Advertisements

ಇನ್ನು ಪ್ರಧಾನಿ ಮೋದಿ ನಿದ್ದೆ ಮಾಡೋದು ಕಷ್ಟ…ಯಾಕೆ ಗೊತ್ತಾ…?

ಪಂಚ ರಾಜ್ಯಗಳ ಫಲಿತಾಂಶದಿಂದ ಶಕ್ತಿ ವೃದ್ಧಿಸಿಕೊಂಡಿರುವ ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲಿ ಗೆಲುವಿನ ಕನಸು ಕಾಣುತ್ತಿದೆ.

ಸಾಲ ಮನ್ನಾ, ಸಾಫ್ಟ್ ಹಿಂದುತ್ವ ಅಜೆಂಡಾದಿಂದ ಮತದಾರರನ್ನು ಮೋಡಿ ಮಾಡಿರುವ ರಾಹುಲ್ 2019ರ ಮಹಾಸಮರದಲ್ಲಿ ಮೋದಿಯನ್ನು ಮಣಿಸುವ ವಿಶ್ವಾಸ ವೃದ್ಧಿಸಿಕೊಂಡಿದ್ದಾರೆ.

ಮೂರು ರಾಜ್ಯಗಳಲ್ಲಿ ಕಾಂಗ್ರೆಸ್​ನ ಮೂವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ರಾಹುಲ್, ಚುನಾವಣೆಗೆ ಮುನ್ನ ರೈತರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸುವ ತನಕ ಪ್ರಧಾನಿ ನರೇಂದ್ರ ಮೋದಿಗೆ ನಿದ್ದೆ ಅಥವಾ ವಿಶ್ರಾಂತಿ ಪಡೆಯಲು ಬಿಡುವುದಿಲ್ಲ ಎಂದಿದ್ದಾರೆ.

ನಾವು ಅಧಿಕಾರಕ್ಕೆ ಬರುತ್ತಿದ್ದಂತೆ ಕೆಲಸ ಆರಂಭವಾಗಿದೆ ಎಂದಿರುವ ರಾಹುಲ್, ಕಾಂಗ್ರೆಸ್ ಅಧಿಕಾರಕ್ಕೆ ಬರುವ ರಾಜ್ಯಗಳಲ್ಲಿ ರೈತರ ಸಾಲಮನ್ನಾ ಮಾಡುವುದಾಗಿ ಘೋಷಿಸಿದ್ದೆವು. ಮೂರು ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಸಾಲಮನ್ನಾ ಮಾಡಲಾಗಿದೆ.

ಛತ್ತೀಸ್ ಘಢದಲ್ಲೂ ಈ ಪ್ರಕ್ರಿಯೆ ಆರಂಭವಾಗಿದೆ. ಈಗ ಮೋದಿ ರೈತರಿಗೆ ಕೊಟ್ಟ ಭರವಸೆ ಈಡೇರಿಸಲಿ. ರೈತರ ಸಾಲ ತೀರಿಸಲಿ ಎಂದು ಸವಾಲು ಹಾಕಿದ್ದಾರೆ.

Advertisements

One Comment on “ಇನ್ನು ಪ್ರಧಾನಿ ಮೋದಿ ನಿದ್ದೆ ಮಾಡೋದು ಕಷ್ಟ…ಯಾಕೆ ಗೊತ್ತಾ…?

  1. Pingback: ಸಿದ್ದಗಂಗಾ ಶ್ರೀಗಳಿಗೆ ರಾಹುಲ್ ಅಂತಿಮ ನಮನ : ವಿವಾದಕ್ಕೆ ಗುರಿಯಾದ ಟ್ವೀಟ್ – torrentspree

Leave a Reply

%d bloggers like this: