ಬಿಜೆಪಿಯ ಡಿಕೆಶಿಯಾಗ್ತಾರ ಕಮಲ ಪಾಳಯದ ಸಾಮ್ರಾಟ್…..

ರಾಜ್ಯದಲ್ಲಿ ನಡೆದ ಉಪಚುನಾವಣೆಯ ಫಲಿತಾಂಶ ಬಿಜೆಪಿಗೆ ತಕ್ಕ ಪಾಠವೇ ಸರಿ. ಈ ಬಾರಿ ಮೈತ್ರಿ ಪಕ್ಷಗಳು ಗೆದ್ದಿದೆ. ಹಾಗಂತ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿಯನ್ನು ಜನ ಒಪ್ಪಿಕೊಂಡಿದ್ದಾರೆ ಎಂದು ಅರ್ಥವಲ್ಲ.

ಒಂದು ವೇಳೆ ಜನ ಮೈತ್ರಿಯನ್ನು ಒಪ್ಪಿಕೊಂಡಿದ್ದರೆ ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ಗೆಲುವು ಸಾಧಿಸಬೇಕಿತ್ತು. ಮಂಡ್ಯದಲ್ಲಿ ಜೆಡಿಎಸ್ ನ ಎಲ್ ಆರ್ ಶಿವರಾಮೇಗೌಡ ಅವರಿಗೆ ಇನ್ನಷ್ಟು ಲಕ್ಷ ಮತಗಳು ಬರಬೇಕಾಗಿತ್ತು.

ಇನ್ನುಳಿದಂತೆ ಬಳ್ಳಾರಿಯಲ್ಲಿ ಗೆಲುವು ಕಂಡಿದ್ದು, ಕಾಂಗ್ರೆಸ್ ಪಕ್ಷವೂ ಅಲ್ಲ, ವಿಎಸ್ ಉಗ್ರಪ್ಪ ಅವರು ಕೂಡಾ ಅಲ್ಲ. ಅಲ್ಲಿ ಗೆದ್ದಿದ್ದು ಡಿಕೆ ಶಿವಕುಮಾರ್ ಹಾಗೂ ಅವರ ರಣತಂತ್ರ.

ಜಮಖಂಡಿಯಲ್ಲಿ ಅನುಕಂಪದ ಅಲೆ ಇತ್ತು ಹಾಗಾಗಿ ಕಾಂಗ್ರೆಸ್ ಗೆದ್ದಿದೆ. ಇನ್ನು ರಾಮನಗರ ಹೇಳಿ ಕೇಳಿ ಜೆಡಿಎಸ್ ಭದ್ರಕೋಟೆ. ಒಂದು ವೇಳೆ ಅಲ್ಲಿ ಸ್ಟ್ರಾಂಗ್ ಬಿಜೆಪಿ ಅಭ್ಯರ್ಥಿ ಇರುತ್ತಿದ್ದರೆ ಅನಿತಾ ಕುಮಾರಸ್ವಾಮಿ ಅವರ ಗೆಲುವಿನ ಅಂತರ ಕಡಿಮೆಯಾಗುತ್ತಿತ್ತು.

ಈ ನಡುವೆ ಮಂಡ್ಯದಲ್ಲಿ ಬಿಜೆಪಿ ಪಡೆದಿರುವ ಮತಗಳನ್ನು ನೋಡಿ, ಬಿಜೆಪಿ ನಾಯಕರೇ ಕಂಗಾಲಾಗಿದ್ದಾರೆ. ಸಾವಿರ ಮತಗಳನ್ನು ಕಾಣುತ್ತಿದ್ದ ನಾವು ಲಕ್ಷ ಲಕ್ಷ ಮತಗಳನ್ನು ಪಡೆಯುವಂತಾಯ್ತು ಅನ್ನುವುದೇ ಅವರ ಅಚ್ಚರಿ. ಹೀಗಾಗಿ ಅಲ್ಲಿ ಚುನಾವಣೆ ಉಸ್ತುವಾರಿ ವಹಿಸಿಕೊಂಡಿದ್ದ ಆರ್ ಅಶೋಕ್ ಅವರ ರಣತಂತ್ರಗಳಿಂದ ಬಿಜೆಪಿ ಇಷ್ಟೊಂದು ಮತಗಳನ್ನು ಪಡೆಯಲು ಸಾಧ್ಯವಾಯ್ತು.

ಮುಂದೊಂದು ದಿನ ಒಕ್ಕಲಿಗ ನಾಯಕನಾಗಿ ಬೆಳೆಯುವ ಲಕ್ಷಣವನ್ನು ಅವರು ಹೊಂದಿದ್ದಾರೆ. ಕಾಂಗ್ರೆಸ್ ನಲ್ಲಿ ಡಿಕೆಶಿಯಂತೆ ಬಿಜೆಪಿಯಲ್ಲಿ ಅವರು ತಂತ್ರಗಾರಿಕೆಯನ್ನು ಹೂಡುತ್ತಾರೆ ಅನ್ನುವ ಮಾತುಗಳು ಓಡಾಡುತ್ತಿವೆ.

ಖಂಡಿತಾವಾಗಿಯೂ ಇದು ಅಸಾಧ್ಯವಾದ ಮಾತು. ಕರ್ನಾಟಕದ ರಾಜಕೀಯದಲ್ಲಿ ಮತ್ತೊಬ್ಬ ಡಿಕೆ ಶಿವಕುಮಾರ್ ಹುಟ್ಟಿ ಕೊಳ್ಳುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಒಂದು ವೇಳೆ ಬಿಜೆಪಿಯಲ್ಲಿ ಈಗಿನ ನಾಯಕತ್ವ ಬದಲಾಗಿ ಹೊಸ ನಾಯಕರ ಪಡೆಗಳು ಜವಾಬ್ದಾರಿಗಳನ್ನು ವಹಿಸಿಕೊಂಡ ಮೇಲೆಯೇ ಮತ್ತೊಬ್ಬ ಡಿಕೆಶಿಯಂತಹ ನಾಯಕನನ್ನು ಕಾಣಲು ಸಾಧ್ಯ.

ಮಂಡ್ಯದಲ್ಲಿ ಬಿಜೆಪಿ ಅಷ್ಟೊಂದು ಮತಗಳನ್ನು ಪಡೆಯಲು ಸಾಧ್ಯವಾಗಿರುವುದು ಜೆಡಿಎಸ್ ಮೇಲಿನ ಕೋಪ. ಈ ಹಿಂದೆ ಕಾಂಗ್ರೆಸ್ ಮೇಲೆ ಸಿಕ್ಕಾಪಟ್ಟೆ ಆಕ್ರೋಶ ಹೊಂದಿದ್ದ ಮಂಡ್ಯ ಜನ, ಜೆಡಿಎಸ್ ಅನ್ನು ಬೆಂಬಲಿಸಿದ್ದರು. ಕಾಂಗ್ರೆಸ್ ಅನ್ನು ಅಧಿಕಾರದಿಂದ ಕೆಳಗೆ ಇಳಿಸಬೇಕು ಅನ್ನುವುದು ಅವರ ಆಶಯವಾಗಿತ್ತು.

ಆದರೆ ಯಾವಾಗ ಜೆಡಿಎಸ್ ಕಾಂಗ್ರೆಸ್ ಜೊತೆ ಕೈ ಜೋಡಿಸಿತೋ, ಜನರ ಕಣ್ಣು ಕೆಂಪಾಯ್ತು. ಅರೇ ಕಾಂಗ್ರೆಸ್ ವಿರುದ್ಧ ಮತ ಹಾಕಿದ್ದು ವ್ಯರ್ಥವಾಯ್ತಲ್ಲ ಎಂದು ಬೇಸರ ಪಟ್ಟುಕೊಂಡರು.

ಇದರ ಲಾಭವನ್ನು ಪಡೆಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಹೀಗಾಗಿ ಬಿಜೆಪಿ ಅಭ್ಯರ್ಥಿ ಡಾ. ಸಿದ್ದರಾಮಯ್ಯ ಅವರು 2 ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದಿದ್ದಾರೆ. ಹಾಗಂತ ಅಶೋಕ್ ಅವರ ಶ್ರಮವಿಲ್ಲ ಎಂದಲ್ಲ, ಖಂಡಿತಾ ಇದೆ. ಹಾಗಂತ ಅವರೊಬ್ಬ ಅದ್ಭುತ ತಂತ್ರಗಾರಿಕೆಯ ಮನುಷ್ಯ ಎಂದು ಒಪ್ಪಿಕೊಳ್ಳುವಂತಿಲ್ಲ.

ಅದ್ಭುತ ತಂತ್ರಗಾರಿಕೆ ಮನುಷ್ಯ ಎಂದು ಒಪ್ಪಿಕೊಳ್ಳಬೇಕಾಗಿದ್ದ ಕಾಲ ಕಳೆದು ಹೋಗಿದೆ. ಬಿಬಿಎಂಪಿಯಲ್ಲಿ ಸಾಕಷ್ಟು ಸ್ಥಾನಗಳನ್ನು ಹೊಂದಿದ್ದರೂ, ಮೇಯರ್ ಪಟ್ಟ ಪಡೆಯುವಲ್ಲಿ ಬಿಜೆಪಿ ವಿಫಲವಾಗಿರುವುದು ಅಶೋಕ್ ಅವರ ವೈಫಲ್ಯ ಅನ್ನುವುದು ಎಲ್ಲರಿಗೂ ಗೊತ್ತಿದೆ.

ಆದರೆ ಮಂಡ್ಯದಲ್ಲಿ ಬಿಜೆಪಿ ಬಲ ಹೆಚ್ಚಿಸಿಕೊಂಡಿರುವುದರಿಂದ ಡೆಲ್ಲಿ ಹೈಕಮಾಂಡ್ ಅಶೋಕ್ ಮೇಲೆ ವಿಶೇಷ ಪ್ರೀತಿಯನ್ನು ಖಂಡಿತವಾಗಿಯೂ ತೋರುತ್ತದೆ. ಈಗಾಗಲೇ ಬಿಜೆಪಿಯಲ್ಲಿ ಪ್ರಬಲ ಒಕ್ಕಲಿಗ ನಾಯಕನ ಕೊರತೆಯಿದೆ. ಕುಮಾರಸ್ವಾಮಿ ಮತ್ತು ಡಿಕೆಶಿಯನ್ನು ಎದುರಿಸಬಲ್ಲ ಮತ್ತೊಬ್ಬ ಒಕ್ಕಲಿಗ ನಾಯಕ ಬಿಜೆಪಿಗೆ ತುರ್ತಾಗಿ ಬೇಕಾಗಿದೆ. ಆ ಸ್ಥಾನವನ್ನು ಅಶೋಕ್ ತುಂಬ ಬಲ್ಲರು ಅನ್ನುವ ಭರವಸೆಯನ್ನು ಈ ಫಲಿತಾಂಶ ಬಿಜೆಪಿ ಹೈಕಮಾಂಡ್ ಗೆ ರವಾನಿಸಿದೆ.

Advertisements

One Comment on “ಬಿಜೆಪಿಯ ಡಿಕೆಶಿಯಾಗ್ತಾರ ಕಮಲ ಪಾಳಯದ ಸಾಮ್ರಾಟ್…..

  1. Pingback: ಲೋಕಸಭಾ ಚುನಾವಣೆ ಮುನ್ನ ಅರೆಸ್ಟ್ ಆಗ್ತಾರಂತೆ ಡಿಕೆಶಿ….ಹೌದಾ…? – torrentspree

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: