ಬಿಜೆಪಿಯವರಿಗೆ ಗತಿ ಇಲ್ಲದೇ ಯಡಿಯೂರಪ್ಪರನ್ನ ಇಟ್ಟುಕೊಂಡಿದ್ದಾರೆ: ಮಧು ಬಂಗಾರಪ್ಪ

ಮುಂದಿನ ಲೋಕಸಭಾ ಚುನಾವಣೆಗೆ ಜೆಡಿಎಸ್ ಹಾಗೂ ಕಾಂಗ್ರೆಸ್ ಈಗಾಗಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಅಭ್ಯರ್ಥಿ ಯಾರೇ ಆಗಿರಲಿ ಗೆಲ್ಲಿಸುವುದು ನಮ್ಮಗುರಿ ಎಂದು ಜೆಡಿಎಸ್ ಮುಖಂಡ ಮಧು ಬಂಗಾರಪ್ಪ ಹೇಳಿದ್ದಾರೆ..

ಶಿವಮೊಗ್ಗದಲ್ಲಿ ಮಾತನಾಡಿದ ಅವರು ಲೋಕಸಭಾ ಉಪ ಚುನಾವಣೆಯಲ್ಲಿ ಕಾಲಾವಧಿ ಕಡಿಮೆ ಇತ್ತು. ಸ್ವಲ್ಪ ಹೆಚ್ಚು ಸಮಯ ಸಿಗುತ್ತಿದ್ದರೆ ನಾವೇ ಗೆಲ್ಲುತ್ತಿದ್ದೆವು. ಆದರೂ ಜನ ಹೆಚ್ಚಿನ ಸಹಕಾರ ನೀಡಿದ್ದಾರೆ ಅಂದರು.

ಮುಂದಿನ ಚುನಾವಣೆಯ ರಣತಂತ್ರದ ಅಂಗವಾಗಿ ಈಗಾಗಲೇ ಎಲ್ಲಾ ಭಾಗಗಳಿಗೆ ಭೇಟಿ ಮಾಡಿ ಕೃತಜ್ಞತೆ ಸಲ್ಲಿಕೆ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ನಮ್ಮದಿದೆ, ಜನಪರ ಕೆಲಸವನ್ನು ಪಕ್ಷಾತೀತವಾಗಿ ನಡೆಯುತ್ತಿದೆ ಎಂದರು.

ಇದೇ ವೇಳೆ ಯಡಿಯೂರಪ್ಪನವರು ಸಚಿವ ಡಿ.ಕೆ.ಶಿವಕುಮಾರ್ ಮನೆಗೆ ಹೋಗಿರುವುದನ್ನು ಟೀಕಿಸಿದ ಮಧು, ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಜಿಲ್ಲೆಯಲ್ಲಿ ಏಕೆ ಏತ ನೀರಾವರಿ ಮಾಡಲಿಲ್ಲ. ಈಗ ಅರ್ಜಿ ಸಲ್ಲಿಸುತ್ತಿದ್ದಾರೆ. ಯಡಿಯೂರಪ್ಪ ರಾಜ್ಯ ಸರ್ಕಾರ ಸತ್ತು ಹೋಗಿದೆ ಅನ್ನುತ್ತಾರೆ. ಅವರೇ ಶಿವಕುಮಾರ್ ಬಳಿ ಹೋಗಿ ನೀರಾವರಿ ಯೋಜನೆಗಳಿಗೆ ಅರ್ಜಿ ಸಲ್ಲಿಸಿದ್ದಾರೆ.

ಶಿವಕುಮಾರ್ ಮನೆಗೆ ಅವರು ಹೋಗಿದ್ದು, ಅಭಿವೃದ್ಧಿ ವಿಚಾರವಾಗಿ ಅಲ್ಲ. ರಾಜಕೀಯ ಸ್ಟಂಟ್ ಮಾಡಲು.

ಯಡಿಯೂರಪ್ಪ ಮುಖ್ಯಮಂತ್ರಿ ಆದ ಸಮಯದಲ್ಲಿ ಒಂದು ರೂಪಾಯಿ ರೈತರ ಸಾಲ ಮನ್ನಾ ಆಗಿಲ್ಲ. ಟೋಪಿ ಹಾಕುವುದರಲ್ಲಿ ಯಡಿಯೂರಪ್ಪ ನಂಬರ್ ಒನ್.

ಅಪರೇಷನ್ ಕಮಲ ಮಾಡಲು ಸಚಿವ ಶಿವಕುಮಾರ್​, ಸಿಎಂ ಕುಮಾರಸ್ವಾಮಿಬಿಡಲ್ಲ. ಯಡಿಯೂರಪ್ಪ, ಬಿಜೆಪಿಯವರು ಎಷ್ಟೇ ತಿಪ್ಪರಲಾಗ ಹೊಡೆದರು, ಸರ್ಕಾರ ಬೀಳಲ್ಲ.ಚಳಿಗಾಲದ ಅಧಿವೇಶನಕ್ಕೆ ಹೋಗಿ ಚರ್ಚೆ ಮಾಡ್ಲಿ. ಜೀವನದಲ್ಲಿ ಯಡಿಯೂರಪ್ಪ ಮತ್ತೆ ಎಂದೂ ಮುಖ್ಯಮಂತ್ರಿಯಾಗಲ್ಲ. ಬಿಜೆಪಿಯವರಿಗೆ ಗತಿ ಇಲ್ಲದೇ ಯಡಿಯೂರಪ್ಪನವರನ್ನು ಇಟ್ಟುಕೊಂಡಿದ್ದಾರೆ ಎಂದು ಇದೇ ವೇಳೆ ಕುಟುಕಿದರು.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: