Advertisements

ಧ್ರುವ ನಿಶ್ಚಿತಾರ್ಥಕ್ಕೆ ಬರಲಿದೆ 50 ಗೋವುಗಳು

Dhruva Sarja

ಬೆಂಗಳೂರು : ಬಹುಕಾಲದ ಗೆಳತಿ ಪ್ರೇರಣಾ ಶಂಕರ್‌ ಜೊತೆಗೆ ನಟ ಧ್ರುವ ಸರ್ಜಾ ನಾಳೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ.

ಕಾರ್ಯಕ್ರಮದ ಪೂರ್ತಿ ಉಸ್ತುವಾರಿಯನ್ನು ಧ್ರುವ ಮಾವ ಅರ್ಜುನ್‌ ಸರ್ಜಾ ವಹಿಸಿಕೊಂಡಿದ್ದು, ಅವರ ಸಾರಥ್ಯದಲ್ಲೇ ಎಲ್ಲಾ ವ್ಯವಸ್ಥೆಗಳ ಸಿದ್ದತೆ ನಡೆದಿದೆ.

ಈ ಸಲುವಾಗಿ ಬನಶಂಕರಿ ಎರಡನೇ ಹಂತದಲ್ಲಿರುವ ಪುಣ್ಯಕ್ಷೇತ್ರ ಶ್ರೀ ಧರ್ಮಗಿರಿ ದೇವಾಲಯದಲ್ಲಿ , ಕಲಾ ನಿರ್ದೇಶಕ ಅರುಣ್‌ ಸಾಗರ್‌ ವಿಶೇಷವಾದ ವೇದಿಕೆ ನಿರ್ಮಿಸುತ್ತಿದ್ದಾರೆ. ತೆಂಗಿನ ಗರಿ ಮಾವಿನ ಸೊಪ್ಪು ಸೇರಿ ತಳಿರು ತೋರಣ ಸೇರಿಸಿ ಹಸಿರು ಥೀಮ್‌ ಬಳಸಿ ವೇದಿಕೆ ಸಿದ್ದಪಡಿಸಲಾಗುತ್ತಿದೆ.

ಬೆಳಗ್ಗೆ 10 ಗಂಟೆಯ ಶುಭ ಮುಹೂರ್ತದಲ್ಲಿ ಧ್ರುವ ಸರ್ಜಾ, ಬಾಲ್ಯದ ಗೆಳತಿ ಪ್ರೇರಣಾ ಶಂಕರ್ ಗೆ ಉಂಗುರ ತೊಡಿಸಿ ಮದುವೆ ನಿಶ್ಚಯ ಮಾಡಿಕೊಳ್ಳಲಿದ್ದಾರೆ.

ಧ್ರುವ ಸರ್ಜಾ ನಿಶ್ಚಿತಾರ್ಥಕ್ಕೆ 50 ಗೋವುಗಳನ್ನ ತರಿಸಿ ಗೋ ಪೂಜೆ ಮಾಡಿ ವಿಭಿನ್ನ ರೀತಿಯಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುವುದಕ್ಕೆ ಧ್ರುವ ಅವರು ವಿಶೇಷವಾಗಿ ಯೋಚಿಸಿದ್ದಾರೆ.

ಇನ್ನು ಅಪ್ಪಟ ಹಿಂದೂ ಸಂಪ್ರದಾಯದಂತೆ ನಿಶ್ಚಿತಾರ್ಥ ಕಾರ್ಯ ನಡೆಯಲಿದ್ದು 25 ಪುರೋಹಿತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

Advertisements

Leave a Reply

%d bloggers like this: