Advertisements

ಸಿಎಂ ಕುಮಾರಸ್ವಾಮಿ ಪತ್ನಿಯ ಸಂಭಾವನೆ ಎಷ್ಟು ಗೊತ್ತಾ…?

ಚಂದನವನದ ಸುಂದರ ಮನಸ್ಸಿನ ನಟಿ ರಾಧಿಕಾ ಕುಮಾರಸ್ವಾಮಿ. ತಾನಾಯ್ತು ತನ್ನ ಕೆಲಸವಾಯ್ತು, ವೈಯುಕ್ತಿಕ ಬದುಕಾಯ್ತು ಎಂದು ಸಾಗಿಕೊಂಡು ಬಂದವರು ರಾಧಿಕಾ.

ಕೆಲಸದ ಮೇಲಿನ ನಿಷ್ಠೆಯೇ ಅವರನ್ನು ಈ ಮಟ್ಟಿಗೆ ತಂದು ನಿಲ್ಲಿಸಿದೆ ಅನ್ನುವುದರಲ್ಲಿ ಎರಡು ಮಾತಿಲ್ಲ. ವಿವಾದಗಳಿಂದ ಸದಾ ದೂರ ಇರುವ ಮತ್ತು ವಿವಾದ ಸುತ್ತಿಕೊಂಡರೆ ದೂರ ಸರಿಸುವ ತಾಕತ್ತು ಅವರನ್ನು ಬೆಳೆಸಿದೆ.

ಆದರೆ ಇದೀಗ ತಮ್ಮ ಮುಂದಿನ ‘ದಮಯಂತಿ’ ಚಿತ್ರಕ್ಕಾಗಿ ತೆಗೆದುಕೊಂಡ ಸಂಭಾವನೆ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದೆ.

ಈ ಚಿತ್ರಕ್ಕಾಗಿ ರಾಧಿಕಾ ಬರೋಬ್ಬರಿ 1 ಕೋಟಿರೂ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಈ ಮೂಲಕ ಚಂದನವನದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟಿಯರ ಪೈಕಿ ಮೊದಲ ಸ್ಥಾನದಲ್ಲಿದ್ದಾರಂತೆ.

ಇನ್ನು ಈ ಹಿಂದೆ ರಮ್ಯಾ ‘ಆರ್ಯನ್’ ಚಿತ್ರಕ್ಕಾಗಿ 66 ಲಕ್ಷ ರೂಪಾಯಿ, ರಶ್ಮಿಕಾಮಂದಣ್ಣ ‘ಪೊಗರು’ ಚಿತ್ರಕ್ಕಾಗಿ 60 ಲಕ್ಷ ರೂಪಾಯಿಯನ್ನು ಸಂಭಾವನೆಯಾಗಿ ಪಡೆದಿದ್ದಾರೆ. ಇವರುಗಳ ದಾಖಲೆಯನ್ನು ಇದೀಗ ರಾಧಿಕಾ ಮುರಿದಿದ್ದಾರೆ.

ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ನಿರ್ಮಾಣಗೊಳ್ಳುತ್ತಿರುವ ಬಹುಕೋಟಿ ವೆಚ್ಚದ ಚಿತ್ರ ದಮಯಂತಿಯ ಫಸ್ಟ್ಲುಕ್ ಬಿಡುಗಡೆಯಾಗಿದ್ದು, ಚಿತ್ರ ರಸಿಕರ ಕುತೂಹಲವನ್ನು ಇಮ್ಮಡಿಗೊಳಿಸಿದೆ. ರಾಧಿಕಾ ನಟನೆಬಗ್ಗೆಯೂ ಭರವಸೆ ಮೂಡಿಸಿದೆ.

ಈಗಾಗಲೇ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ರಾಧಿಕಾ ಈ ಚಿತ್ರಕ್ಕಾಗಿ ಬರೋಬ್ಬರಿ 10ಕೆ.ಜಿ ತೂಕವನ್ನು ಕಡಿಮೆ ಮಾಡಿಕೊಂಡಿದ್ದಾರೆ.

ನವರಸನ್ ಎಂಬುವವರು ನಿರ್ಮಾಣ ಹಾಗೂ ನಿರ್ದೇಶನ ಜವಾಬ್ದಾರಿಹೊತ್ತುಕೊಂಡಿದ್ದು, ತೆಲುಗಿನ ‘ಅರುಂಧತಿ’, ‘ಭಾಗಮತಿ’ರೇಂಜ್ ನಲ್ಲಿಯೇ ಚಿತ್ರ ತಯಾರಾಗುತ್ತಿದೆ.

Advertisements

Leave a Reply

%d bloggers like this: