Advertisements

ಭಾರತ್ ಮಾತಾ ಕೀ ಜೈ ಅಂದರೆ ಕಾಂಗ್ರೆಸ್ ನಾಯಕನಿಗೆ ಅಲರ್ಜಿ -ಸೋನಿಯಾ ಕೀ ಜೈ ಅಂದರೆ ಸೈ ಅಂತಾನೇ

ಭಾರತ್ ಮಾತಾ ಕೀ ಅಲ್ಲ, ಅದು ಸೋನಿಯಾ ಜೀ ಕಿ ಜೈ, ರಾಹುಲ್ ಗಾಂಧಿ ಜೀ ಕೀ ಜೈ 

ಭಾರತ್ ಮಾತಾ ಕೀ ಜೈ ಅಂದರೆ ಪ್ರತಿಯೊಬ್ಬ ಭಾರತೀಯನ ಮೈ ರೋಮಾಂಚನಗೊಳ್ಳುತ್ತದೆ. ನೀಜವಾದ ಭಾರತೀಯ ಈ ಘೋಷಣೆ ಕಿವಿಗೆ ಬಿದ್ದರೆ ಅರಿವಿಲ್ಲದೆ ಕೈ ಮೇಲೆ ಎತ್ತಿ ತಾನೂ ಭಾರತ್ ಮಾತಾ ಕೀ ಜೈ ಅನ್ನುತ್ತಾನೆ.

ಆದರೆ ಕಾಂಗ್ರೆಸ್ ಪಕ್ಷದ ನಾಯಕರೊಬ್ಬರಿಗೆ ಭಾರತ್ ಮಾತಾ ಕೀ ಜೈ ಅಂದರೆ ಅಲರ್ಜಿ.

ರಾಜಸ್ಥಾನದ ಬಿಕಾನೆರ್‌ನ ಕಾಂಗ್ರೆಸ್ ನಾಯಕ ಬುಲಾಕಿ ದಾಸ್ ಕಲ್ಲಾ ಪಕ್ಷದ ಸಭೆಯಲ್ಲಿ ಕಾರ್ಯಕರ್ತನೋರ್ವ ಭಾರತ್ ಮಾತಾ ಕಿ ಜೈ ಎಂದು ಹೇಳಲು ಮುಂದಾದಾಗ, ಅದನ್ನು ತಡೆದಿದ್ದಾರೆ.

ನಂತರ ಭಾರತ್ ಮಾತಾ ಕೀ ಅಲ್ಲ, ಅದು ಸೋನಿಯಾ ಜೀ ಕಿ ಜೈ, ರಾಹುಲ್ ಗಾಂಧಿ ಜೀ ಕೀ ಜೈ ಎಂದಾಗಬೇಕು ಎಂದು ತಿದ್ದಿದ್ದಾರೆ. ಮಾತ್ರವಲ್ಲದೆ ಹಾಗೆಯೇ ಹೇಳಬೇಕು ಎಂದು ಕಟ್ಟಪ್ಪಣೆ ವಿಧಿಸಿ ಘೋಷಣೆ ಬೇರೆ ಹಾಕಿಸಿದ್ದಾರೆ.

ಇವರಿಗೆ ಭಾರತ ಆಮೇಲೆ ಸೋನಿಯಾ ಮೊದಲು ಅನ್ನುವುದು ಅಲ್ಲಿಗೆ ಸ್ಪಷ್ಟವಾಯ್ತು.
ರಾಹುಲ್ ಗಾಂಧಿಯವರೇ ಎಲ್ಲಿದ್ದೀರಾ, ಭಾರತ ಮಾತೆಗೆ ಜೈಕಾರ ಹಾಕುವುದನ್ನು ತಡೆದು ತಾಯಿ ಸೋನಿಯಾ ಅವರಿಗೆ ಜೈಕಾರ ಹಾಕಿದ ಕಾಂಗ್ರೆಸ್ ನಾಯಕನನ್ನು ಯಾವ ರಾಜ್ಯಕ್ಕೆ ಮುಖ್ಯಮಂತ್ರಿ ಮಾಡೋಣ.?

Advertisements

Leave a Reply

%d bloggers like this: