Advertisements

ಮೋದಿಯನ್ನು ಸೋಲಿಸುವ ಶಕ್ತಿ ರಾಹುಲ್ ಗೆ ಎಲ್ಲಿದೆ…? ಅಸಾದುದ್ದೀನ್ ಓವೈಸಿ ಪ್ರಶ್ನೆ

ಲೋಕಸಭಾ ಚುನಾವಣೆ ದಿಕ್ಸೂಚಿ ಎಂದೇ ಬಿಂಬಿಸಲಾಗಿದ್ದ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಬಿಜೆಪಿ ಅಘಾತಕೊಟ್ಟರೆ, ಕಾಂಗ್ರೆಸ್ ಗೆ ಹೊಸ ಬಲ ತುಂಬಿದೆ. ಆದರೆ ಗಾಯಗೊಂಡಿರುವ ಹುಲಿಯಂತಾಗಿರುವ ಮೋದಿ ಮತ್ತು ಅಮಿತ್ ಶಾ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ ರಣ ತಂತ್ರ ರೂಪಿಸಲಾರಂಭಿಸಿದ್ದಾರೆ.

ರಾಜ್ಯ ನಾಯಕರನ್ನು ನಂಬಿಕೊಂಡರೆ ಕೂತರೆ ಕಷ್ಟ ಎಂದು ಗೊತ್ತಾಗುತ್ತಿದ್ದಂತೆ, ಲೋಕಸಭೆ ಸಮರಕ್ಕಾಗಿ ಸಮರ ತಂತ್ರ ರೂಪಿತವಾಗುತ್ತಿದೆ.

ಈ ನಡುವೆ ಹೇಳಿಕೆಯೊಂದನ್ನು ನೀಡಿರುವ ಎಐಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ, 2019 ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಸೋಲಿಸುವ ಶಕ್ತಿ ಕಾಂಗ್ರೆಸ್‌ ಗೆ ಇರುವುದು ಅನುಮಾನ ಎಂದಿದ್ದಾರೆ.

ಈ ಹೇಳಿಕೆ ಇದೀಗ  ಸಂಚಲನ ಮೂಡಿಸಿದ್ದು. ಮೋದಿಯನ್ನುತೀವ್ರವಾಗಿ ಟೀಕಿಸುತ್ತಿದ್ದ ಓವೈಸಿ ಕಾಂಗ್ರೆಸ್ ಶಕ್ತಿಯ ಬಗ್ಗೆ ನೆಗೆಟಿವ್ ಹೇಳಿಕೆ ನೀಡಿರುವುದು ಅಚ್ಚರಿ ಮೂಡಿಸಿದೆ.

ಕಾಂಗ್ರೆಸ್ ಮಾತ್ರವಲ್ಲದೆ ಟಿ.ಆರ್‌.ಎಸ್ ಬಗ್ಗೆಯೂ ಮಾತನಾಡಿರುವ ಓವೈಸಿ, ರಾಷ್ಟ್ರರಾಜಕಾರಣದಲ್ಲಿ ಪ್ರಾದೇಶಿಕ ಪಕ್ಷಗಳು ಪ್ರಮುಖ ಸ್ಥಾನವನ್ನು ಮುಂದೆ ಪಡೆದುಕೊಳ್ಳಲಿವೆ. ಲೋಕಸಭೆ ಚುನಾವಣೆಯಲ್ಲಿ ತೆಲಂಗಾಣದ 17 ಸೀಟುಗಳನ್ನು ಟಿ.ಆರ್‌.ಎಸ್‌ ಗೆಲ್ಲಲಿದ್ದು ನಮ್ಮ ಪಕ್ಷ ಬೆಂಬಲವಾಗಿ ನಿಲ್ಲಲ್ಲಿದೆ ಎಂದಿದ್ದಾರೆ.

ಇದೇ ವೇಳೆ ರಾಹುಲ್ ಗಾಂಧಿ ಮೇಲೆ ಹರಿ ಹಾಯ್ದ ಅವರು ನಮ್ಮಹಾಗೂ ಟಿ.ಆರ್.ಎಸ್‌ ಮೇಲೆ ಸುಳ್ಳು ಆರೋಪ ಮಾಡಿದವರು ಈಗ ಅನುಭವಿಸುತ್ತಿದ್ದಾರೆ. ರಾಹುಲ್ ಗಾಂಧಿಒಮ್ಮೆ ಆತ್ಮಾವಲೋಕಲೋನ ಮಾಡಿಕೊಳ್ಳಲು ಕಾಲ ಬಂದಿದೆ ಎಂದಿದ್ದಾರೆ.

ಈ ಮೂಲಕ ತಮ್ಮೊಂದಿಗೆ ಮೈತ್ರಿ ಮಾಡಿಕೊಳ್ಳದಿರುವುದಕ್ಕೆ ತಕ್ಕ ಪಾಠ ಸಂದಿದೆ ನಿಮಗೆ ಎಂದಿದ್ದಾರೆ.

Advertisements

One Comment on “ಮೋದಿಯನ್ನು ಸೋಲಿಸುವ ಶಕ್ತಿ ರಾಹುಲ್ ಗೆ ಎಲ್ಲಿದೆ…? ಅಸಾದುದ್ದೀನ್ ಓವೈಸಿ ಪ್ರಶ್ನೆ

  1. Pingback: ಸಿದ್ದಗಂಗಾ ಶ್ರೀಗಳಿಗೆ ರಾಹುಲ್ ಅಂತಿಮ ನಮನ : ವಿವಾದಕ್ಕೆ ಗುರಿಯಾದ ಟ್ವೀಟ್ – torrentspree

Leave a Reply

%d bloggers like this: