Advertisements

ಮಾನ್ವಿತಾ ಟ್ವೀಟ್ ಕಂಡು ಗಲಿಬಿಲಿಗೊಂಡ ಕಿಚ್ಚ ಸುದೀಪ್..

ನಿರ್ದೇಶಕ ಅನೂಪ್ ಭಂಡಾರಿ ಕಿಚ್ಚ ಸುದೀಪ್ ಗಾಗಿ ಸಿನಿಮಾ ಮಾಡುತ್ತಿರುವುದು ಹಳೆಯ ಸುದ್ದಿ.  ಈ ಪ್ರಾಜೆಕ್ಟ್  ಸುದ್ದಿ ಬಹಿರಂಗವಾದ ಬೆನ್ನಲ್ಲೇ ಚಿತ್ರ ಪ್ರೇಮಿಗಳ ಅಶೀರ್ವಾದ ಬಯಸಿದ್ದ ಅನೂಪ್ “ಬಾಸ್‍ಷಾ ಕಿಚ್ಚ ಸುದೀಪ್ ಅವರು ‘ಬಿಲ್ಲ ರಂಗ ಬಾಷಾ’ ಸಿನಿಮಾ ಮಾಡುತ್ತಿದ್ದು, ಈ ಸಿನಿಮಾವನ್ನು ಸುಪ್ರಿಯಾನ್ವಿ ಪಿಕ್ಟರ್ ಸ್ಟುಡಿಯೋ ಮತ್ತು ಕೆಆರ್ ಕೆ ಶೋರೆಲ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಇದಕ್ಕೆ ನಿಮ್ಮ ಆಶೀರ್ವಾದ ಮತ್ತು ಬೆಂಬಲ ಬೇಕು” ಎಂದು ಟ್ವೀಟ್ ಮಾಡಿದ್ದರು.

ಈ ಟ್ವೀಟ್ ಕಂಡ ನಟಿ ಮಾನ್ವಿತಾ ಅವರು, “ಸೂಪರ್-ಇನ್-ದಿ-ಮಾರ್ಕೆಟ್-ಇನ್-ದಿ-ಮೆಜೆಸ್ಟಿಕ್”ಎಂದು ರೀಟ್ವೀಟ್ ಮಾಡಿದ್ದರು.

ಆದರೆ ಮಾನ್ವಿತಾ ಮಾಡಿದ್ದ ಟ್ವೀಟ್ ಸುದೀಪ್ ಅವರಿಗೆ ಅರ್ಥವಾಗಿಲ್ಲ. ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡ ಅವರು ಮಾನ್ವಿತಾ ಅವರಿಗೆ ರೀ ಟ್ವೀಟ್ ಮಾಡಿ ಅದರ ಅರ್ಥವನ್ನು ತಿಳಿಸಿ ಎಂದು ಮನವಿ ಮಾಡಿದ್ದಾರೆ.

ಇದಕ್ಕೆ ಹ್ಹ ..ಹ್ಹ ಎಂದಷ್ಟೇ ಮಾನ್ವಿತಾ ಪ್ರತಿಕ್ರಿಯಿಸಿದ್ದಾರೆ.

Advertisements

Leave a Reply

%d bloggers like this: