ಗುರುವಿಗೆ ಗುಮ್ಮಿತ್ತು ಡಾಲಿ :  ‘ಎರಡನೇ ಸಲ’ದ ಕಿರಿಕ್ ಗೆ ‘ಟಗರು’ ಚಿತ್ರದಲ್ಲಿ ಹೇಳಿದ್ದೇನು..?

ಮಾತು ಆಡಿದರೆ ಹೋಯ್ತು..ಮುತ್ತು ಒಡದರೆ ಹೋಯ್ತು ಅಂತಾರೆ.ಅದು ಇದೀಗ ಗುರುಪ್ರಸಾದ್ ವಿಚಾರದಲ್ಲಿ ಸತ್ಯವಾಗುತ್ತಿದೆ.

ಹಿಂದೊಮ್ಮೆ ಎರಡನೇ ಸಲದ ಚಿತ್ರ ವಿವಾದದಲ್ಲಿ ಧನಂಜಯ್ ವಿರುದ್ಧ ಇದೇ ಗುರುಪ್ರಸಾದ್ ಗುಡುಗಿದ್ದರು. ಧನಂಜಯ್ ಅವರನ್ನು ಐರನ್ ಲೆಗ್, “ಧನಂಜಯ್ ನನಗೆ ಗುರು ದ್ರೋಹ ಮಾಡಿದ್ದಾನೆ. ಅತನಿಗೆ ಆಕ್ಟಿಂಗ್ ಹೇಳಿಕೊಟ್ಟಿದ್ದೇ ನಾನು. ನನ್ನ ಮಾತನ್ನ ಮೀರಿ ಪ್ರಚಾರಕ್ಕೆ ಹೋಗಿದ್ದಾನೆ” ಅಂತೆಲ್ಲಾ ಬೊಬ್ಬೆ ಹೊಡೆದಿದ್ದರು.

ಅದಕ್ಕೆ ಧನಂಜಯ್ ಕೂಡ ಅಷ್ಟೇ ಖಾರವಾಗಿ ಉತ್ತರ ನೀಡಿದ್ದರು, ಮುಂದೆ ಇಬ್ಬರ ನಡುವೆಯೂ ವಾಗ್ವದ ಜೋರಾಗಿಯೇ ನಡೆದು ಸ್ವಲ್ಪ ಸಮಯದವರೆಗೆ ನಡೆದುಕೊಂಡು ಹೋಗಿ ನಂತ್ರ ಇಬ್ಬರ ಜಗಳ ತಣ್ಣಗಾಗಿತ್ತು.

ಇದೀಗ #Me Too ಆಂದೋಲನ ಕುರಿತಂತೆ ಗುರುಪ್ರಸಾದ್ ನೀಡಿದ ಹೇಳಿಕೆ ಮುನ್ನಲೆಗೆ ಬಂದಿದೆ.ಧನಂಜಯ್ ಮತ್ತೆ ಗುರುಪ್ರಸಾದ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹಳೆಯ ಗಾಯ ಇನ್ನೂ ಮಾಸಿಲ್ಲ, ನೋವು ಹಾಗೇ ಇದೆ ಅನ್ನುವುದನ್ನು ತೋರಿಸಿದ್ದಾರೆ.

ಆದರೆ ಇದಕ್ಕಿಂತ ಮುಚೆ ಧನಂಜಯ್ ಅವರು ತಾವು ಮಾಡಿರುವ ಡಾಲಿ ಪಾತ್ರದ ಒಂದು ಸಂಭಾಷಣೆ ಮೂಲಕ ನಿರ್ದೇಶಕ ಗುರುಪ್ರಸಾದ್ ಅವರಿಗೆ ಟಾಂಗ್ ನೀಡಿದ್ದರು.

ಟಗರು’ ಚಿತ್ರದ ಒಂದು ದೃಶ್ಯವೊಂದರಲ್ಲಿ ಡಾಲಿ ಪಾತ್ರಧಾರಿಯಾದ ಧನಂಜಯ್ “ಇಲ್ಲಿ(ರೌಡಿಸಂ) ಯಾರು ಯಾರನ್ನೂ ಬೆಳೆಸಲ್ಲ ನಾವೇ ಬೆಳೀಬೇಕು. ನಮಗೂ ಒಬ್ಬ ಗುರು ಇದ್ದಾನೆ, ಗಾ…****ಡು ಗುರು.. ಹವಾ ಬೆಳ್ಸೋ ಅಂದ್ರೆ ಗಡ್ಡ ಬೆಳ್ಸ್ತಿದ್ದಾನೆ” ಎಂದಿದ್ದರು.

ನಿರ್ದೇಶಕ ಗುರುಪ್ರಸಾದ್‍ ಅವರು ಯಾವಾಗಲೂ ಗಡ್ಡ ಬಿಟ್ಟುಕೊಂಡೆ ಇರುವುದರಿಂದ ಅವರಿಗೆ ಟಾಂಗ್ ಕೊಡಲೆಂದೇ ಈ ಡೈಲಾಗ್ ಹೇಳಲಾಗಿದೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಆಗ ಚರ್ಚೆ ನಡೆದಿತ್ತು.

ಆದರೆ ಈ ಬಗ್ಗೆ ಆಗ ಮಾತನಾಡಿದ್ದ ಗುರುಪ್ರಸಾದ್ “ನನಗೆ ಆ ಬಗ್ಗೆ ಗೊತ್ತಿಲ್ಲ, ನಾನು ಟಗರು ಸಿನಿಮಾ ನೋಡಿಲ್ಲ. ಚಿತ್ರದ ಡೈಲಾಗ್‍ನಲ್ಲಿ ನನಗೆ ಟಾಂಗ್ ಕೊಟ್ಟಿದ್ದಾನೆ ಎಂದು ಯಾರೋ ಹೇಳಿದ್ದನ್ನ ಕೇಳಿದೆ. ಆದರೆ ಈ ಬಗ್ಗೆ ನಾನು ಏನು ಮಾತಾಡೋಲ್ಲ ಏಕೆಂದರೆ ಒಂದು ವೇಳೆ ಚಿತ್ರದಲ್ಲಿ ನನಗೆ ಟಾಂಗ್ ಕೊಟ್ಟಿದ್ದರೆ ಅದು ಸಾಯುವಂತಹ ವಿಲನ್ ಪಾತ್ರ., ಆದ್ದರಿಂದ ನನಗೆ ಆ ಬಗ್ಗೆ ಯಾವುದೇ ಬೇಸರವಿಲ್ಲ” ಎಂದಿದ್ದರು.

ಇದೀಗ ಅದೇ ಡೈಲಾಗ್ ಮತ್ತೆ ವೈರಲ್ ಆಗತೊಡಗಿದೆ.
https://www.youtube.com/watch?v=wjBSo6tkUHk

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

%d bloggers like this: