Advertisements

ನವೆಂಬರ್ 14 ಇನ್ಮುಂದೆ ಮಕ್ಕಳ ದಿನಾಚರಣೆ ಮಾತ್ರವಲ್ಲ ರಸಗುಲ್ಲ ದಿನವೂ ಹೌದು…

ನವೆಂಬರ್ 14 ಅಂದ್ರೆ ಏನು ನೆನಪಿಗೆ ಬರುತ್ತದೆ ಮಕ್ಕಳ ದಿನಾಚರಣೆ. ಭಾರತದ ಮೊದಲ ಪ್ರಧಾನಿ ಜವಹರಲಾಲ್ ನೆಹರು ಹುಟ್ಟಿದ ಹಬ್ಬದ ದಿನವನ್ನು ಮಕ್ಕಳ ದಿನಾಚರಣೆ ಎಂದು ಆಚರಿಸಲಾಗುತ್ತದೆ.

ಅವರಿಗೆ ಮಕ್ಕಳ ಮೇಲೆ ಪ್ರೀತಿ ಇತ್ತು ನಿಜ. ಮೊದಲ ಪ್ರಧಾನಿ ಅನ್ನುವ ಹೆಗ್ಗಳಿಕೆ ಅವರಿಗಿತ್ತು. ಹಾಗಂತ ಅವರ ಮೇಲೆ ಆಕ್ರೋಶಗಳು ಇಲ್ಲದಿರಲು ಸಾಧ್ಯವೇ. ಆಕ್ರೋಶ ಅರಿಯುವ ಆಸಕ್ತಿ ಇರುವ ಮಂದಿ ಈ ಕೆಳಗಿನ ಪುಸ್ತಕಗಳನ್ನು ಓದಿ ತಿಳಿದುಕೊಳ್ಳಬಹುದು.

2018-11-07_21-30-10

ಆದರೆ ಇದೀಗ ಪಶ್ಚಿಮ ಬಂಗಾಳ ಸರ್ಕಾರ ಸೈಲೆಂಟ್ ಆಗಿ ಮಕ್ಕಳ ದಿನಾಚರಣೆಯಂದೇ ಅಂದರೆ ನವೆಂಬರ್ 14ರಂದು ತನ್ನ ರಾಜ್ಯದ ಸಾಂಪ್ರದಾಯಿಕ ತಿನಿಸು ರಸಗುಲ್ಲ ದಿನ’ ಆಚರಿಸಲು ನಿರ್ಧರಿಸಿದೆ.

ಬಂಗಾಳದ ರಸಗುಲ್ಲಗೆ ಜಿಯೋಗ್ರಾಫಿಕಲ್‌ ಇಂಡಿಕೇಷನ್‌(ಜಿಐ) ಟ್ಯಾಗ್ ಪಡೆದು ಒಂದು ವರ್ಷವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರಸಗುಲ್ಲ ದಿನ ಆಚರಿಸಲು ನಿರ್ಧರಿಸಿದೆ.

ರಸಗುಲ್ಲ ದಿನದಂದು ನ್ಯೂಟೌನ್ ಪ್ರದೇಶದಲ್ಲಿರುವ ಇಕೋ ಪಾರ್ಕ್ ನಲ್ಲಿ ಸಿಹಿ ಹಬ್ ನಿರ್ಮಿಸಲಾಗುವುದು. ಇಲ್ಲಿ ಹಲವು ವಿಧದ ರಸಗುಲ್ಲಗಳನ್ನು ಸವಿಯುವ ಮೂಲಕ ಜಿಐ ಟ್ಯಾಗ್ ಪಡೆದ ಮೊದಲ ವರ್ಷವನ್ನು ಆಚರಿಸಲಾಗುತ್ತಿದೆ ಎಂದು ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಒಂದು ವರ್ಷದ ಹಿಂದೆ ರಸಗುಲ್ಲ ನಮ್ಮ ರಾಜ್ಯದಲ್ಲಿಯೇ ಮೊದಲು ಸಿದ್ಧವಾದದ್ದು ಎಂದು  ಒಡಿಶಾ ಮತ್ತು ಪಶ್ಚಿಮ ಬಂಗಾಳ ಕಿತ್ತಾಡಿಕೊಂಡಿತ್ತು. ಕೊನೆಗೆ ವಿಷಯ ಚೆನ್ನೈಯಲ್ಲಿರುವ ಜಿಯೋಗ್ರಾಫಿಕಲ್‌ ಇಂಡಿಕೇಷನ್‌ ಸಂಸ್ಥೆಯ ಮೆಟ್ಟಿಲೇರಿತ್ತು. ಆಗ ರಸಗುಲ್ಲ ಪಶ್ಚಿಮ ಬಂಗಾಳದ ಸಾಂಪ್ರದಾಯಿಕ ತಿನಿಸು ಎಂದು ಜಿಯೋಗ್ರಾಫಿಕಲ್‌ ಇಂಡಿಕೇಷನ್‌ ಸಂಸ್ಥೆ ಸ್ಪಷ್ಟಪಡಿಸಿತ್ತು.

Advertisements

Leave a Reply

%d bloggers like this: