Advertisements

ಅಯ್ಯೋಯ್ಯೋ…ಜೆಡಿಎಸ್ ನಲ್ಲಿ ಎನೋ ರಾಂಗ್ ಆಗಿದೆ…

ರಾತ್ರಿ ವೇಳೆ ಜೆಡಿಎಸ್​ ನಾಯಕಿಯರಿಗೆ ಹಾಗೂ ಕಾರ್ಯಕರ್ತೆಯರಿಗೆ ದೂರವಾಣಿ ಕರೆ ಮಾಡದಂತೆ ರಾಜ್ಯ ಜೆಡಿಎಸ್​ ಖಡಕ್ ಎಚ್ಚರಿಕೆ ನೀಡಿದೆ.

ಇಂತಹುದೊಂದು ಒಕ್ಕಣೆಯ ಕರಪತ್ರ ಜೆಡಿಎಸ್ ಕಚೇರಿಯ ನೊಟೀಸ್ ಬೋರ್ಡ್ ನಲ್ಲಿ ರಾರಾಜಿಸುತ್ತಿದೆ.

ಮುಂಬರುವ ಲೋಕಸಭಾ ಚುನಾವಣೆಗೆ ತಯಾರಿ ನಡೆಸುತ್ತಿರುವ ಜೆಡಿಎಸ್​, ತಮ್ಮ ಪಕ್ಷದಿಂದ ಯಾವುದೇ ಲೋಪವಾಗದಂತೆ ಜಾಗರೂಕತೆಯಿಂದ ಹೆಜ್ಜೆ ಇಡುತ್ತಿದೆ. ಒಂದು ವೇಳೆ ಪಕ್ಷಕ್ಕೆ ಯಾವುದೇ ರೀತಿಯಿಂದ ಕೆಟ್ಟ ಹೆಸರು ಬಂದರೆ, ಚುನಾವಣೆಯಲ್ಲಿ ಭಾರೀ ಹೊಡೆತ ಬೀಳ ಬಹುದು ಅನ್ನುವುದು ನಾಯಕರ ಆತಂಕ.

ಚುನಾವಣೆ ಸಂದರ್ಭದಲ್ಲಿ ಸಿಡಿ ಬಿಡುಗಡೆ ಕಾರ್ಯಕ್ರಮ ಭರಾಟೆ ಜೋರಾಗಿರುತ್ತದೆ. ಹೀಗಾಗಿ ಈ ಮುಂಜಾಗ್ರತೆ ಎನ್ನಲಾಗಿದೆ.

ಮಾತ್ರವಲ್ಲದೆ ಪಕ್ಷದ ಕೆಲ ಪುರುಷ ಕಾರ್ಯಕರ್ತರು ಮಹಿಳಾ ಕಾರ್ಯಕರ್ತರ ಜೊತೆ ಸಲುಗೆಯಿಂದ ನಡೆದುಕೊಂಡಿರುವ ವಿಚಾರ ವರಿಷ್ಠರ ಕಿವಿಗೆ ಬಿದ್ದಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಜೆಡಿಎಸ್​ ಖಡಕ್​ ನಿರ್ಧಾರ ಕೈಗೊಂಡಿದ್ದಾರಂತೆ.

ಒಂದು ವೇಳೆ ಯಾರಾದ್ರೂ ದೂರವಾಣಿ ಅಥವಾ ಮೊಬೈಲ್​ ಮೂಲಕ ಕರೆ ಮಾಡಿದರೆ ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಅಂತಾ ರಾಜ್ಯ ಜೆಡಿಎಸ್ ಆದೇಶ ಹೊರಡಿಸಿದೆ.

ದೇಶಾದ್ಯಂತ #MeToo  ಆರೋಪಗಳು ಎಲ್ಲಾ ಕ್ಷೇತ್ರಗಳಲ್ಲೂ ಭರ್ಜರಿಯಾಗೇ ಸದ್ದು ಮಾಡಿತ್ತು. ಈ ಆರೋಪಗಳು ಹಲವರ ನಿದ್ದೆ ಕೆಡಿಸಿತ್ತು. ಇದೀಗ ಜೆಡಿಎಸ್ ಕೊಟ್ಟಿರುವ ನೋಟೀಸ್ ನೋಡಿದರೆ Some thing ಎಡವಟ್ಟು ಅನ್ನಿಸುತ್ತಿದೆ.

Advertisements

One Comment on “ಅಯ್ಯೋಯ್ಯೋ…ಜೆಡಿಎಸ್ ನಲ್ಲಿ ಎನೋ ರಾಂಗ್ ಆಗಿದೆ…

  1. Pingback: ಅಪರೇಷನ್ ಸಂಕ್ರಾಂತಿ : ಕಾಂಗ್ರೆಸ್ ಮನೆಯಲ್ಲಿ ಬೆಂಕಿ : ಕುಮಾರಸ್ವಾಮಿ ಫುಲ್ ಕೂಲ್ – torrentspree

Leave a Reply

%d bloggers like this: