Advertisements

ಪ್ರಾಮಾಣಿಕ ಅಧಿಕಾರಿಗಳು ಗಡಿ ಕಾಯಲು ಹೋಗಬೇಕಂತೆ

ಅಂಬಿಡೆಂಟ್ ಪ್ರಕರಣದಲ್ಲಿ ಜೈಲು ವಾಸ ಮುಗಿಸಿ ಹೊರ ಬಂದಿರುವ ಜನಾರ್ಧನ ರೆಡ್ಡಿ ತನ್ನ ವಿರುದ್ಧ ನಡೆದ ರಾಜಕೀಯ ಷಡ್ಯಂತ್ರ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಸಿಸಿಬಿ ಅಧಿಕಾರಿಗಳನ್ನು ರಾಜ್ಯ ಸರ್ಕಾರ ದುರುಪಯೋಗ ಪಡಿಸಿಕೊಂಡಿದೆ ಎಂದು ದೂರಿದ ಜನಾರ್ಧನ ರೆಡ್ಡಿ ಸಿಸಿಬಿ ಹಿರಿಯ ಅಧಿಕಾರಿಗಳಾದ ಅಲೋಕ್ ಕುಮಾರ್ ಮತ್ತು ಡಿಸಿಪಿ ಗಿರೀಶ್ ವಿರುದ್ಧ ತಿರುಗಿ ಬಿದ್ದಿದ್ದಾರೆ.

ತನ್ನದೇ ಶೈಲಿಯಲ್ಲಿ ಅಧಿಕಾರಿಗಳ ಎಡವಟ್ಟುಗಳಿಗೆ ಚಾಟಿ ಬೀಸಿದ ಜನಾರ್ಧನ ರೆಡ್ಡಿ, “ ಅಲೋಕ್ ಕುಮಾರ್ ಪ್ರಾಮಾಣಿಕತೆಯಲ್ಲಿ ನಂಬರ್ 1 ಅಧಿಕಾರಿ, ಮತ್ತೊಬ್ಬ ಅಧಿಕಾರಿ ಗಿರೀಶ್ ಕೂಡಾ ಪ್ರಾಮಾಣಿಕರು.ಇಂತಹ ಪ್ರಾಮಾಣಿಕ ಅಧಿಕಾರಿಗಳು ಸಿಸಿಬಿಯಲ್ಲಿ ಇರಬಾರದು. ಇಂತಹ ಅಧಿಕಾರಿಗಳು ಗಡಿ ಕಾಯಲು ಬೇಕಾಗಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಪ್ರಮಾದ ನಡೆಯುತ್ತಿದೆ. ಇಂತಹ ಸ್ಥಳದಲ್ಲಿ ಪ್ರಾಮಾಣಿಕ ಅಧಿಕಾರಿಗಳ ಅಗತ್ಯವಿದೆ. ಇಂತಹ ಅಧಿಕಾರಿಗಳನ್ನು ಅಂತಹ ಸ್ಥಳದಲ್ಲಿ ನಿಯೋಜಿಸಿದರೆ ರಾಷ್ಟ್ರ ಕಂಡ ಪ್ರಾಮಾಣಿಕ ಮುಖ್ಯಮಂತಿ ಕುಮಾರಸ್ವಾಮಿಯನ್ನು ರಾಷ್ಟ್ರವೇ ಕೊಂಡಾಡುತ್ತದೆ ” ಎಂದರು.

ಇದೇ ವೇಳೆ ಕುಮಾರಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡ ರೆಡ್ಡಿ, 2006ರಲ್ಲಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ 150 ಕೋಟಿ ರೂ. ಲಂಚದ ಆರೋಪ ಮಾಡಿದ್ದೆ, ಆ ನಂತರ ನನ್ನ ಮೇಲೆ ಸುಳ್ಳು ಕೇಸ್ ಹಾಕಿದ್ದರು. ರೆಡ್ಡಿಯನ್ನು ಬಂಧನ ಮಾಡಬೇಕು ಎಂಬುದು ಕುಮಾರಸ್ವಾಮಿ ಅವರ ಆಸೆಯಾಗಿತ್ತು. ಈಗ 12 ವರ್ಷಗಳ ನಂತರ ಅವರು ನನ್ನನ್ನು ಬಂಧಿಸುವ ಮೂಲಕ ತಮ್ಮ ಆಸೆಯನ್ನು ಪೂರೈಸಿಕೊಂಡಿದ್ದಾರೆ ಎಂದು ರೆಡ್ಡಿ ಆರೋಪಿಸಿದರು.

ನಾನು ಪ್ರಾಮಾಣಿಕವಾಗಿದ್ದೇನೆ, ಸತ್ಯ ನನ್ನ ಪರವಾಗಿದೆ. ಯಾವುದೇ ತಪ್ಪು ಮಾಡದಿದ್ದರೂ ನನ್ನನ್ನು ಜೈಲಿಗೆ ಕಳುಹಿಸಲಾಗಿದೆ. ತನಿಖೆಯ ದಿಕ್ಕು ತಪ್ಪಿಸಲು ಷಡ್ಯಂತ್ರ ನಡೆಯುತ್ತಿದೆ ಯಾರು ಏನೇ ಎಂದರೂ ನೋಡೋಕೆ ಭಗವಂತ ಇದ್ದಾನೆ ಎಂದು ತಿಳಿಸಿದರು.
ಅಂಬಿಡೆಂಟ್ ಸಂಸ್ಥೆಯಲ್ಲಿ ಅಲಿಖಾನ್ ಲಕ್ಷಾಂತರ ಕೋಟಿ ಹೂಡಿಕೆ ಮಾಡಿದ್ದಾರೆ. ಇದು ಹೇಗೆ ಡೀಲ್ ಮಾಡಲು ಸಾಧ್ಯ.

ಅಂಬಿಡೆಂಟ್ ವಿರುದ್ಧ ದೂರು ಕೊಟ್ಟ ವೇಳೆ ಆಗಿನ ಸಿಎಂ, ಪೊಲೀಸ್ ಆಧಿಕಾರಿಗಳು ಏಕೆ ಕ್ರಮಕೈಗೊಳ್ಳಲಿಲ್ಲ. ಆ ವೇಳೆ ಅಂಬಿಡೆಂಟ್ ಕಂಪನಿ ಜೊತೆ ಅಲಿಖಾನ್ ಜಗಳ ಮಾಡಿಕೊಂಡಿದ್ದರು. ಬಳಿಕವಷ್ಟೇ ಫರೀದ್ ನನ್ನ ಭೇಟಿ ಮಾಡಿದ್ದು ಅಷ್ಟೇ. ಆ ವೇಳೆ ಗೃಹ ಸಚಿವರು ರಾಮಲಿಂಗ ರೆಡ್ಡಿ ಆಗಿದ್ದರು. ಅವರಿಗೆ ಮಾಹಿತಿ ನೀಡಿದ ಬಳಿಕವೇ ಘಟನೆ ನಡೆದಿದೆ. ಅದ್ದರಿಂದ ಅವರನ್ನು ಬಂಧನ ಮಾಡಿಲ್ಲ ಯಾಕೆ ಎಂದು ಪ್ರಶ್ನೆ ಮಾಡಿದರು.

Advertisements

Leave a Reply

%d bloggers like this: