Advertisements

ಅಂಬಿಡೆಂಟ್ ಪ್ರಕರಣ: ವೆಂಕಟೇಶ್ ಪ್ರಸನ್ನ ಬರೆದ ಪತ್ರದಲ್ಲಿ ಏನಿದೆ..?

ಆ್ಯಂಬಿಡೆಂಟ್ ಕಂಪನಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ವಿಜಯ್ ಟಾಟಾ ಇಂದು ಡಿಜಿ ಹಾಗೂ ಐಜಿಗೆ ಪತ್ರ ಬರೆದಿದ್ದರು.

ಡಿಜಿ ಹಾಗೂ ಐಜಿ ನೀಲಮಣಿ ರಾಜು ಅವರಿಗೆ ಪತ್ರ ಬರೆದಿದ್ದ ವಿಜಯ್​ ಟಾಟಾ, ಸಿಸಿಬಿ ಎಸಿಪಿ ವೆಂಕಟೇಶ್ ಪ್ರಸನ್ನ ವಿರುದ್ಧ ದೂರು ನೀಡಿದ್ದರು. ಅವರ ಬಳಿ ಎಸಿಪಿ ವೆಂಕಟೇಶ್​ ನಡೆದುಕೊಂಡ ರೀತಿ ಹಾಗೂ ಒತ್ತಡದ ಕುರಿತು ಎಳೆಎಳೆಯಾಗಿ ಪತ್ರದಲ್ಲಿ ಉಲ್ಲೇಖಿಸಿದ್ದರು.

ಬಳಿಕ ಪ್ರಸನ್ನ ಅವರನ್ನು ಪ್ರಕರಣದ ತನಿಖಾಧಿಕಾರಿ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಇದಾದ ಬೆನ್ನಲ್ಲೇ ಅಂದರೆ ಕಳೆದ ತಿಂಗಳು ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದ ಎಸಿಪಿ ವೆಂಕಟೇಶ್ ಪ್ರಸನ್ನ, ತಮಗಾದ ಅನ್ಯಾಯ, ತಮಗಾದ ನೋವನ್ನು ವಿವರಿಸಿದ್ದಾರೆ.

ಪ್ರಸನ್ನ ಅವರ ಪತ್ರವನ್ನು ನೋಡಿದರೆ, ಸಿಸಿಬಿ ಪೊಲೀಸರಿಂದ ಪ್ರಕರಣಕ್ಕೆ ನ್ಯಾಯ ಸಿಗುತ್ತದೆ ಅನ್ನುವ ವಿಶ್ವಾಸ ಕಾಣಿಸುತ್ತಿಲ್ಲ. ಈ ಪ್ರಕರಣವನ್ನು ಸಿಬಿಐಗೆ ವಹಿಸಿದರೆ ಪಾತ್ರ ನ್ಯಾಯ ನಿರೀಕ್ಷಿಸಲು ಸಾಧ್ಯ.

Advertisements

Leave a Reply

%d bloggers like this: