Advertisements

ನಾನವನಲ್ಲ.. ನಾನವನಲ್ಲ.. ನಾನವನಲ್ಲ : ಸಂಗೀತಾ ಭಟ್‌ ಆರೋಪಕ್ಕೆ ಗುರುಪ್ರಸಾದ್ ರಿಯಾಕ್ಷನ್

ನಟಿ ಸಂಗೀತಾ ಭಟ್‌ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಗುರುಪ್ರಸಾದ್‌, “ಆಕೆ ನೇರವಾಗಿ ನನ್ನ ಹೆಸರನ್ನು ಎಲ್ಲಿಯೂ ಪ್ರಸ್ತಾಪಿಸಿಲ್ಲ. ಹೀಗಾಗಿ ಆಕೆಯ ಹೇಳಿಕೆಗೂ ನನಗೂ ಯಾವುದೇ ಸಂಬಂಧವಿಲ್ಲ.

ಎರಡನೇ ಸಲ ಚಿತ್ರದ ಶೂಟಿಂಗ್‌ನಲ್ಲಿ ಬೆನ್ನನ್ನು ತೋರಿಸುವ ದೃಶ್ಯದ ಚಿತ್ರೀಕರಣದ ಸಮಯದಲ್ಲಿ ನನ್ನ ಹೆಂಡತಿ, ಮಕ್ಕಳು ಎಲ್ಲರೂ ಸೆಟ್‌ನಲ್ಲಿ ಇದ್ದರು. ಆಕೆಗೆ ಯಾವುದೇ ಮುಜುಗರವಾಗದ ರೀತಿಯಲ್ಲಿ ಆ ದೃಶ್ಯವನ್ನು ಚಿತ್ರೀಕರಿಸಿದ್ದೇನೆ. ಹಾಗೇನಾದರೂ ಇದ್ದರೆ ಮುಂದೆ ಬಂದು ಹೇಳಲಿ, ನಾನು ಅದನ್ನು ಸಾಬೀತುಪಡಿಸುತ್ತೇನೆ. ಸತ್ಯ ಯಾವುದು ಅಂತ ಜಗತ್ತಿಗೆ ಗೊತ್ತಾಗುತ್ತದೆ’ ಎಂದು ಗುರುಪ್ರಸಾದ್‌ ಸವಾಲೆಸೆದರು.

ಸಂಗೀತಾ ಭಟ್ ನನ್ನ ಗೆಳತಿ. ಅವರಿಗೆ ಶುಭವಾಗಲಿ. ಅವರು ಆರೋಪಿಸಿರುವುದು ಖ್ಯಾತ ನಿರ್ದೇಶಕ ಅಂತ. ಆದರೆ ನಾನು ಇನ್ನೂ ಬೆಳೆಯಬೇಕಿರುವ ಹುಡುಗ. ಅವರು ಎಲ್ಲೂ ನನ್ನ ಹೆಸರು ಹೇಳಿಲ್ಲ. ಹೇಳಿದಾಗ ನಾನು ಉತ್ತರಿಸುವೆ ಎಂದು ಗುರು ಹೇಳಿದ್ದಾರೆ.

Advertisements

Leave a Reply

%d bloggers like this: