Advertisements

ಮದುವೆಗೆ ಬರೋ ಅತಿಥಿಗಳಿಗೆ ಕಂಡೀಷನ್ ಹಾಕಿದ ದಿಗ್ಗಿ – ಐಂದ್ರಿತಾ

ದಿಗ್ಗಿ – ಐಂದ್ರಿತಾ ಮದುವೆಗೆ ದಿನಗಣನೆ ಆರಂಭವಾಗಿದ್ದು, ಸಿದ್ದತೆಗಳು ಭರದಿಂದ ಸಾಗಿದೆ. ಈಗಾಗಲೇ ಐಂದ್ರಿತಾ ಘೋಷಿಸಿದಂತೆ ಮದುವೆ ಸರಳವಾಗಿ ನಡೆಯಲಿದೆ. ಜೊತೆಗೆ ಮದುವೆಗೆ ಬರುವ ಅತಿಥಿಗಳು ಭಾರತೀಯ ಶೈಲಿಯ್ಲಿ ವಸ್ತ್ರ ತೊಟ್ಟು ಬರಬೇಕೆಂದು ಸೂಚಿಸಿದ್ದಾರೆ. ಅದರೆ ಪ್ಯಾಂಟ್, ಕೋಟ್ ಹಾಕಿಕೊಂಡು ಬರಬಾರದು ಅಂದಾಯ್ತು.

ಭಾರತೀಯ ಸಾಂಪ್ರದಾಯಿಕ ಉಡುಗೊರೆಯಲ್ಲೇ ಬನ್ನಿ ಎಂದು ಮದುವೆ ಪತ್ರದಲ್ಲಿ ಬೇರೆ ಮುದ್ರಿಸಿದ್ದಾರೆ.

ಮದು ಮಕ್ಕಳ ಆಸೆಯಂತೆ. ಡಿ.11-12ರಂದುಸರಳವಾಗಿ ನಡೆಯಲಿರುವ ವಿವಾಹಕ್ಕೆ ಕೇವಲ ಕುಟುಂಬದ ಆಪ್ತರಿಗೆ ಮಾತ್ರ ಆಮಂತ್ರಣ ನೀಡಲಾಗಿದೆಯಂತೆ.ಡಿ.16ರಂದು ಚಂದನವನದ ಸೆಲೆಬ್ರಿಟಿಗಳಿಗಾಗಿ ಔತಣಕೂಟವನ್ನೂಆಯೋಜಿಸಲಾಗಿದೆಯಂತೆ.

ಇನ್ನು ದಿಗಂತ್ ಶ್ರೀಲಂಕಾದಲ್ಲಿ ಬ್ಯಾಚೂಲರ್ ಪಾರ್ಟಿ ಮುಗಿಸಿದ್ದು, ಐಂದ್ರಿತಾ ‘ಗರುಡ’ ಚಿತ್ರದ ಚಿತ್ರೀಕರಣದಿಂದ ರಜೆ ತೆಗೆದುಕೊಂಡು ಬಂಧುಗಳಿಗೆ ಮದುವೆ ಕಾರ್ಡ್ ವಿತರಣೆಯಲ್ಲಿ ಬ್ಯುಸಿಯಾಗಿದ್ದರಂತೆ. ಕರ್ನಾಟಕ ಮತ್ತು ಬಂಗಾಳಿ ಸಂಪ್ರದಾಯದಂತೆ ಮದುವೆ ನಡೆಯಲಿದೆ.

ಈ ಕ್ಯೂಟ್​ ಕಪಲ್​ ತಮ್ಮ ವಿವಾಹಕ್ಕೆ ಎರಡು ರೀತಿಯ ಲಗ್ನಪತ್ರಿಕೆಯನ್ನು ಮಾಡಿಸಿದ್ದು,  ಕುಟುಂಬದವರಿಗೆಹಾಗೂ ಗಣ್ಯರಿಗೆ ಪ್ರತ್ಯೇಕ ಆಹ್ವಾನ ಪತ್ರಿಕೆ ನೀಡಲಾಗುತ್ತಿದೆಯಂತೆ. ಮಂಚಾಲೆ ಕುಟುಂಬ ಹಾಗೂಹೊಸಬಾಳೆ ಕುಟುಂಬದವರು ಭಾಗಿಯಾಗಲಿದ್ದಾರೆ.

ಡಿ. 12ರಂದು ವಿವಾಹವಾದ ನಂತರ, 13ರಂದು ವಧು ಪ್ರವೇಶ್ ಹಾಗೂ 14ರಂದು ಸತ್ಕಾರ ಕಾರ್ಯಕ್ರಮವನ್ನು ರಾಜರಾಜೇಶ್ವರಿನಗರದ ಸುಭಾಷ್ ಐಡಿಯಲ್ ಹೋಮ್​ನಲ್ಲಿ ಆಯೋಜಿಸಲಾಗಿದೆ.

ಬಾಂಗ್​ ವಿಥ್​ ಬೊಮ್ಮನ್​ ಎಂದು ಬರೆಸಲಾಗಿರುವ ವಿಶೇಷ ಲಗ್ನಪತ್ರಿಕೆಯನ್ನು ಒಂದು ಪುಟ್ಟ ಟ್ರೇಯಂತಿರುವ ಬಾಕ್ಸ್​ನಲ್ಲಿ ಇಡಲಾಗಿದ್ದು, ಅದರಲ್ಲಿ ಹೂವಿನೊಂದಿಗೆ ಕೆಲವು ಪರಿಸರ ಸ್ನೇಹಿ ವಸ್ತುಗಳನ್ನೂಇಡಲಾಗಿದೆ.

Advertisements

Leave a Reply

%d bloggers like this: