Advertisements

KGF ಗೆ ಶಾಕ್ : ಯಶ್ ಬೆನ್ನಿಗೆ ನಿಂತು ಗುಡುಗಿದೆ ಕರಿ ಚಿರತೆ

ವಿಶ್ವದಾದ್ಯಂತ ಬಿಡುಗಡೆ ಮುನ್ನ ಕುತೂಹಲ ಕೆರಳಿಸಿದ್ದ  ಕೆ.ಜಿ.ಎಫ್ ಸಿನಿಮಾಗೆ ಸಂಕಷ್ಟ ಎದುರಾಗಿದ್ದು, ಚಿತ್ರ ಬಿಡುಗಡೆಗೆ ನಗರದ 10 ನೇ ಸಿಟಿ ಸಿವಿಲ್ ಕೋರ್ಟ್ ಮಧ್ಯಂತರ ತಡೆ ನೀಡಿದೆ.

ಕೋರ್ಟ್ ಮಧ್ಯಂತರ ಆದೇಶದ ಅನ್ವಯ 2019 ಜನವರಿ 7 ನೇ ದಿನಾಂಕದವರೆಗೆ ಚಿತ್ರ ಬಿಡುಗಡೆಯಾಗುವಂತಿಲ್ಲ.

ವೆಂಕಟೇಶ್ ಎಂಬವರು ಕೆ.ಜಿ.ಎಫ್ ಸಿನಿಮಾ ವಿರುದ್ಧ ದಾವೆ ಹೂಡಿದ್ದು, ಕೆ.ಜಿ.ಎಫ್ ಸಿನಿಮಾ ರೌಡಿ ತಂಗಂ ಜೀವನಾಧರಿತ ಚಿತ್ರ ಎಂದು ಆರೋಪ ಮಾಡಿದ್ದಾರೆ. ತಾವು ತಂಗಂ ಜೀವನಾಧರಿತ ಸಿನಿಮಾ ಮಾಡಲು ಹಕ್ಕು ಪಡೆದಿದ್ದು, ಅದ್ದರಿಂದ ಸಿನಿಮಾಗೆ ಬಿಡುಗಡೆಗೆ ತಡೆ ನೀಡಬೇಕು ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಈ ನಡುವೆ ಕೋರ್ಟ್ ತಡೆಯಾಜ್ಞೆ ಸುದ್ದಿ ಹೊರ ಬೀಳುತ್ತಿದ್ದಂತೆ ನಟ ದುನಿಯಾ ವಿಜಿ ಕೆರಳಿ ಕೆಂಡವಾಗಿದ್ದಾರೆ.

ಮುನಿದನೇ ಸುಬ್ರಹ್ಮಣ್ಯ : KGF ಸಂಕಷ್ಟಕ್ಕೆ ದೇವರ ಶಾಪವೇ ಕಾರಣವಾಯ್ತ..?

ಫೇಸ್ ಬುಕ್ ನಲ್ಲಿ ಪೋಸ್ಟ್ ಒಂದನ್ನು ಹಾಕಿರುವ ಅವರು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.

ಮನುಷ್ಯಂಗೆ ಅಸೂಯೆ ಅನ್ನೋದು ಈ ಮಟ್ಟಕ್ಕೆ ಇರುತ್ತೆ ಅಂತ ನನಗೆ ಇವತ್ತೇ ಗೊತ್ತಾಗಿದ್ದು. ಯಶ್ ಅನ್ನು ಇಂಡಸ್ಟ್ರಿಗೆ ಬಂದ ಆರಂಭದಿಂದಲೇ ನೋಡಿದ್ದೀನಿ. ಆದರೆ ಅವರ ಬೆಳವಣಿಗೆ ನನಗೇ‌ ಅಚ್ಚರಿ ಮೂಡಿಸೋ‌ ಹಾಗಿತ್ತು. ಅದರಲ್ಲಿ ಕೂಡ ಕೆ.ಜಿ.ಎಫ್ ಎಂಬ ಚಿತ್ರದ ಬಗ್ಗೆ ಕೇಳಿದಾಗ ತುಂಬಾನೇ ಹೆಮ್ಮೆ ಆಗಿತ್ತು. ಯಾಕೆಂದರೆ ತೆಲುಗಿನ ಬಾಹುಬಲಿ‌ಯನ್ನು ಮೀರಿಸೋ‌ ಅಂತ ಸಿನಿಮಾ ನಮ್ಮಲ್ಲೂ ಬರ್ತಾ ಇದೆ ಅಂತ ಖುಷಿಯಾಗಿದ್ದೆ.

ಎಲ್ಲೋ‌ ತಮಿಳಲ್ಲಿ‌ ಸರಿಯಾಗಿ ಥಿಯೇಟರ್ ‌ಸಿಗ್ತಾ ಇಲ್ಲ ಅಂದ್ರೇನೇ ಇದ್ಯಾಕಪ್ಪ ಹಿಂಗಾಯ್ತು ಅಂತ ಯೋಚನೆ ಮಾಡೋ ಹಾಗಿತ್ತು. ಅಂಥದ್ರಲ್ಲಿ ಈಗ ನಮ್ಮೋರೇ ತಡೆಯಾಜ್ಞೆ ತಂದಿದ್ದಾರೆ. ನನಗೆ ಈ ಸ್ಟೇ ತಂದಿರೋ ವೆಂಕಟೇಶ್ ಯಾರು ಅಂತ ಗೊತ್ತಿಲ್ಲ. ಆದ್ರೆ ಆತ ಮಾಡಿರೋದು ಹಂಡ್ರೆಡ್ ಪರ್ಸೆಂಟ್ ತಪ್ಪು ಅನ್ನೋದರಲ್ಲಿ‌ ಡೌಟೇ ಇಲ್ಲ. ಯಾಕೆಂದರೆ ಕತೆ ಬಗ್ಗೆ ಸಂಶಯ ಇದ್ರೆ ಈಗ ಕೋರ್ಟ್ ಗೆ ಹೋಗೋದಲ್ಲ. ಮೊದಲೇ ಕೇಸ್ ಹಾಕಬೇಕಿತ್ತು.

ಹೆಲಿಕಾಪ್ಟರ್ ಮೂಲಕ ಕುಕ್ಕೆ ಪ್ರವೇಶ : ಯಶ್ ಗೆ ಕಾದಿದೆಯೇ ಸಂಕಷ್ಟ…?

ಅದು ಬಿಟ್ಟು ಕಡೇ ಘಳಿಗೇಲಿ ಬಂದಿರೋದು ಸಿನಿಮಾಗೆ ಅಡ್ಡಿ ಪಡಿಸೋ ಉದ್ದೇಶಾನೇ ತೋರಿಸ್ತಿದೆ. ಒಂದು ವೇಳೆ ಚಿತ್ರ ನಾಳೆ ಪ್ರದರ್ಶನ ಕಾಣದೇ ಹೋದ್ರೆ ಅದರಿಂದಾಗೋ ನಷ್ಟದ ಅರಿವು ಇವರಿಗಿದ್ಯಾ? ಅವರು ದೊಡ್ಡ ಪ್ರೊಡ್ಯೂಸರು, ಅವರಿಗೆ ಪ್ರಾಬ್ಲಮ್ಮಾಗಲ್ಲ ಅನ್ನೋರು ಯಶ್ ಬಗ್ಗೆ ಯೋಚನೆ ಮಾಡಿದ್ದೀರ? ಒಬ್ಬ ಕಲಾವಿದ ಎರಡು ವರ್ಷಗಳಿಂದ ಒಂದು ಚಿತ್ರಕ್ಕೆ ಇಷ್ಟು ಪರಿಶ್ರಮ ವಹಿಸಿರ್ಬೇಕಾದ್ರೆ ಆತನಿಗೆ ಹೀಗೆ ಹಿಂಸೆ ಕೊಡೋಕೆ ಮನಸಾದ್ರು ಹೇಗ್ ಬರುತ್ತೆ? ನಾನು ಕೂಡ ವಿಡಿಯೋ ಬೈಟ್ ನಲ್ಲಿ ನಿರ್ಮಾಪಕರ ಮಾತು ಕೇಳ್ದೆ. ಅವರು ಚಿತ್ರ ನಾಳೆ ಬಿಡುಗಡೆಯಾಗ್ತಿದೆ ಅಂತ ಅವರು ಕಾನ್ಫಿಡೆಂಟಾಗಿ ಹೇಳಿದ್ದಾರೆ.

ಖಂಡಿತವಾಗಿ ಬಿಡುಗಡೆ ಆಗಲಿ. ಇಷ್ಟು ಒಳ್ಳೆಯ ಪ್ರಾಜೆಕ್ಟ್ ತರಬೇಕಾದ್ರೆ ಇಂಥದೆಲ್ಲ ಅಡ್ಡಿಗಳು ಸಹಜ ಅಂದ್ಕೊಳ್ಳಿ. ಇದು ಬೇರೆ ಕೆ.ಜಿ.ಎಫ್ ಸ್ಟೋರಿ. ಗಣಿಯಿಂದ ಚಿನ್ನ ತೆಗೆದಷ್ಟೇ ಕಷ್ಟ ಪಟ್ಟಿದ್ದೀರ. ಆದರೆ ಹೊರಗೆ ಬರ್ತಿರೋದು ತಂಗಂ ಅಲ್ಲ ಅಪ್ಪಟ ಚಿನ್ನ ಅನ್ನೋ ನಂಬಿಕೆ ನನಗಿದೆ. ನಮಗಿದೆ. ಯಶ್ ಗೂ ಚಿತ್ರಕ್ಕೂ ನಮ್ಮೆಲ್ಲರ ಬೆಂಬಲ, ಶುಭಾಶಯ ಖಂಡಿತ ಜೊತೆಗಿದೆ. ಕೆ.ಜಿ.ಎಫ್ ಗೆ ಒಳ್ಳೇದಾಗಲಿ.

Advertisements

Leave a Reply

%d bloggers like this: