#MeToo ಹಿರೋ ಆಗ್ತಾರ ಗುರುಪ್ರಸಾದ್…?

ಚಂದನವನದಲ್ಲಿ ಸುಂಟರಗಾಳಿಯಾಗಿರುವ #MeToo ಆಂದೋಲನ ಮಠ ಖ್ಯಾತಿಯ ಗುರುಪ್ರಸಾದ್ ಅವರನ್ನು ಸುತ್ತಿಕೊಳ್ಳುವ ಲಕ್ಷಣ ಗೋಚರಿಸುತ್ತಿದೆ.

ಈ ಆಂದೋಲನ ಕುರಿತಂತೆ ಗುರುಪ್ರಸಾದ್ ಕೊಟ್ಟಿರುವ ಹೇಳಿಕೆಗಳಿಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಹಿಂದೆ ನಡೆದ ಘಟನೆಗಳು ಇದೀಗ ತೇಲಲಾರಂಭಿಸಿದೆ.

ಈ ನಡುವೆ ನಿನ್ನೆ ಮಾತನಾಡಿದ ಗುರುಪ್ರಸಾದ್, ಸದ್ಯ ಕನ್ನಡ ಚಿತ್ರರಂಗದಲ್ಲಿ ಸಂಚಲನವನ್ನೇ ಮೂಡಿಸುತ್ತಿರುವ “ಮಿ ಟೂ’ ಕುರಿತು ಹೊಸ ಚಿತ್ರ ಮಾಡುವುದಾಗಿ ಗುರುಪ್ರಸಾದ್‌ ಘೋಷಿಸಿದ್ದರು.

ನಾನವನಲ್ಲ.. ನಾನವನಲ್ಲ.. ನಾನವನಲ್ಲ : ಸಂಗೀತಾ ಭಟ್‌ ಆರೋಪಕ್ಕೆ ಗುರುಪ್ರಸಾದ್ ರಿಯಾಕ್ಷನ್

“ಮೂರು-ನಾಲ್ಕು ತಿಂಗಳಿನಿಂದ ಈ ಚರ್ಚೆಗಳನ್ನು ಗಮನಿಸುತ್ತ ಬಂದಿದ್ದೇನೆ.ಇದನ್ನು ಸಿನಿಮಾ ಮಾಡಲು ಒಂದು ಎಳೆ ಸಿಕ್ಕಿದೆ. ಅದನ್ನೆ ಇಟ್ಟುಕೊಂಡು ಖಂಡಿತ ಇದನ್ನು ಚಿತ್ರ ಮಾಡಿ ಜನರ ಮುಂದೆ ತರುತ್ತೇನೆ.

ಪತಿವ್ರತೆ ಎಂದು ಸಾಬೀತು ಮಾಡಲು #Me Too ಅನ್ನುತ್ತಿದ್ದಾರೆ ಗುರುಪ್ರಸಾದ್ ಆರೋಪ

“ಮಿ ಟೂ’ ಹೆಸರಿನಲ್ಲಿ ಏನೇನು ನಡೆಯುತ್ತಿದೆ, ಏನೇನು ಮಾಡುತ್ತಾರೆ ಅನ್ನೋದನ್ನ ಎಳೆಎಳೆಯಾಗಿ ಬಿಚ್ಚಿಡುತ್ತೇನೆ’ ಅಂದಹಾಗೆ, ಈ ಚಿತ್ರದಲ್ಲಿ ಗುರುಪ್ರಸಾದ್‌ ತಾವೇ ನಾಯಕ ನಟನಾಗಿ ಅಭಿನಯಿಸುವುದಾಗಿ ಹೇಳಿದ್ದರು.

ಪರಿಸ್ಥಿತಿ ನೋಡಿದರೆ ಚಿತ್ರ ಬರುವ ಮುನ್ನ ಗುರುಪ್ರಸಾದ್ ಭರ್ಜರಿ ಸುದ್ದಿಯಾಗುವ ಲಕ್ಷಣ ಗೋಚರಿಸುತ್ತಿದೆ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: