4 ವರ್ಷ ಆಕೆ ಎಲ್ಲಿ ಮಲಗಿದ್ರು : ಇದೇನಾ ಒಬ್ಬ ಸಿಎಂ ಆಡುವ ಮಾತು

ಕುಮಾರಸ್ವಾಮಿ ಸಿಎಂ ಆಗಿ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ರಾಜ್ಯದ ಜನತೆಯಲ್ಲಿ ನಿರೀಕ್ಷೆಗಳು ಸಾಕಷ್ಟಿತ್ತು. ಮೈತ್ರಿ ಸರ್ಕಾರವಾದರೂ ಕುಮಾರಸ್ವಾಮಿ ಒಳ್ಳೆಯ ಮನಸ್ಸಿನ ಮನುಷ್ಯನ, ಉಳಿದವರಂತೆ ಸಿಡುಕುವ ವ್ಯಕ್ತಿಯಲ್ಲ, ಬಡವರ ಬಗ್ಗೆ ಕಾಳಜಿ ಇದೆ, ಮಾತೃ ವಾತ್ಸಲ್ಯದ ಮನಸ್ಸಿದೆ ಹೀಗಾಗಿ ಸಂಕಷ್ಟದ ಮಂದಿಯ ಕೆಲಸವಾಗುತ್ತದೆ ಅನ್ನುವ ನಿರೀಕ್ಷೆ ಇತ್ತು.

ಹಾಗಂತ ನಿರೀಕ್ಷೆಗಳು ಈಡೇರಿಲ್ಲವೇ, ಅದು ಅಲ್ಪ ಅನ್ನುವುದೇ ಆರೋಪ. ಬೆಂಗಳೂರಿನಲ್ಲಿ ಪುಡಿ ರೌಡಿಗಳ ಅಟ್ಟಹಾಸಕ್ಕೆ ಬ್ರೇಕ್ ಬಿದ್ದಿದೆ ಅನ್ನುವುದು ಬಿಟ್ಟರೆ ಕುಮಾರಸ್ವಾಮಿ ಕಡೆಯಿಂದ ಹೇಳಿಕೊಳ್ಳುವ ಕೆಲಸ ಯಾವುದಾಗಿದೆ.

ಈ ನಡುವೆ ಕಬ್ಬು ಬೆಳೆಗಾರರಿಗೆ ಬಾಕಿ ನೀಡುವ ವಿಚಾರದಲ್ಲಿ ರೈತ ಮಹಿಳೆ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಕುಮಾರಸ್ವಾಮಿ ಎಡವಟ್ಟು ಮಾಡಿಕೊಂಡಿದ್ದಾರೆ.

ಬೆಂಗಳೂರಿನ ಜಿಕೆವಿಕೆಯಲ್ಲಿ ನಡೆದ ಕೃಷಿ ಮೇಳದ ಸಮಾರೋಪ ಸಮಾರಂಭದಲ್ಲಿ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಮಹಿಳೆಯೊಬ್ಬರ ವಿರುದ್ಧ ಮಾತನಾಡಿದ ಸಿಎಂ, ”ನಾಲ್ಕು ವರ್ಷಗಳ ಕಾಲ ಅವರು ಎಲ್ಲಿ ಮಲಗಿದ್ರು” ಎಂದು ಹೇಳುವ ಮೂಲಕ ಮಹಿಳೆಗೆ ಅಪಮಾನ ಮಾಡುವಂತ ಹೇಳಿಕೆ ನೀಡಿದ್ದಾರೆ.

 ಇನ್ನು, ದೃಶ್ಯ ಮಾಧ್ಯಮಗಳ ಮೇಲೆ ಸಿಎಂ ಕುಮಾರಸ್ವಾಮಿ ಮತ್ತೆಹರಿಹಾಯ್ದಿದ್ದು, ”ಕಬ್ಬು ಬೆಳೆಗಾರರ ಬಾಕಿ ನೀಡದಿರಲು ಸಕ್ಕರೆ ಕಾರ್ಖಾನೆಕಾರಣ. ಆದರೆ ಕೆಲ ಕಿಡಿಗೇಡಿಗಳು ಪ್ರತಿಭಟನೆ ನಡೆಸುವ ನೆಪದಲ್ಲಿ ರೈತರಿಗೆ ಮಸಿ ಬಳಿಯುವ ಯತ್ನನಡೆಸಿದ್ದಾರೆ. ಹಸಿರು ಶಾಲು ಹಾಕಿದ ಮಹಿಳೆಯೊಬ್ಬರು ಬೆಳಗಾವಿ ಸುವರ್ಣ ಸೌಧದ ಗೇಟ್ಮುರಿಯುವುದಾಗಿ ಹೇಳುತ್ತಾಳೆ. ಇದನ್ನೇ ಮಾಧ್ಯಮದವರು ಏನೋ ಆಗಿಹೋಗಿದೆ ಎಂದು ಭಾವಿಸಿ ಸರಕಾರದವಿರುದ್ಧ ಕೆಟ್ಟದಾಗಿ ಬಿಂಬಿಸಲಾಗಿದೆ. 

ಒಂದು ಮಾಧ್ಯಮವಂತೂ ಕಬ್ಬು ತುಂಬಿದ ಲಾರಿ ತಡೆದು ಅದರ ಕೆಳಗೆ ರೈತರನ್ನುಮಲಗಿಸಿ ಚಿತ್ರ ತೆಗೆದು ಪ್ರಸಾರ ಮಾಡಲು ಮುಂದಾಗಿರುವುದು ಸರಿಯಲ್ಲ ಎಂದಿದ್ದಾರೆ.

ಮಾಧ್ಯಮಗಳ ಮೇಲೆ ಕುಮಾರಸ್ವಾಮಿ ಕಿಡಿ ಕಾರುವುದರಲ್ಲಿ ತಪ್ಪಿಲ್ಲ. ಹಿಂದೊಮ್ಮೆ ಇದೇ ಮಾಧ್ಯಮಗಳು ರೈತನ ಕೈಗೆ ವಿಷದ ಬಾಟಲಿ ಕೊಟ್ಟು ಚಿತ್ರೀಕರಣ ಮಾಡಿದ್ದನ್ನು ಯಾರೂ ಮರೆತಿಲ್ಲ. ಹೀಗಾಗಿ ಮಾಧ್ಯಮಗಳು ಪ್ರಸಾರ ಮಾಡಿರುವುದನ್ನೇ ನಂಬುವುದು ಕಷ್ಟ. ಹೀಗಾಗಿ ಪತ್ರಿಕೆಗಳನ್ನು ನೈಜ ಸುದ್ದಿಗೆ ಕಾಯಬೇಕಾಗಿದೆ.

ಆದರೆ ಮಹಿಳೆಯ ಬಗ್ಗೆ ಈ ರೀತಿ ಮಾತನಾಡುವುದು ಕುಮಾರಸ್ವಾಮಿ ಅವರಿಗೆ ಶೋಭೆಯಲ್ಲ. ಮುಖ್ಯಮಂತ್ರಿಯಾದ ಸಂದರ್ಭದಲ್ಲಿ “ ನನ್ನ ಆಡಳಿತಾವಧಿಯಲ್ಲಿ ಯಾರೊಬ್ಬರೂ ಬೀದಿಗೆ ಬಾರದಂತೆ ನೋಡಿಕೊಳ್ಳುತ್ತೇನೆ, ಪ್ರತಿಭಟನೆ ಮಾಡಲೇಬಾರದು ಅಂತಹ ಆಡಳಿತ ಕೊಡ್ತೀನಿ” ಅಂದಿದ್ದರು.

ಆದರೆ ಈಗ ಆಗುತ್ತಿರುವುದೇನು..?

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: