Advertisements

KGF ಚಿತ್ರ ತಡೆಯೋಣ ಬನ್ನಿ : ಕೋಲಾರದಲ್ಲಿ ಕರಪತ್ರದ ಅಬ್ಬರ

ಗೆಲುವಿನ ದಾರಿಯತ್ತ ಹೊರಟವನಿಗೆ ನೂರೆಂಟು ವಿಘ್ನಗಳು… ಯಶಸ್ಸಿನ ಶಿಖರ ಏರಲು ಹೊರಟವನ ಕಾಲು ಎಳೆಯಲು ನೂರಾರು ಮಂದಿ. ಹಾಗೇ ಆಗಿದೆ ಕೆಜಿಎಫ್ ಸಿನಿಮಾದ ಕಥೆ.

ಇಷ್ಟು ದಿನಗಳ ಕಾಲ ಸೈಲೆಂಟ್ ಆಗಿದ್ದ ಶತ್ರುಗಳು ಜೊತೆಯಾಗಿದ್ದಾರೆ. ಒಬ್ಬರು ಕೋರ್ಟ್ ನಲ್ಲಿ ಸ್ಟೇ ತಂದ್ರೆ, ಮತ್ತೊಂದು ಕಡೆ ಕೋಲಾರದಲ್ಲಿ ಕರಪತ್ರಗಳ ಅಬ್ಬರಿಸುತ್ತಿದೆ.

ನಟ ಯಶ್ ಅಭಿನಯದ ಕೆಜಿಎಫ್ ಚಲನಚಿತ್ರ ಬಿಡುಗಡೆ ತಡೆಯೋಣ ಬನ್ನಿ ಎಂದು ನಮೂದಿಸಿರುವ ಕರಪತ್ರ ಈಗ ಕೆಜಿಎಫ್ ಸೇರಿದಂತೆ ಹಲವೆಡೆ ಹರಿದಾಡುತ್ತಿದೆ. 

ಕೆಜಿಎಫ್ ನಾಗರಿಕರು ಎಂಬ ಹೆಸರಿನಲ್ಲಿ ತಮಿಳು, ಕನ್ನಡ, ಆಂಗ್ಲ ಭಾಷೆಯಲ್ಲಿ ಮುದ್ರಿತವಾಗಿರುವ ಕರಪತ್ರ ಈಗ ಹೆಚ್ಚಾಗಿ ಕೆಜಿಎಫ್ ಮತ್ತಿತರೆಡೆ ಸದ್ದು ಮಾಡುತ್ತಿದೆ. 

ಕೆಜಿಎಫ್‍ನ ಸಹೋದರರೇ, ನೋಡಿ ನಮ್ಮ ಊರು, ನಮ್ಮ ಊರಿನ ಗೌರವ, ಮಾನ ಮರ್ಯಾದೆಯನ್ನು ತೆಗೆಯುತ್ತಿದ್ದಾರೆಂಬಂತೆ ಕರಪತ್ರದಲ್ಲಿ ಬಿಂಬಿಸಲಾಗಿದೆ. 

ಕೊಲೆಗಾರರು, ದೊಂಬಿಕೋರರು, ರಕ್ತ ಪಿಶಾಚಿಗಳು, ಕ್ರೂರ ಸ್ವಾಭಾವದ ಜನರು, ರೌಡಿಗಳು ಎಂದು ಕೆಜಿಎಫ್ ಚಿತ್ರವನ್ನು ಚಿತ್ರೀಕರಣ ಮಾಡಿ, ಯುವಕರು, ಉದ್ಯೋಗ ಅವಕಾಶಗಳಿಗೆ ಕುಂದುಂಟು ಮಾಡಿ, ನಗರದ ಜನರಿಗೆ, ನಗರಕ್ಕೆ, ಗೌರವಕ್ಕೆ ಧಕ್ಕೆ ತರಲಾಗಿದೆ. 

ದಲಿತ ವಾಸಿಗಳ ಬಗ್ಗೆ ಹೀನವಾಗಿ ಚಿತ್ರ ತಯಾರಿಸಿ, ಪ್ರಪಂಚಕ್ಕೆಲ್ಲಾ ಪ್ರಚಾರ ಮಾಡುವ ಮೂಲಕ ಭಾರತದ ಸಂವಿಧಾನ ಕ್ರಿಯೆಗೂ ಧಕ್ಕೆ ಮಾಡಿರುತ್ತಾರೆ. 

ಭಾರತದ ಡಾ.ಬಾಬಾ ಸಾಹೇಬರ ಸೇವೆಗೆ, ಮಾನವ ಹಕ್ಕುಗಳಿಗೆ ಅಡ್ಡಗಾಲು ಮಾಡಿರುವ ಚಿತ್ರ ಬಿಡುಗಡೆಗೆ ತಡೆದು ಮಾನವ ಹಕ್ಕುಗಳನ್ನು, ದಲಿತರನ್ನು ರಕ್ಷಿಸಲು ಬನ್ನಿ, ಒಂದುಗೂಡಿ ನಮ್ಮನ್ನು, ನಮ್ಮ ಜೀವನವನ್ನು, ಊರನ್ನು ರಕ್ಷಿಸೋಣ ಎಂದು ಕರಪತ್ರದಲ್ಲಿ ವಿವರಿಸಲಾಗಿದೆ. 

ಕರಪತ್ರ ಮುದ್ರಿಸಿದ ಪುಣ್ಯಾತ್ಮರು ಚಿತ್ರ ಬಿಡುಗಡೆಗೂ ಮುನ್ನ ಎಲ್ಲಿ ಹೋಗಿದ್ದರು. ಹೋಗ್ಲಿ ಕೆಜಿಎಫ್ ನಲ್ಲೇ ಶೂಟಿಂಗ್ ಆಯ್ತು ತಾನೇ, ಯಾರೂ ಪ್ರತಿಭಟನೆಗೆ ಬರಲಿಲ್ಲ. ಹೀಗೆ ಮರೆಯಲ್ಲಿ ನಿಂತು ಕಲ್ಲು ಹೊಡೆಯುತ್ತಿದ್ದಾರೆ. ಹೋಗ್ಲಿ ಎದೆಗಾರಿಕೆ ಅನ್ನುವುದು ಇರುತ್ತಿದ್ರೆ ಕರಪತ್ರದಲ್ಲಿ ಹೆಸರು ವಿಳಾಸ, ಸಂಪರ್ಕ ಸಂಖ್ಯೆ ಇರುತ್ತಿತ್ತು. ಆದರೆ ಅದ್ಯಾವುದು ಇಲ್ಲ ಅಂದ್ರೆ ಇವೆಲ್ಲಾ ಕೈಲಾಗದವರು ಮಾಡುತ್ತಿರುವ ಹೋರಾಟ ಅನ್ನುವುದರಲ್ಲಿ ಎರಡು ಮಾತಿಲ್ಲ.

Advertisements

Leave a Reply

%d bloggers like this: