ದೇವೇಗೌಡರು ಅಂದು ಯೋಜನೆ ಘೋಷಿಸದಿದ್ದರೆ ಇಂದೆಲ್ಲಿತ್ತು ಮೋದಿಗೆ ಉದ್ಘಾಟನೆ ಭಾಗ್ಯ

ದೇಶದ ಅತಿ ಉದ್ದದ ಸೇತುವೆಯೊಂದು ಭಾರತದಲ್ಲಿ ನಿರ್ಮಾಣವಾಗಿದ್ದು, ಬರೋಬ್ಬರಿ 4857  ಕೋಟಿ ವೆಚ್ಚಮಾಡಲಾಗಿದೆ. ಇದರಿಂದ ಅಸ್ಸಾಂ ಮತ್ತು ಅರುಣಾಚಲಪ್ರದೇಶ ನಡುವೆ ಸುಲಭ ಸಂಪರ್ಕ ಸಾಧ್ಯವಾಗಲಿದೆ.

 ಅರುಣಾಚಲಪ್ರದೇಶ ಮತ್ತು ಅಸ್ಸಾಂ ನಡುವೆ ಬ್ರಹ್ಮಪುತ್ರ ನದಿ ಮೇಲೆ ನಿರ್ಮಿಸಲಾಗಿರುವ ಈ ರೈಲು ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಇದೇ ಡಿ.25ರಂದು ಉದ್ಘಾಟಿಸಲಿದ್ದಾರೆ.

ಡಿ.25ಮಾಜಿ ಪ್ರಧಾನಿ, ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನವಾಗಿದ್ದು, ಈ ದಿನವನ್ನು ಸರ್ಕಾರ ‘ಗುಡ್ ಗರ್ವನನ್ಸ್ ಡೇ’ ಆಗಿ ಆಚರಿಸುತ್ತಿದೆ. ಇದೇ ಹಿನ್ನೆಲೆಯಲ್ಲಿ ದೇಶದಅತೀ ಉದ್ದದ ರೈಲು ಸೇತುವೆಯನ್ನು ಮೋದಿ ಈ ದಿನದಂದೇ ಉದ್ಘಾಟಿಸಲಿದ್ದಾರೆ.

ಒಟ್ಟು4.9 ಕಿ.ಮೀ ಉದ್ದದ ಈ ರೈಲು ಸೇತುವೆ ಅಸ್ಸಾಂ ಮತ್ತುಅರುಣಾಚಲ ಪ್ರದೇಶದ ನಡುವಿನ ಬೋಗಿ ಬೀಲ್ ಬಳಿ ನಿರ್ಮಿಸಲಾಗಿದ್ದು, ಇದೇ ಕಾರಣಕ್ಕೆ ಈ ಸೇತುವೆಗೆ ಬೋಗಿಬೀಲ್ ಸೇತುವೆ ಎಂದೇ ಹೆಸರಿಸಲಾಗಿದೆ.

ಸದ್ಯ ಅರುಣಾಚಲವನ್ನು ತಲುಪಬೇಕೇಂದ್ರೆ ಅಸ್ಸಾಂನ ಗುವಾಹಟಿಯಿಂದ 186 ಕಿ.ಮೀ. ದೂರದ‌ ತೇಜ್‌ಪುರ ಮೂಲಕ ಹಾದು ಹೋಗಬೇಕಾಗಿದೆ. ತೇಜ್‌ಪುರದಿಂದ ಅರುಣಾಚಲ ಗಡಿ ತಲುಪಲು 2 ದಿನ ತೆಗೆದುಕೊಳ್ಳುತ್ತಿದೆ. ಆದ್ರೆ ಹೊಸ ಸೇತುವೆಯಿಂದ ಈ ಎಲ್ಲಾ ಕಿರಿ ಕಿರಿ ತಪ್ಪಲಿದೆ.

 ಹೊಸ ಸೇತುವೆಯಿಂದ ಭಾರತೀಯ ಸೇನೆಗೆ ಅತಿ ಹೆಚ್ಚು ಉಪಯೋಗವಾಗಲಿದೆ. ತುರ್ತು ಸಂದರ್ಭಗಳಲ್ಲಿ ಭೂ ಮಾರ್ಗದ ಮೂಲಕ ಅರುಣಾಚಲಪ್ರದೇಶ ತಲುಪಬಹುದಾಗಿದ್ದು, ಸೇನಾ ಪಡೆ ರವಾನಿಸಲು ಅನುಕೂಲಕರವಾಗಲಿದೆ.

 ಬೋಗಿ ಬೀಲ್ ರೈಲು ಸೇತುವೆ ನಿರ್ಮಿಸಲು ಮಾಜಿ ಪ್ರಧಾನಿ ದೇವೇಗೌಡ ಅವರ ಆಡಳಿತದ ಸಮಯದಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು. ಅದರಂತೆ ಈ ರೈಲು ಸೇತುವೆಗೆ ಹಣವನ್ನೂ ಮೀಸಲಿಡಲಾಗಿತ್ತು. 

ಇದೀಗ ಪ್ರಧಾನಿ ನರೇಂದ್ರ ಮೋದಿ ಈ ಸೇತುವೆಯನ್ನು ಉದ್ಘಾಟಿಸಲಿದ್ದು, ಮಾಜಿ ಪ್ರಧಾನಿ ದೇವೇಗೌಡರು ಅನುಮೋದಿಸಿದ್ದ ಎರಡನೇ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದಂತಾಗುತ್ತದೆ. ಈ ಹಿಂದೆ ದೇವೇಗೌಡರ ಕಾಲದಲ್ಲೇ ಘೋಷಿಸಲಾಗಿದ್ದ ಅಸ್ಸಾಂ ಮತ್ತು ಅರುಣಾಚಲಪ್ರದೇಶವನ್ನು ಸಂಪರ್ಕಿಸುವ ಸುಮಾರು 9 ಕಿ.ಮೀ.ಉದ್ದದ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು.

ದೇವೇಗೌಡರ ಕಾಲದಲ್ಲಿ ಪ್ರಾರಂಭವಾಗಿದ್ದ ಯೋಜನೆಯನ್ನು ಮುಗಿಸಲು ಮೋದಿ ಬರಬೇಕಾಯ್ತು ಅನ್ನುವ ಸಮರ ಇದೀಗ ಸಾಮಾಜಿಕ ತಾಣದಲ್ಲಿ ನಡೆಯುತ್ತಿದೆ.

ಆದರೆ ಇದು ಸಂಪೂರ್ಣ ಸುಳ್ಳಲ್ಲ. 1997ರಲ್ಲಿ ದೇವೇಗೌಡರು ಯೋಜನೆ ಪ್ರಕಟಿಸಿದ ಕಾರಣದಿಂದ ಇಂದು ಈ ಸೇತುವೆ ನಿರ್ಮಾಣಗೊಂಡಿದೆ. 1997ರ ಜನವರಿಯಲ್ಲಿ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿತು, ಆದರೆ ಕೆಲಸ ಪ್ರಾರಂಭವಾಗಬೇಕಾದರೆ ವಾಜಪೇಯಿ ಬರಬೇಕಾಯ್ತು.

ಹಾಗಂತ ಬಳಿಕ ಕಾಮಗಾರಿ ವೇಗ ಪಡೆಯಲಿಲ್ಲ, ಯೋಜನಾ ವೆಚ್ಚ ಏರಿಕೆಯ ಕಾರಣ ಸೇರಿದಂತೆ ಹಲವಾರು ಕಾರಣಗಳಿಂದ ರೈಲ್ವೆ ಕಾಮಗಾರಿ ಕುಂಟುತ್ತಲೇ ಸಾಗಿತು.  2007ರ ಹೊತ್ತಿಗೆ ಮನಮೋಹನ್ ಸಿಂಗ್ ಇದನ್ನು ನ್ಯಾಷನಲ್ ಪ್ರಾಜೆಕ್ಟ್ ಎಂದು ಪರಿಗಣಿಸಿ ಕಾಮಗಾರಿಗೆ ವೇಗ ನೀಡಲು ನಿರ್ಧರಿಸಿದರು. ಹಣಕಾಸು ಸಚಿವಾಲಯ ಮತ್ತು ರೈಲ್ವೆ ಸಚಿವಾಲಯ ಹಣಕಾಸು ಹೊಂದಿಸುವಂತೆ ಮಾಡಲಾಯ್ತು. 2009ಕ್ಕೆ ಕಾಮಗಾರಿಯನ್ನು ಮುಗಿಸಿ ರೈಲು ಮತ್ತು ವಾಹನಗಳು ಓಡಾಟಕ್ಕೆ ಅನುವು ಮಾಡಲು ಆಗ ಯೋಜಿಸಲಾಗಿತ್ತು. ಆದರೆ ಅದು ಬರೀ ಪೇಪರ್ ನಲ್ಲೇ ಉಳಿದು ಹೋಯಿತು.

ಆದರೆ ಮೋದಿ ಪ್ರಧಾನಿಯಾದ ಬಳಿಕ ಈ ಕಾಮಗಾರಿಗೆ ಸಿಕ್ಕಾಪಟ್ಟೆ ವೇಗ ಸಿಕ್ತು. ಮೋದಿ ಪ್ರಧಾನಿಯಾಗುತ್ತಿದ್ದಂತೆಬಾಕಿ ಉಳಿದಿರುವ ಪ್ರಮುಖ ಕಾಮಗಾರಿಗಳನ್ನು ಹಾಗೂ ಡೆಡ್ ಲೈನ್ ಒಳಗಡೆ ಮುಗಿಸದ ಕಾಮಗಾರಿಗಳಿಗೆ ಹೊಸ ಡೆಡ್ ಲೈನ್ ವಿಧಿಸಿದ್ದರು. ಅದರಲ್ಲಿ  ಈ ಡಬ್ಬಲ್ ಡೆಕ್ಕರ್  ಸೇತುವೆಯೂ ಸೇರಿತ್ತು.

ಯಾರು ಮಾಡಿದರೋ ಬಿಟ್ಟರೋ 21  ವರ್ಷಗಳ ಬಳಿಕವಾದರೂ ಕಾಮಗಾರಿ ಮುಗಿಸಿದರಲ್ಲ, ಪ್ರಾರಂಭಿಸಿದವರಿಗೂ, ಮುಗಿಸಿದವರಿಗೂ ದೊಡ್ಡ ನಮಸ್ಕಾರ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: