗಿದೆ.

ಶಬರಿಮಲೆಗೆ ಮಹಿಳೆಯರ ಪ್ರವೇಶ ಮಾಡಿರುವುದರ ಹಿಂದೆ ಕೇರಳದ ಕಮ್ಯೂನಿಸ್ಟ್ ಸರ್ಕಾರದ ಕೈವಾಡವಿದೆ ಎಂದು ಆರೋಪಿಸಿ ಕೇರಳ ಬಿಜೆಪಿ ಘಟಕ ವ್ಯಾಪಕ ಪ್ರತಿಭಟನೆ ಮುಂದುವರಿಸಿದೆ. ಇದಕ್ಕೆ ಕೇರಳದ ಹಿಂದೂ ಪರ ಸಂಘಟನೆಗಳು ಸಾಥ್ ನೀಡಿವೆ.

ಈ ನಡುವೆ ಪ್ರತಿಭಟನಾ ಸ್ಥಳಕ್ಕೆ ಬೈಕ್ ನಲ್ಲಿ ತೆರಳುತ್ತಿದ್ದವರ ಮೇಲೆ ಕೆಲ ದುಷ್ಕರ್ಮಿಗಳು ಅಡ್ಡಿಪಡಿಸಿ ಕಾರ್ಯಕರ್ತರನ್ನು ಥಳಿಸಿದ್ದರು. ಈ ಘಟನೆ ಬಳಿಕ ಕೇರಳದಲ್ಲಿ ಹಿಂಸಾಚಾರ ಭುಗಿಲೆದಿದ್ದು, ಕೇರಳದ ಕಣ್ಣೂರಿನಲ್ಲಿರುವ ಆರ್.ಎಸ್.ಎಸ್ ಕಚೇರಿಗೆ ಬೆಂಕಿ ಹಚ್ಚಲಾಗಿದೆ. ಅಂತೆಯೇ ಕೇರಳದಲ್ಲಿರುವ ಬಿಜೆಪಿ ಸಂಸದರ ಮೇನೆ ಮೇಲೂ ದಾಳಿಯಾಗಿದೆ.

ದಾಳಿಯನ್ನು ದೃಢ ಪಡಿಸಿರುವ ಬಿಜೆಪಿ ರಾಜ್ಯಸಭಾ ಸದಸ್ಯ ಮುರಳೀಧರನ್ , ತಳಸ್ಸೆರಿ ಬಳಿ ಇರುವ ವಡಿಲ್ ಪೀಡಿಕಿಯದಲ್ಲಿರುವ ತಮ್ಮ ಪೂರ್ವಜರ ನಿವಾಸದ ಮೇಲೆ ದಾಳಿಯಾಗಿದೆ. ಅದೃಷ್ಟವಶಾತ್ ಮನೆಯಲ್ಲಿ ಯಾರಿಗೂ ಏನೂ ಆಗಿಲ್ಲ. ದಾಳಿ ವೇಳೆ ನನ್ನ ಸಹೋದರಿ ಮತ್ತು ಭಾವ ಮನೆಯಲ್ಲೇ ಇದ್ದರು. ನಾನು ಪ್ರಸ್ತುತ ಹೈದರಾಬಾದ್ ನಲ್ಲಿದ್ದೇನೆ ಎಂದಿದ್ದಾರೆ.

ಇದಕ್ಕೆ ಪ್ರತಿಯಾಗಿ ಕಮ್ಯೂನಿಸ್ಟ್ ಪಕ್ಷದ ಕಚೇರಿಗಳ ಮೇಲೆ ಕ್ರೂಡ್ ಬಾಂಬ್ ಗಳನ್ನು ಎಸೆಯಲಾಗಿದ್ದು, ಅದೃಷ್ಟವಶಾತ್ ಪ್ರಾಣ ಹಾನಿ ಸಂಭವಿಸಿಲ್ಲ. ಮಾತ್ರವಲ್ಲದೆ ಸಿಪಿಐಎಂ ಶಾಸಕ ಎಎನ್ ಶಂಸಿ ಅವರ ಮನೆ ಮತ್ತು ಕಚೇರಿಗಳ ಮೇಲೂ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ ಎನ್ನಲಾಗಿದೆ.

ಈ ಎಲ್ಲಾ ಗಲಭೆಗಳನ್ನು ನಿಯಂತ್ರಿಸುವಲ್ಲಿ ಪಿಣರಾಯಿ ಸರ್ಕಾರ ವಿಫಲಗೊಂಡಿದ್ದು, ದೇವರನಾಡಿನಲ್ಲಿ ಶಾಂತಿಗೆ ನೆಲೆ ಇಲ್ಲದಂತಾಗಿದೆ.

Advertisements

Leave a Reply

%d bloggers like this: